ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಗೆಲುವು ನಿಶ್ವಿತ: ಶ್ರೀನಿವಾಸ ರೆಡ್ಡಿ

| Published : May 12 2024, 01:23 AM IST / Updated: May 12 2024, 12:39 PM IST

ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಗೆಲುವು ನಿಶ್ವಿತ: ಶ್ರೀನಿವಾಸ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ 3567, ಹಡಗಲಿ 2740, ಹಗರಿಬೊಮ್ಮನಹಳ್ಳಿ 4585, ಕೂಡ್ಲಿಗಿ 2276, ಹರಪನಹಳ್ಳಿ ಕ್ಷೇತ್ರದಲ್ಲಿ 3065 ಒಟ್ಟು 1633 ಮತದಾರರಿದ್ದಾರೆ

ಹೊಸಪೇಟೆ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಜೂ.3ಕ್ಕೆ ನಿಗದಿಯಾಗಿದ್ದು, ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಚಂದ್ರಶೇಖರ್ ಪಾಟೀಲ್ ಅವರನ್ನು ಪಕ್ಷ ಘೋಷಿಸಿದೆ. ಈ ಬಾರಿ ಅಧಿಕ ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಜಯಶೀಲರಾಗಲಿದ್ದಾರೆ ಎಂದು ಕೆಪಿಸಿಸಿ ಶಿಕ್ಷಕರ ಮತ್ತು ಪದವೀಧರ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಬಿ. ಶ್ರೀನಿವಾಸ್‌ ರೆಡ್ಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಮಾತನಾಡಿದ ಅವರು, ಈಶಾನ್ಯ ಪದವೀಧರರ ಕ್ಷೇತ್ರದ ಏಳು ಜಿಲ್ಲೆಯಲ್ಲಿ ಒಟ್ಟು 1,52,000 ಮತದಾರರಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ದಾಖಲೆ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ವಿಜಯನಗರ 3567, ಹಡಗಲಿ 2740, ಹಗರಿಬೊಮ್ಮನಹಳ್ಳಿ 4585, ಕೂಡ್ಲಿಗಿ 2276, ಹರಪನಹಳ್ಳಿ ಕ್ಷೇತ್ರದಲ್ಲಿ 3065 ಒಟ್ಟು 1633 ಮತದಾರರಿದ್ದಾರೆ ಎಂದರು.

ಕಳೆದ ಬಾರಿ ಬಿಜೆಪಿಯಿಂದ ಈ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಈ ಬಾರಿ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿರುವೆ. ಹೈಕಮಾಂಡ್‌ ಈಗಾಗಲೇ ಚಂದ್ರಶೇಖರ್‌ ಪಾಟೀಲ್‌ ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿದೆ. ಅವರ ಗೆಲುವು ನಿರೀಕ್ಷಿಸಲಾಗಿದೆ. ಚುನಾವಣೆಯಲ್ಲಿ ನಾನು ಕೆಲಸ ಮಾಡುವೆ ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏಳು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸವನ್ನು ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಮಾಡಲಿದ್ದಾರೆ. ಈ ಹಿಂದೆಯೂ ಅವರು ಈಶಾನ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಪಕ್ಷದ ವರಿಷ್ಠರು ಈ ಬಾರಿಯೂ ಮತದಾರರು ಅವರನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಎಚ್.ಎನ್. ಮೊಹ್ಮಮದ್ ಇಮಾಮ್ ನಿಯಾಜಿ, ಎನ್.ರಾಮಕೃಷ್ಣ, ವಿನಾಯಕ್ ಶೆಟ್ಟರ್, ವೀರಾಂಜನೇಯ, ವಿಜಯಕುಮಾರ್, ಜಾವೇದ್ ಮತ್ತಿತರರಿದ್ದರು.