ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರಿಗೆ ಛಲವಾದಿ ಮಹಾ ಸಭಾದಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾಧ್ಯಕ್ಷ ಶೇಷಪ್ಪ ತಿಳಿಸಿದರು.ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಛಲವಾದಿ ನಾರಾಯಣಸ್ವಾಮಿಯವರು ಹೋರಾಟಗಾರರಾಗಿ ತಮ್ಮ ಬದುಕನ್ನು ಸವೆಸಿದ್ದಾರೆ. ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಹಾಗೂ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ನೇಮಕ ಮಾಡಿರುವುದು ಸಮಾಜಕ್ಕೆ ಸಿಕ್ಕ ದೊಡ್ಡದಾದ ಗೌರವಾಗಿದೆ. ಇವರನ್ನು ಸನ್ಮಾನಿಸುವುದು ಸಮಾಜದ ಅದ್ಯ ಕರ್ತವ್ಯವಾಗಿದೆ ಎಂದರು.ವಿಧಾನ ಪರಿಷತ್‍ನ ಪ್ರತಿ ಪಕ್ಷದ ನಾಯಕರಾಗಿ ಆ. 18 ರಂದು ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿರುವ ಅವರನ್ನು ಸಮಾಜದ ವತಿಯಿಂದ ಅಭಿಂದಿಸಲಾಗುತ್ತದೆ. ಅಂದು ಮಧ್ಯಾಹ್ನ 2.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ಸಮಾರಂಭ ನಡೆಯಲಿದ್ದು ಇದರಲ್ಲಿ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ನಗರದ ಅಂಬೇಡ್ಕರ್, ಮದಕರಿನಾಯಕ ಹಾಗೂ ಓನಕೆ ಒಬವ್ವ ಪ್ರತಿಮೆಗಳಿಗೆ ಮಾಲಾರ್ಪಣೆ ಮತ್ತು ವಿವಿಧ ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಆರ್ಶಿವಾದವನ್ನು ಪಡೆಯಲಿದ್ದಾರೆ.
-----ಸಮಾಜದ ಮುಖಂಡರಾದ ಮುಸ್ಟೂರು ಚನ್ನಬಸಪ್ಪ, ಭಾರ್ಗವಿ ದ್ರಾವಿಡ್, ಶಿವಪ್ರಸಾದ್ ನವೀನ್, ಪಿಳ್ಳೇಕೇರನ ಹಳ್ಳಿ ಗ್ರಾಪಂ ಸದಸ್ಯ ಚನ್ನಪ್ಪ ಭಾಗವಹಿಸಿದ್ದರು. ---------------17 ಸಿಟಿಡಿ7ಛಲವಾದಿ ನಾರಾಯಣಸ್ವಾಮಿ ಅಭಿನಂದಿಸುವ ಕಾರ್ಯಕ್ರಮ ಕುರಿತು ಶೇಷಣ್ಣ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.