ಸಕಲೇಶಪುರ: ಕಾಡು ಜಾತಿಯ ಮರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ರಾತ್ರಿ ಪಟ್ಟಣ ಹೊರವಲಯದ ಹೆದ್ದಾರಿಯಲ್ಲಿ ಸಾಗುತಿದ್ದ ಲಾರಿಯನ್ನು ತಡೆದ ದಾಖಲಾತಿ ಪರೀಕ್ಷಿಸಿದ ವೇಳೆ ಅಕ್ರಮವಾಗಿ ಮರಗಳನ್ನು ಸಾಗಿಸುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಮರ ಸಾಗಣೆ ಸಂಬಂಧ ಈ ಲಾರಿಯನ್ನು ನಾಲ್ಕು ಬಾರಿ ಸಕಲೇಶಪುರ ವಲಯ ಅರಣ್ಯ ಇಲಾಖೆ ವಶಕ್ಕೆ ಪಡೆದು ಬಿಡುಗಡೆ ಮಾಡಿದೆ ಎಂದು ವಲಯ ಅರಣ್ಯಾಧಿಕಾರಿ ಹೇಳಿದ್ದಾರೆ.