ಸಾರಾಂಶ
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು, ಉಡುಪಿಯ ಸಾಂಸ್ಕೃತಿಕ ಹರಿಕಾರ ಎಂದೇ ಖ್ಯಾತರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 75 ವರ್ಷ ತುಂಬಿದ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು, ಉಡುಪಿಯ ಸಾಂಸ್ಕೃತಿಕ ಹರಿಕಾರ ಎಂದೇ ಖ್ಯಾತರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 75 ವರ್ಷ ತುಂಬಿದ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ. ಆರ್.ಎನ್.ಭಟ್ ಅವರನ್ನು ಸಾಂಪ್ರದಾಯಿಕವಾಗಿ ಗೌರವಿಸಲಾಯಿತು. ನಂತರ ಮಾತನಾಡಿದ ಡಾ.ಭಟ್, ಸಮಾಜಸೇವೆ ಮತ್ತು ಆತಿಥ್ಯ ಹೇಗೆ ಮಾಡಬೇಕು ಎಂಬುದನ್ನು ತಲ್ಲೂರು ಶಿವರಾಮ ಶೆಟ್ಟಿ ಅವರಿಂದ ಕಲಿಯಬೇಕು. ಅವರ ಸಮಾಜಮುಖಿ ಸೇವಾಕಾರ್ಯಗಳು ಹೀಗೆಯೇ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಲಯನ್ ಎನ್. ಎಂ. ಹೆಗಡೆ ಅವರು ಶುಭಾಶಂಸನೆಗೈದರು. ಅವರ ಸೇವೆಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಲಿ ಎಂದು ಆಶಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ ಮತ್ತಿತರರು ಡಾ.ತಲ್ಲೂರು ಅವರನ್ನು ಅಭಿನಂದಿಸಿ ಮಾತನಾಡಿದರು.ತಲ್ಲೂರುರ ಪತ್ನಿ ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಎಸ್ ಶೆಟ್ಟಿ, ಪ್ರೇಮಲತಾ - ನಿತ್ಯಾನಂದ ಶೆಟ್ಟಿ, ಹೇಮಲತಾ - ಸುನಿಲ್ ಕುಮಾರ್ ಶೆಟ್ಟಿ, ಡಾ. ಅನ್ನಪೂರ್ಣೇಶ್ವರಿ - ಸಂದೇಶ್ ಕುಮಾರ್ ಶೆಟ್ಟಿ, ಸೌಜನ್ಯ ಎಸ್. ಶೆಟ್ಟಿ ಅಥರ್ವ್ ಎಸ್. ಶೆಟ್ಟಿ, ಅಂಕಿತ್ ಎಸ್. ಶೆಟ್ಟಿ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.