ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಸಿ. ಲಲಿತ್ ರಾಘವ್ ದೀಪು ಅವರು ಚನ್ನರಾಯಪಟ್ಟಣದ ಧನಲಕ್ಷ್ಮಿ ಚಿತ್ರಮಂದಿರ ಪಕ್ಕದ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಕಾಂಗ್ರೆಸ್ ಭವನದ ಮಹಡಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ಭವನದಿಂದ ಪಕ್ಷದ ಎಲ್ಲಾ ಚಟುವಟಿಕೆಗಳು ಚುರುಕಾಗಿ ನಡೆಸಲಿದ್ದು ಮುಂಬರುವ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಪೂರ್ವ ಸಿದ್ಧತೆಯನ್ನು ಸಹ ಮಾಡಿಕೊಳ್ಳುತ್ತಿದ್ದು ಪಕ್ಷ ಯಾರಿಗೇ ಟಿಕೇಟ್ ನೀಡಿದರೂ ಸಹ ಒಟ್ಟಾಗಿ ಎಲ್ಲಾ ನಾಯಕರು ಕೆಲಸ ಮಾಡುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಸಿ. ಲಲಿತ್ ರಾಘವ್ ದೀಪು ಅವರು ಚನ್ನರಾಯಪಟ್ಟಣದ ಧನಲಕ್ಷ್ಮಿ ಚಿತ್ರಮಂದಿರ ಪಕ್ಕದ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಕಾಂಗ್ರೆಸ್ ಭವನದ ಮಹಡಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯಲ್ಲೇ ಒಂದು ವಿಶಿಷ್ಟವಾದ ಕಾಂಗ್ರೆಸ್ ಭವನವನ್ನು ಕಟ್ಟಲು ಮುಂದಾಗಿದ್ದು ರಾಜ್ಯ ನಾಯಕರ ನಿರ್ದೇಶನದ ಮೇರೆಗೆ ಭವನ ನಿರ್ಮಾಣದ ಹಂತದಲ್ಲಿದ್ದು ಕಾಂಗ್ರೆಸ್ ಪಕ್ಷ ತಾಲೂಕಿನಲ್ಲಿ ಸದೃಢಗೊಳ್ಳುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಚಟುವಟಿಕೆಗಳು ನಡೆಸಲು ಒಂದು ಸೂರು ಅವಶ್ಯಕತೆಯಿದೆ ಎಂದು ನಾಯಕರಿಗಳಿಗೆ ಮನವಿ ಮಾಡಿದ್ದೆವು ಅದನ್ನು ಮನಗಂಡು ಭವನ ನಿರ್ಮಾಣ ಮಾಡಲು ಮುಂದಾಗಿದ್ದು ಈಗಾಗಲೇ ಬಹುತೇಕ ಕೆಲಸಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಭವನ ಉದ್ಘಾಟನೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರನ್ನು ಕರೆಸಿ ಉದ್ಘಾಟಿಸಲಾಗುತ್ತದೆ, ಭವನದಿಂದ ಪಕ್ಷದ ಎಲ್ಲಾ ಚಟುವಟಿಕೆಗಳು ಚುರುಕಾಗಿ ನಡೆಸಲಿದ್ದು ಮುಂಬರುವ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಪೂರ್ವ ಸಿದ್ಧತೆಯನ್ನು ಸಹ ಮಾಡಿಕೊಳ್ಳುತ್ತಿದ್ದು ಪಕ್ಷ ಯಾರಿಗೇ ಟಿಕೇಟ್ ನೀಡಿದರೂ ಸಹ ಒಟ್ಟಾಗಿ ಎಲ್ಲಾ ನಾಯಕರು ಕೆಲಸ ಮಾಡುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್, ಕೆ. ಜಿ. ಬಾಬು, ಮಧುಸಾಣೇನಹಳ್ಳಿ, ಗುಲಸಿಂದ ಜನಾರ್ದನ್, ಮಡಬ ಲಕ್ಷ್ಮಣ್, ನಾಗೇಶ್ ಮತ್ತಿತರಿದ್ದರು.