ಬಾಂಬ್ ಬ್ಲಾಸ್ಟ್ ಮಾಡಿದವರು ಕಾಂಗ್ರೆಸ್ ಬ್ರದರ್ಸ್ ಆಗ್ತಾರೆ

| Published : Oct 17 2024, 12:48 AM IST

ಸಾರಾಂಶ

ಬಾಂಬ್ ಬ್ಲಾಸ್ಟ್ ಮಾಡಿದವರು ಕಾಂಗ್ರೆಸ್ ಸರ್ಕಾರಕ್ಕೆ ಬ್ರದರ್ಸ್ ಆಗುತ್ತಾರೆ. ಪಾಕಿಸ್ತಾನಕ್ಕೆ ಜೈ ಅಂದವರು ದೇಶಭಕ್ತರಾಗುತ್ತಾರೆ. ಕದ್ದ ಮಾಲು ವಾಪಾಸ್ಸು ಕೊಟ್ಟವರು ಅಪರಾಧಿಗಳಲ್ಲ ಎಂಬುದು ಕಾಂಗ್ರೆಸ್ ವಿವರಣೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗಬಾಂಬ್ ಬ್ಲಾಸ್ಟ್ ಮಾಡಿದವರು ಕಾಂಗ್ರೆಸ್ ಸರ್ಕಾರಕ್ಕೆ ಬ್ರದರ್ಸ್ ಆಗುತ್ತಾರೆ. ಪಾಕಿಸ್ತಾನಕ್ಕೆ ಜೈ ಅಂದವರು ದೇಶಭಕ್ತರಾಗುತ್ತಾರೆ. ಕದ್ದ ಮಾಲು ವಾಪಾಸ್ಸು ಕೊಟ್ಟವರು ಅಪರಾಧಿಗಳಲ್ಲ ಎಂಬುದು ಕಾಂಗ್ರೆಸ್ ವಿವರಣೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಬಗ್ಗೆ ರಾಜ್ಯದ ಜನರಲ್ಲಿ ತಿರಸ್ಕಾರ ಮೂಡಿದೆ. ಅವರ ಅಡಳಿತದಲ್ಲಿ ಅಲಿಖಿತ ಕಾನೂನುಗಳೇ ಹೆಚ್ಚಾಗುತ್ತಿವೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರದಿಂದ ಕೂಡಿದ್ದು, ರಾಜ್ಯವನ್ನು ಸಂಪೂರ್ಣ ಲೂಟಿ ಹೊಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಕೇವಲ ವಾಲ್ಮೀಕಿ ನಿಗಮ ಮಾತ್ರವಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ, ಕಾರ್ಮಿಕ ಕಲ್ಯಾಣ ನಿಧಿ ಹೀಗೆ ಅನೇಕ ನಿಗಮಗಳಲ್ಲಿ ಭ್ರಷ್ಟಚಾರ ನಡೆದಿದೆ. ಅಲ್ಲಿನ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ಲೂಟಿ ಮಾಡುತ್ತಿದ್ದಾರೆ. ಕೂಡಲೇ ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಈಗ ಭ್ರಷ್ಟಚಾರದ ಸರದಿ ಮಲ್ಲಿಕಾರ್ಜುನ ಖರ್ಗೆಯವರದ್ದಾಗಿದೆ. ಜಾಗ ಪಡೆದುಕೊಂಡು ಈಗ ಅವರು ಕೂಡ ವಾಪಾಸ್ಸು ಕೊಟ್ಟಿದ್ದಾರೆ. ಯಾಕೆ ಇದ್ದಕ್ಕಿದಂತೆ 5 ಎಕರೆ ಜಾಗ ವಾಪಾಸ್ಸು ಕೊಟ್ಟರು? ಭೂಮಿ ಕಬಳಿಸುವುದರಲ್ಲಿ ಇವರೆಲ್ಲ ನಿಸ್ಸೀಮರು, ಮೊದಲು ಆರೋಪ ಬಂದಾಗ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದಿದ್ದರು. ಈಗ ಈ ಇಬ್ಬರು ಕಾಂಗ್ರೆಸ್ ನಾಯಕರು ಜಗ್ಗಿದೇಕೆ, ಬಗ್ಗಿದ್ದೇಕೆ? ತನಿಖೆಗಾಗಿ ಸಿಬಿಐಗೆ ಕೊಟ್ಟ ಪ್ರಕರಣವನ್ನು ವಾಪಾಸ್ಸು ಪಡೆಯುತ್ತಾರೆ ಎಂದು ದೂರಿದರು.

ರಾಜ್ಯ ಸರ್ಕಾರವನ್ನು ವಜಾ ಮಾಡಲು ಪತ್ರ:ರಾಜ್ಯದಲ್ಲಿನ ಕಾಂಗ್ರೆಸ್ ಪರಿಸ್ಥಿತಿಯ ಬಗ್ಗೆ ಮತ್ತು ಅಲ್ಲಿನ ಭ್ರಷ್ಟಚಾರದಲ್ಲಿ ಮುಳುಗಿರುವ ಸಚಿವರ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇವೆ. ಕೂಡಲೇ ಕರ್ನಾಟಕ ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯಿಸಿದ್ದೇನೆ ಎಂದರು.ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆಯಲಾಗಿದೆ. ಯಾರು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿದರೋ, ಅವರನ್ನೇ ರಾಷ್ಟ್ರಭಕ್ತರು ಎಂದು ಪರಿಗಣಿಸಲಾಗಿದೆ. ಇದೇ ಕಾಂಗ್ರೆಸ್ ನವರ ನೀತಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಪ್ರಮುಖರಾದ ಜ್ಯೋತಿಪ್ರಕಾಶ್, ಎಸ್. ದತ್ತಾತ್ರಿ, ಚಂದ್ರಶೇಖರ್, ಶಿವರಾಜ್, ಮಾಲ ತೇಶ್, ವಿನ್ಸಂಟ್ ಪದ್ಮಿನಿ ಮುಂತಾದವರು ಇದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಿಗೆ ಹೋದರೂ, ಬಂದರೂ "ಕಳ್ಳ ಬಂದ, ಸೈಟ್ ಕಳ್ಳ ಬಂದ " ಎಂದು ಜನರು ಮೂದಲಿಸುತ್ತಿದ್ದಾರೆ. ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಕಳ್ಳರೇ. ಕದ್ದ ಸೈಟ್ ವಾಪಾಸ್ಸು ಕೊಟ್ಟ ಮಾತ್ರಕ್ಕೆ ಅವರ ಕಳ್ಳತನ ಮುಚ್ಚಿ ಹೋಗುವುದಿಲ್ಲ. ಅಡಕೆ ಕದ್ದರೂ ಕಳ್ಳನೆ, ಆನೆ ಕದ್ದರೂ ಕಳ್ಳನೇ. ಅವರೊಬ್ಬರು ಕೇವಲ ಭ್ರಷ್ಟ ಮಾತ್ರವಲ್ಲ. ಅವರೊಬ್ಬ ಜಾತಿವಾದಿ. ಕುತಂತ್ರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರು ಅವರು ಕೂಡಲೇ ರಾಜೀನಾಮೆ ನೀಡಬೇಕು.

ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್, ವಿರೋಧ ಪಕ್ಷ ನಾಯಕ

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿದರು.