ರಾಮಮಂದಿರ ನಿರ್ಮಾಣ ಪ್ರಧಾನಿಗಳಿಗೆ ಅಭಿನಂದನಾ ಪತ್ರ ರವಾನೆ

| Published : Feb 11 2024, 01:52 AM IST

ರಾಮಮಂದಿರ ನಿರ್ಮಾಣ ಪ್ರಧಾನಿಗಳಿಗೆ ಅಭಿನಂದನಾ ಪತ್ರ ರವಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ಅಖಂಡ ಭಾರತೀಯ ಕನಸು ನನಸು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು ಅಭಿನಂದನಾ ಪತ್ರ ರವಾನಿಸಿದರು.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ಅಖಂಡ ಭಾರತೀಯ ಕನಸು ನನಸು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು ಅಭಿನಂದನಾ ಪತ್ರ ರವಾನಿಸಿದರು. ಪಟ್ಟಣದ ಅಂಚೆ ಕಚೇರಿ ಎದುರು ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಕೂಗಿ ಸುಮಾರು ಎರಡುವರೆ ಸಾವಿರ ಅಭಿನಂದನಾ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಿಕೊಟ್ಟರು.ನಂತರ ಪೀಹಳ್ಳಿ ರಮೇಶ್ ಮಾತನಾಡಿ, ಸುಮಾರು 500 ವರ್ಷಗಳ ಭಾರತೀಯರ ಕನಸ್ಸಾಗಿದ್ದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣ ಹಾಗೂ ಬಾಲರಾಮನ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ಇಡೀ ಭಾರತೀಯರ ಭಾವನೆಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಹೀಗಾಗಿ 2 ಸಾವಿರದ 500 ಅಭಿನಂದನಾ ಪತ್ರಗಳನ್ನು ಬರೆದು ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುತ್ತಿದೆ. ಹಾಗಾಗಿ ಮತ್ತೊಮ್ಮೆ 2024ಕ್ಕೆ ನರೇಂದ್ರ ಮೋದಿ ಅವರನ್ನೇ ಪ್ರಧಾನಮಂತ್ರಿಗಳಾಗಿ ದೇಶದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗಿ ಎಂದು ಆಶಯ ವ್ಯಕ್ತಪಡಿಸಿದರು.

ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿದ ಕಾರ್ಯಕರ್ತರು ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಗೋಡೆ ಬರಹ ಅಭಿಯಾನ ನಡೆಸಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಸಂಚಾಲಕರಾದ ಉಮೇಶ್, ನಗರ ಪ್ರಧಾನ ಕಾರ್ಯದರ್ಶಿ, ಪ್ರಭಾಕರ್, ಮಾಜಿ ಪುರಸಭಾ ಸದಸ್ಯ ಪುಟ್ಟರಾಮು, ಕಿರಣ್‌ಸಿಂಗ್, ಮಂಜುನಾಥ್, ಚಿಂದಗಿರಿಕೊಪ್ಪಲು ಮಂಜು, ಸ್ವಾಮಿ, ಸೇರಿದಂತ ಇತರರು ಇದ್ದರು.