ಪಟ್ಟಣದ ಗಂಗಮ್ಮನಪಾಳ್ಯಕ್ಕೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡಲು ಶಾಸಕರು ಮುಂದಾಗಿದ್ದಾರೆ. ಇದಕ್ಕೆ ಅಲ್ಲಿನ ಒತ್ತುವರಿದಾರರಾದ ವ್ಯಾಪಾರಸ್ಥರು, ಮನೆ ಮಾಲೀಕರು ಸಹ ಸಮ್ಮತಿಸಿದ್ದಾರೆ, ಹೀಗಿರುವಾಗ ಮಾಜಿ ಸಂಸದರು ಕೆಲ ಮುಸ್ಲಿಂರನ್ನು ಭೇಟಿ ಮಾಡಿ ಅವರನ್ನು ರೊಚ್ಚಿಗೆಬ್ಬಿಸಿ ಅವರ ಮೂಲಕ ಅನ್ಯಾಯವಾಗಿದೆ ಎಂದು ಹೇಳಿಕೆ ಕೊಡಿಸಿರುವುದನ್ನು ಖಂಡಿಸುವುದಾಗಿ ತಿಳಿಸಿದರು.

ಬಂಗಾರಪೇಟೆ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾಬೀತುಪಡಿಸಿದರೆ ನಾಳೆಯೇ ಅವರಿಂದ ರಾಜೀನಾಮೆ ಕೊಡಿಸುವೆವು. ಆರೋಪ ಸಾಬೀತು ಮಾಡದಿದ್ದರೆ ನೀವು ಶಾಸಕರ ಮನೆಯ ಕಾವಲುಗಾರನಾಗಿ ಕೆಲಸ ಮಾಡಬೇಕೆಂದು ಟಿಎಪಿಸಿಎಂಎಸ್ ಉಪಾಧ್ಯಕ್ಷ ಅ.ನಾ.ಹರೀಶ್ ಮಾಜಿ ಸಂಸದ ಎಸ್.ಮುನಿಸ್ವಾಮಿಯವರಿಗೆ ಸವಾಲು ಹಾಕಿದರು.ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ಕಾಂಗ್ರೆಸ್ ಮುಖಂಡರಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಮುನಿಸ್ವಾಮಿ ಶಾಸಕರ ವಿರುದ್ಧ ಪದೇ ಪದೇ ಆರೋಪಗಳನ್ನು ಮಾಡುವರೇ ವಿನಃ ಇದುವರೆಗೂ ಒಂದೇ ಒಂದು ಆರೋಪವನ್ನೂ ಸಾಬೀತು ಮಾಡಿಲ್ಲ, ಶಾಸಕರು ಸರ್ಕಾರಿ ಜಾಗವನ್ನು ಎಲ್ಲಿಯೂ ಲಪಟಾಯಿಸಿಲ್ಲ, ಇನ್ನು ಮುನಿಸ್ವಾಮಿ ದೋಣಿ ಮಡಗು, ಟೇಕಲ್ ಬಳಿ ಜಮೀನು ಲಫಟಾಯಿಸಿದ್ದಾರೆಂದು ಆರೋಪಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಹಾಗೂ ಶಾಂತಿಯಿಂದ ಇರುವ ಜನರಲ್ಲಿ ಅಶಾಂತಿ ಉಂಟು ಮಾಡಲು ಪ್ರಚೋಧನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಕ್ಷೇತ್ರಕ್ಕೆ ಬಂದಾಗಲೆಲ್ಲಾ ಶಾಸಕರ ವಿರುದ್ಧ ಆರೋಪ ಮಾಡುವ ಮೂಲಕ ಬೆಂಕಿ ಹಚ್ಚಿ ಹೋಗುವುದು ಮುನಿಸ್ವಾಮಿಗೆ ರೂಢಿಯಾಗಿದೆ. ಅವರೊಬ್ಬ ಮಾನಸಿಕ ಅಸ್ವಸ್ಥರಂತೆ ನಡೆದುಕೊಳ್ಳುತ್ತಿದ್ದಾರೆಂದು ಏಕ ವಚನದಲ್ಲಿ ಟೀಕಿಸಿದರು.

ಪಟ್ಟಣದ ಗಂಗಮ್ಮನಪಾಳ್ಯಕ್ಕೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡಲು ಶಾಸಕರು ಮುಂದಾಗಿದ್ದಾರೆ. ಇದಕ್ಕೆ ಅಲ್ಲಿನ ಒತ್ತುವರಿದಾರರಾದ ವ್ಯಾಪಾರಸ್ಥರು, ಮನೆ ಮಾಲೀಕರು ಸಹ ಸಮ್ಮತಿಸಿದ್ದಾರೆ, ಹೀಗಿರುವಾಗ ಮಾಜಿ ಸಂಸದರು ಕೆಲ ಮುಸ್ಲಿಂರನ್ನು ಭೇಟಿ ಮಾಡಿ ಅವರನ್ನು ರೊಚ್ಚಿಗೆಬ್ಬಿಸಿ ಅವರ ಮೂಲಕ ಅನ್ಯಾಯವಾಗಿದೆ ಎಂದು ಹೇಳಿಕೆ ಕೊಡಿಸಿರುವುದನ್ನು ಖಂಡಿಸುವುದಾಗಿ ತಿಳಿಸಿದರು.

ಬಾಯಿ ಚಪಲಕ್ಕೆ ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಸಮೇತ ಸಾಬೀತು ಮಾಡಲಿ, ೫ ವರ್ಷ ಸಂಸದರಾಗಿದ್ದಾಗಲೇ ಅವರಿಂದ ಶಾಸಕರನ್ನು ಏನನ್ನೂ ಮಾಡಲು ಆಗಲಿಲ್ಲ, ಈಗ ಮಾಜಿ ಯಾಗಿದ್ದಾರೆ.ಅವರಿಂದ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಪುರಸಭೆ ಅಧ್ಯಕ್ಷ ಗೋವಿಂದ, ಮಾಜಿ ಅಧ್ಯಕ್ಷ ಶಂಷುದ್ದೀನ್ ಬಾಬು, ಮುಖಂಡರಾದ ಸುಹೇಲ್, ಶಫಿ, ವೆಂಕಟೇಶ್, ರಾಕೇಶ್‌ಗೌಡ ಇತರರು ಇದ್ದರು.