ಕೋಟಿ ಕೋಟಿ ಒಡೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್

| Published : Apr 02 2024, 01:03 AM IST

ಕೋಟಿ ಕೋಟಿ ಒಡೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶ್ರೇಯಸ್‌ ಪಟೇಲ್ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ ಅವರು, 41 ಕೋಟಿ ರು. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

ಹಾಸನ: ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶ್ರೇಯಸ್‌ ಪಟೇಲ್ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ ಅವರು, 41 ಕೋಟಿ ರು. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಪತ್ನಿ ಅಕ್ಷತಾ ಹೆಸರಿನಲ್ಲೂ ಕೋಟಿ ಬೆಲೆ ಬಾಳುವ ಸ್ಥಿರ, ಚರಾಸ್ಥಿ ಇದೆ. ಶ್ರೇಯಸ್ 1.25 ಲಕ್ಷ ನಗದು ಹೊಂದಿದ್ದರೆ, ಪತ್ನಿ ಬಳಿ 3.94 ಲಕ್ಷ ನಗದು ಇದೆ.ವಿವಿಧ ಬ್ಯಾಂಕ್‌ ಗಳಲ್ಲಿ 6.23 ಲಕ್ಷ ಠೇವಣಿ ಹೊಂದಿರುವ ಶ್ರೇಯಸ್‌, ಸ್ನೇಹಿತರು ಹಾಗೂ ಬಂಧುಗಳಿಂದ 50 ಲಕ್ಷ, ತಾಯಿಯಿಂದ 3.64 ಲಕ್ಷ ಹಾಗೂ ವ್ಯಕ್ತಿಯೊಬ್ಬರಿಂದ 88 ಲಕ್ಷ ಸಾಲ‌ ಪಡೆದಿದ್ದಾರೆ. ತನ್ನ ಹೆಸರಿನಲ್ಲಿ ಒಂದು ಇನ್ನೋವ ಕಾರು, ಒಂದು ಟ್ರ್ಯಾಕ್ಟರ್ ಹೊಂದಿರುವ ಶ್ರೇಯಸ್, ತಮ್ಮ ಬಳಿ 65 ಸಾವಿರ ಮೌಲ್ಯದ ಮೊಬೈಲ್ ಹಾಗೂ ಪತ್ನಿ ಬಳಿ 55 ಸಾವಿರ ಮೌಲ್ಯದ ಮೊಬೈಲ್ ಹೊಂದಿದ್ದಾರೆ. ಶ್ರೇಯಸ್ 59 ಲಕ್ಷದ 65 ಸಾವಿರ ಬೆಲೆ ಬಾಳುವ ಚಿನ್ನಾಭರಣ ಹೊಂದಿದ್ದು, 20 ಎಕರೆ ಕೃಷಿ ಭೂಮಿ, ಬೆಂಗಳೂರು ಹಾಗೂ ಹೊಳೆನರಸೀಪುರದ ವಿವಿಧೆಡೆ ಕೃಷಿಯೇತರ ಭೂಮಿ ಸೇರಿ ಒಟ್ಟು 39 ಕೋಟಿ 58 ಲಕ್ಷದ 6 ಸಾವಿರದ 482 ರು. ಮೌಲ್ಯದ ಕೃಷಿಯೇತರ ಭೂಮಿ ಹಾಗೂ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಶ್ರೇಯಸ್‌ ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ 1.36 ಕೋಟಿ ಬೆಲೆ ಬಾಳುವ ಒಂದು ನಿವೇಶನ ಹಾಗೂ ಮನೆ ಹೊಂದಿದ್ದಾರೆ. ಶ್ರೇಯಸ್ ಅವರು ಒಟ್ಟು 40 ಕೋಟಿ 99 ಲಕ್ಷದ 2 ಸಾವಿರದ 728 ರು. ಮೌಲ್ಯದ ಚರ,ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ಒಟ್ಟು 1.68 ಕೋಟಿ ಚರ ಮತ್ತು ಸ್ಥಿರಾಸ್ತಿ ಇದೆ ಎಂದು ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ.