ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುಮಹಿಳಾ ನೌಕರರಿಗೆ ಋತುಚಕ್ರದ ವೇತನಸಹಿತ ರಜೆಗೆ ಆಗ್ರಹಿಸಿ ಮೊದಲು ಧ್ವನಿ ಎತ್ತಿದ ಶಾಸಕ ಎಚ್. ಕೆ. ಸುರೇಶ್‌ಗೆ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ಸರ್ಕಾರ ತಮಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ರಾಜ್ಯ ಸದಸ್ಯತ್ವವನ್ನು ನೀಡಿದ್ದು, ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ಮಟ್ಟದ ಅಧಿಕಾರಿಗಳಲ್ಲಿ ಚರ್ಚೆ ನಡೆಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಕೆಲ ಮಹಿಳಾ ಸರ್ಕಾರಿ ನೌಕರರು ಋತುಚಕ್ರದ ರಜೆ ಬಗ್ಗೆ ನಮ್ಮಲ್ಲಿ ಪ್ರಸ್ತಾಪಿಸಿದ್ದರು. ಈ ಕಾರಣದಿಂದ ತಾವು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭೆಯಲ್ಲಿ ಚರ್ಚೆ ನಡೆಸಿದ್ದು, ಮಹಿಳಾ ನೌಕರರಿಗೆ ಪ್ರತಿ ಮಾಸಿಕ ಋತುಚಕ್ರದ ರಜೆಯನ್ನು ವೇತನ ಸಹಿತ ನೀಡಬೇಕು ಎಂದು ಒತ್ತಾಯಿಸಿದ್ದೆ. ಬಳಿಕ ಸರ್ಕಾರ ನಮ್ಮ ಧ್ವನಿಗೆ ಸ್ಪಂದನೆ ನೀಡುವ ಮೂಲಕ ಈ ಯೋಜನೆ ಜಾರಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂತ್ರಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಭಾರತೀಯ ವಿದ್ಯಾರ್ಥಿ ಪರಿಷತ್ತು ಬೇಲೂರು ತಾಲೂಕು ಘಟಕದ ಅಧ್ಯಕ್ಷ ಹುಲ್ಲೇನಹಳ್ಳಿ ರಾಜು ಮಾತನಾಡಿದರು.ಈ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿ ಪರಿಷತ್ತು ತಾಲೂಕು ಘಟಕದ ಪದಾಧಿಕಾರಿಗಳಾದ ಶಶಿಧರ್ ಮೌರ್ಯ, ಮಂಜುನಾಥ್, ತೀರ್ಥಕುಮಾರ್ ಶಂಭುಗನಹಳ್ಳಿ, ಸತೀಶ್, ಎಂ.ಜೆ.ನಿಂಗರಾಜ್, ರಾಜು ಹಾಜರಿದ್ದರು.