ಸಾರಾಂಶ
ಗುಂಡ್ಲುಪೇಟೆ: ರಾಜ್ಯದ ವಿಧಾನಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದಕ್ಕೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಚ್.ಎಸ್.ಮಹದೇವಪ್ರಸಾದ್ ಅವರ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ಸಂಡೂರಲ್ಲಿ ಅನ್ನಪೂರ್ಣ ತುಕರಾಂ, ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್, ಶಿಗ್ಗಾಂವಿಯಲ್ಲಿ ಪಠಾಣ್ ಗೆಲುವಾಗುತ್ತಿದ್ದಂತೆಯೇ ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂದೆ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯಗೆ,ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದರು.
ಎಪಿಎಂಸಿ ಅಧ್ಯಕ್ಷ ಬಸವರಾಜು, ಪುರಸಭೆ ಸದಸ್ಯ ಗೌಡ್ರ ಮಧು, ಕಾಂಗ್ರೆಸ್ ಮುಖಂಡರಾದ ಮಂಚಹಳ್ಳಿ ಲೋಕೇಶ್, ಬೇರಂಬಾಡಿ ರಾಜೇಶ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ದಾಸ್, ಅರುಣ್ ಚಿಟ್ಟೆ, ಕಾಂಗ್ರೆಸ್ ಮುಖಂಡರಾದ ಪಾಂಡು,ವೆಂಕಟೇಶ್ ನಾಯಕ, ಸಾಹುಲ್, ಮಡಹಳ್ಳಿ ಮಣಿ, ಮಂಜು ವಿಶ್ವಕರ್ಮ, ಸೇರಿ ಹಲವರಿದ್ದರು.ಉಪಚುನಾವಣೇಲಿ ಜೈ ಎಂದ ಮತದಾರ: ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ಗುಂಡ್ಲುಪೇಟೆ: ರಾಜ್ಯದಲ್ಲಿ ಇತ್ತೀಚಗೆ ನಡೆದ ವಿಧಾನಸಭೆ ಮೂರು ಉಪಚುನಾವಣೆ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಒಪ್ಪಿ ಅಲ್ಲಿನ ಮತದಾರ ಗೆಲ್ಲಿಸಿದ್ದಾರೆ ಎನ್ನಬಹುದು ಎಂದು ಕಾಂಗ್ರೆಸ್ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಕನ್ನಡಪ್ರಭದೊಂದಿಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವ ಮೂರು ಕ್ಷೇತ್ರಗಳ ಮತದಾರ ಒಪ್ಪಿಯೇ ಜನರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಸಂಘಟಿತ ಹೋರಾಟದ ಫಲವಾಗಿ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಗೆದ್ದ ಮೂವರಿಗೆ ಅಭಿನಂದನೆ ಎಂದರು.