ಬಸವರಾಜ ಗುರಿಕಾರಗೆ ನೌಕರರಿಂದ ಅಭಿನಂದನೆ

| Published : Jan 05 2025, 01:35 AM IST

ಸಾರಾಂಶ

ಉತ್ತರ ಭಾರತ ಪ್ರಾಬಲ್ಯದ ಮಧ್ಯೆ ದಕ್ಷಿಣ ಭಾರತದವರು ರಾಷ್ಟ್ರಮಟ್ಟದ ಹುದ್ದೆ ಪಡೆದಿರುವುದು ಸಾಮಾನ್ಯ ವಿಷಯವಲ್ಲ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸ್ಥಾನ ಪಡೆಯುವುದು ಕಷ್ಟವಿದೆ. ಆದರೆ, ಗುರಿಕಾರ ಅವರು ತಮ್ಮ ನಿರಂತರ ಸಂಘಟನೆ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಧಾರವಾಡ:

ಬಸವರಾಜ ಗುರಿಕಾರ ತಮ್ಮ ಸತತ ಸಂಘಟನೆ, ಕ್ರಿಯಾಶೀಲತೆ ಮತ್ತು ಕಾರ್ಯದಕ್ಷತೆಯಿಂದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ರಾಷ್ಟೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ರಾಜ್ಯಕ್ಕೆ ಸಂದ ಗೌರವ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಇಲ್ಲಿಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಗುರಿಕಾರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಉತ್ತರ ಭಾರತ ಪ್ರಾಬಲ್ಯದ ಮಧ್ಯೆ ದಕ್ಷಿಣ ಭಾರತದವರು ರಾಷ್ಟ್ರಮಟ್ಟದ ಹುದ್ದೆ ಪಡೆದಿರುವುದು ಸಾಮಾನ್ಯ ವಿಷಯವಲ್ಲ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸ್ಥಾನ ಪಡೆಯುವುದು ಕಷ್ಟವಿದೆ. ಆದರೆ, ಗುರಿಕಾರ ಅವರು ತಮ್ಮ ನಿರಂತರ ಸಂಘಟನೆ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.ಅಭಿನಂದನೆ ಸ್ವೀಕರಿಸಿದ ಬಸವರಾಜ ಗುರಿಕಾರ, ನಾನು ರಾಷ್ಟ್ರೀಯ ಅಧ್ಯಕ್ಷನಾಗಲು ಜಿಲ್ಲೆಯ ಎಲ್ಲ ಶಿಕ್ಷಕರ, ನೌಕರರ ಬೆಂಬಲ, ಪ್ರೋತ್ಸಾಹವೇ ಕಾರಣ. ನಿಮ್ಮೆಲ್ಲರ ಶಕ್ತಿಯಿಂದ ನಾನು ಈ ಸ್ಥಾನ ಪಡೆಯಲು ಸಾಧ್ಯವಾಯಿತು. ನಾನು ನೆಪಮಾತ್ರ. ನಿಜವಾದ ನಾಯಕರು ನೀವುಗಳು ಎಂದರು.

ಇದೇ ವೇಳೆ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ಕಾರ್ಯಕಾತಿ ಸಮಿತಿ ಸದಸ್ಯರಿಗೆ, ಪದಾಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ಶಾಸಕ ಎನ್.ಎಚ್. ಕೋನರಡ್ಡಿ ವಿತರಿಸಿದರು.

ನೌಕರರ ಸಂಘದ ಚುನಾವಣಾಧಿಕಾರಿಗಳಾಗಿ ಕೆಲಸ ನಿರ್ವಹಿಸಿದ ಗಿರೀಶ ಪಾಟೀಲ, ಕಲ್ಲಪ್ಪ ಲಟ್ಟಿ ಅವರನ್ನು ಸನ್ಮಾನಿಸಲಾಯಿತು. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ಧನಗೌಡರ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಮಂಜುನಾಥ ಯಡಳ್ಳಿ, ವಿ.ಎಫ್. ಚುಳಕಿ, ಆರ್.ಬಿ. ಲಿಂಗದಾಳ, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ರಾಜಶೇಖರ ಬಾಣದ, ಮಲ್ಲಿಕಾರ್ಜುನ ಸೊಲಗಿ, ಲಕ್ಷ್ಮಣ ರಜಪೂತ, ವೈ.ಎಚ್. ಬಣವಿ, ಗಿರೀಶ ಚೌಡಕಿ, ರಾಜಶೇಖರ ಹೊನ್ನಪ್ಪನವರ, ಡಾ. ಸುರೇಶ ಹಿರೇಮಠ, ಆರ್.ಆರ್. ಬಿರಾದಾರ, ಮಂಜುನಾಥ ಜಂಗಳಿ, ಮಾರುತಿ ನಾಗಾವಿ, ನಾರಾಯಣ ಭಜಂತ್ರಿ, ಜಿ.ಎಚ್. ಬಶೆಟ್ಟಿ ಸೇರಿದಂತೆ ಇತರರು ಇದ್ದರು.