ಯುಪಿಎಸ್ಸಿ ಸಾಧಕ ಸಂತೋಷಗೆ ಸನ್ಮಾನ

| Published : May 14 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಿಕೋಟಾ:ಹಿಂದೆ ಗುರು, ಮುಂದೆ ಗುರಿ ಇದ್ದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡಬಹುದು ಎಂದು ಬಬಲಾದಿ ಶಾಖಾಮಠದ ರಾಂಪೂರ ವಿದ್ಯಾನಂದಶ್ರೀ ಹೇಳಿದರು. ತಾಲೂಕಿನ ಕನಮಡಿ ಗ್ರಾಮದಲ್ಲಿ ರವಿವಾರ ಸಂಜೆ ಯುಪಿಎಸ್ಸಿ ಪರೀಕ್ಷೆಯಲ್ಲಿ 641ನೇ ರ್‍ಯಾಂಕ್‌ ಪಡೆದ ಗ್ರಾಮದ ಸಂತೋಷ ಶ್ರೀಕಾಂತ್‌ ಶಿರಾಡೋಣ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಕೋಟಾ:ಹಿಂದೆ ಗುರು, ಮುಂದೆ ಗುರಿ ಇದ್ದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡಬಹುದು ಎಂದು ಬಬಲಾದಿ ಶಾಖಾಮಠದ ರಾಂಪೂರ ವಿದ್ಯಾನಂದಶ್ರೀ ಹೇಳಿದರು.

ತಾಲೂಕಿನ ಕನಮಡಿ ಗ್ರಾಮದಲ್ಲಿ ರವಿವಾರ ಸಂಜೆ ಯುಪಿಎಸ್ಸಿ ಪರೀಕ್ಷೆಯಲ್ಲಿ 641ನೇ ರ್‍ಯಾಂಕ್‌ ಪಡೆದ ಗ್ರಾಮದ ಸಂತೋಷ ಶ್ರೀಕಾಂತ್‌ ಶಿರಾಡೋಣ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಯುಪಿಎಸ್ಸಿ ಸಾಧಕ ಸಂತೋಷ ಶಿರಾಡೋಣ ಮಾತನಾಡಿ, ನನ್ನ ಸಾಧನೆಗೆ ನನ್ನ ಕುಟುಂಬವೇ ಪ್ರೇರಣೆ ಹಾಗೂ ಸತತ ವಿದ್ಯಾಭ್ಯಾಸ ಮತ್ತು ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಸುಭಾಸಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನೇತೃತ್ವವನ್ನು ಹೊನವಾಡದ ವವಚನಕಾರ ಶ್ರೀ ಬಾಬುರಾವ್ ಮಹಾರಾಜರ ವಹಿಸಿದ್ದರು. ಎನ್.ಕೆ.ಬಿಳ್ಳೂರ, ಎಸ್.ಎಸ್.ಶಿರಡೋಣ ವಕೀಲರು, ಮಾಜಿ ಯೋಧ ಗುರು ಶೀಳಿನ, ಅಶೋಕ ಶಿರಾಡೋಣ, ಮಾಂತು ಶಿರಾಡೋಣ, ಸಂತೋಷ ಶೀಳಿನ, ಮಲ್ಲಿಕಾರ್ಜುನ ಶೀಳಿನ, ವಿಜಯ್ ಮಠಪತಿ, ಸುನಿಲ ಬಿರಾದಾರ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಚೆನ್ನಯ್ಯಾ ಮಠಪತಿ ನೆರವೇರಿಸಿದರು.