ಕುಶಾಲನಗರದಲ್ಲಿ ಬಾಲ ಪ್ರತಿಭೆ ಚಿನ್ಮಿತ್‌ಗೆ ಅಭಿನಂದನೆ

| Published : May 18 2025, 01:28 AM IST

ಕುಶಾಲನಗರದಲ್ಲಿ ಬಾಲ ಪ್ರತಿಭೆ ಚಿನ್ಮಿತ್‌ಗೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಚೆಸ್‌ ಆಟದಲ್ಲಿ ಎರಡು ಬಾರಿ ಇಂಡಿಯಾ ರೆಕಾರ್ಡ್‌ ಮತ್ತು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ದಾಖಲೆ ನಿರ್ಮಿಸಿರುವ ಕುಶಾಲನಗರ ಪಟ್ಟಣದ ಕೆ.ಎಸ್‌. ಚಿನ್ಮಿತ್‌ ಬಾಲ ಪ್ರತಿಭೆಯನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಚೆಸ್ ಆಟದಲ್ಲಿ ಎರಡು ಬಾರಿ ಇಂಡಿಯಾ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿರುವ ಕುಶಾಲನಗರ ಪಟ್ಟಣದ ಕೆ.ಎಸ್.ಚಿನ್ಮಿತ್ ಬಾಲ ಪ್ರತಿಭೆಯನ್ನು ಆದಿ ಚುಂಚನಗಿರಿ ಮಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಕುಶಾಲನಗರದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಕುಶಾಲನಗರದಲ್ಲಿ ಆರಂಭಗೊಂಡ ಜಿಲ್ಲಾ ಗೌಡ ಯುವ ವೇದಿಕೆಯ ವತಿಯಿಂದ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯ ಆರಂಭೋತ್ಸವದಲ್ಲಿ ಬಾಲ ಪ್ರತಿಭೆ ಚಿನ್ಮಿತ್ ಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಬಾಲ ಪ್ರತಿಭೆಯ ಸಾಧನೆಯ ಬಗ್ಗೆ ಸ್ವಾಮೀಜಿ ಶ್ಲಾಘಿಸಿದರು.

ಈ ಸಂದರ್ಭ ಶ್ರೀ ಶಂಭುನಾಥ ಸ್ವಾಮೀಜಿ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಶಾಸಕ ಡಾ ಮಂತರ್ ಗೌಡ, ಜಿಲ್ಲಾ ಗೌಡ ಯುವ ವೇದಿಕೆಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಸೇರಿದಂತೆ ಬಾಲಕ ಪೋಷಕರಾದ ವಕೀಲ ಕೆ.ಪಿ.ಶರತ್ ಮತ್ತು ಚಂದ್ರಕಲಾ ಹಾಗೂ ಅಜ್ಜಿ ಪದ್ಮ‌ ಪುರುಷೋತ್ತಮ್ ಇದ್ದರು.

ಈ ವಿದ್ಯಾರ್ಥಿಯು ಕೂಡ್ಲೂರು ಗ್ರಾಮದ ಯೂನಿಕ್ ಅಕಾಡೆಮಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.