ಕಾಂಗ್ರೆಸ್‌ ಅಂದ್ರೆ ತೋಡೋ ಪಾರ್ಟಿ: ರವಿಕುಮಾರ್‌

| Published : Feb 03 2024, 01:48 AM IST

ಸಾರಾಂಶ

ಬಾಗಲಕೋಟೆ: ಈ ಕಾಂಗ್ರೆಸ್‌ನವರಿಗೆ ಬುದ್ಧಿಭ್ರಮಣೆಯಾಗಿದೆ. ಒಂದು ಕಡೆ ರಾಹುಲ್ ಗಾಂಧಿ ಭಾರತ ಜೋಡೋ ಅಂತಾರೆ, ಮತ್ತೊಂದು ಕಡೆ ಡಿ.ಕೆ.ಸುರೇಶ ಭಾರತ ತೋಡೋ ಎನ್ನುತ್ತಾರೆ ಎಂದು ಬಿಜೆಪಿ ಮುಖಂಡ ಎನ್‌.ರವಿಕುಮಾರ್‌ ಕುಟುಕಿದರು. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಈ ಹಿಂದೆಯೂ ಭಾರತ ತೋಡೋ ಮಾಡಿದ್ದಾರೆ. ಹಿಂದೂಸ್ಥಾನ್ -ಪಾಕಿಸ್ತಾನ ಎಂದು ವಿಭಜಿಸಿದವರು ಇವರೇ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಈ ಕಾಂಗ್ರೆಸ್‌ನವರಿಗೆ ಬುದ್ಧಿಭ್ರಮಣೆಯಾಗಿದೆ. ಒಂದು ಕಡೆ ರಾಹುಲ್ ಗಾಂಧಿ ಭಾರತ ಜೋಡೋ ಅಂತಾರೆ, ಮತ್ತೊಂದು ಕಡೆ ಡಿ.ಕೆ.ಸುರೇಶ ಭಾರತ ತೋಡೋ ಎನ್ನುತ್ತಾರೆ ಎಂದು ಬಿಜೆಪಿ ಮುಖಂಡ ಎನ್‌.ರವಿಕುಮಾರ್‌ ಕುಟುಕಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಈ ಹಿಂದೆಯೂ ಭಾರತ ತೋಡೋ ಮಾಡಿದ್ದಾರೆ. ಹಿಂದೂಸ್ಥಾನ್ -ಪಾಕಿಸ್ತಾನ ಎಂದು ವಿಭಜಿಸಿದವರು ಇವರೇ. ಆರ್ಟಿಕಲ್ 370 ಮಾಡಿದವರ್‍ಯಾರು? ನೀವೆ (ಕಾಂಗ್ರೆಸ್). 1971ರಲ್ಲಿ ಬಾಂಗ್ಲಾದೇಶ ಮಾಡಿದವರು ನೀವೇ (ಕಾಂಗ್ರೆಸ್). ಈಗ ಮತ್ತೊಮ್ಮೆ ಭಾರತವನ್ನು ಒಡೆಯಲು ಹೊರಟಿದ್ದೀರಿ. ಕಾಂಗ್ರೆಸ್ ಅಂದ್ರೇನೆ ಅದೊಂದು ತೋಡೋ ಪಾರ್ಟಿ, ಕಾಂಗ್ರೆಸ್ ಮತಲಬ್ ತೋಡೋ ಪಾರ್ಟಿ. ಬಿಜೆಪಿ ಅಂದ್ರೆ ಜೋಡೋ ಪಾರ್ಟಿ. ರಾಮ ಮಂದಿರ ಮೂಲಕ ಭಾರತವನ್ನು ಒಂದುಗೂಡಿಸಿದ್ದು ಬಿಜೆಪಿ ಎಂದು ಹೇಳಿದರು.

ಹೈಕಮಾಂಡ್ ಹೇಳಿದಂಗೆ ಕೇಳಲಿಕ್ಕೆ ನಾವು ಫುಟ್ಬಾಲ್ ಅಲ್ಲ ಎಂಬ ಕಾಂಗ್ರೆಸ್ ಮುಖಂಡ ಪ್ರಕಾಶ್ ಹುಕ್ಕೇರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕಾಶ್ ಹುಕ್ಕೇರಿ, ಕೆ.ರಾಜಣ್ಣನಂಥ ಕಾಂಗ್ರೆಸ್ ಹಿರಿಯ ನಾಯಕರು ಅಂದರೆ ಅವರ ಹೈಕಮಾಂಡ್ ಹೇಗಿರಬಹುದು ಎಂದು ನೀವೇ ಊಹೇ ಮಾಡಿ. ಅವರು ಹೇಳಿದ್ದೆಲ್ಲ ಸರಿ ಇದೆ ಎಂದು ಹೇಳಿದರು.