ಕಿಮ್ಮನೆ ರತ್ನಾಕರ್‌ಗೆ ನಿಂದಿಸಿದ್ದ ಮಹಿಳೆ ವಿರುದ್ಧ ಕಾಂಗ್ರೆಸ್‌ ದೂರು

| Published : Mar 02 2024, 01:48 AM IST

ಕಿಮ್ಮನೆ ರತ್ನಾಕರ್‌ಗೆ ನಿಂದಿಸಿದ್ದ ಮಹಿಳೆ ವಿರುದ್ಧ ಕಾಂಗ್ರೆಸ್‌ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಮಾನಹಾನಿಕರವಾಗಿ ನಿಂದಿಸಿದ ಆರೋಪದ ಮೇಲೆ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಗೇರಿ ನಿವಾಸಿ ಶಾಂತಾ ಗಿರೀಶ ಎಂಬವರ ವಿರುದ್ಧ ಕಾಂಗ್ರೆಸ್ ಮುಖಂಡ ಹರ್ಷೇಂದ್ರಕುಮಾರ್ ಪಡುವಳ್ಳಿ ಆಗುಂಬೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತೀರ್ಥಹಳ್ಳಿ

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಮಾನಹಾನಿಕರವಾಗಿ ನಿಂದಿಸಿದ ಆರೋಪದ ಮೇಲೆ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಗೇರಿ ನಿವಾಸಿ ಶಾಂತಾ ಗಿರೀಶ ಎಂಬವರ ವಿರುದ್ಧ ಕಾಂಗ್ರೆಸ್ ಮುಖಂಡ ಹರ್ಷೇಂದ್ರಕುಮಾರ್ ಪಡುವಳ್ಳಿ ಆಗುಂಬೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಭೀಮನಕಟ್ಟೆ ಬಳಿ ನಿರ್ಮಾಣಗೊಳ್ಳಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಫೆ.26ರಂದು ಸ್ಥಳೀಯ ಕೆಲ ಸಂಘಟನೆಗಳು ಹೆಗ್ಗೋಡು ಶಾಲೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಶಾಂತಾ ಗಿರೀಶ ಹೀನಾಮಾನವಾಗಿ ಬೈದಿದ್ದಾರೆ.

ಕಿಮ್ಮನೆ ಎಲ್ಲಿ ಸತ್ತಿದ್ದಾನೆ, ಓಟು ಕೇಳಲು ಬಂದರೆ ಅವನಿಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಸಾರ್ವಜನಿಕವಾಗಿ ನಿಂದಿಸಿ, ಜನರನ್ನು ಎತ್ತಿಕಟ್ಟಿ ಶಾಂತಿಭಂಗಕ್ಕೂ ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಸದರಿ ಮಹಿಳೆ ಅವಹೇಳನಕಾರಿಯಾಗಿ ನಿಂದಿಸಿರುವ ವೀಡಿಯೋ ಕ್ಲಿಪ್‍ಗಳನ್ನೂ ಹಷೇಂದ್ರಕುಮಾರ್ ಅವರು ಆಗುಂಬೆ ಪಿಎಸ್‍ಐ ಉಮೇಶ್ ನಾಯಕ್‍ ಅವರಿಗೆ ಸಲ್ಲಿಸಿದ್ದಾರೆ.

ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಸಾತ್ವಿಕ್ ಆಗುಂಬೆ, ವಿಕ್ರಂ ಶೆಟ್ಟಿ, ಶಶಿಭೂಷಣ್, ಅರುಣ್‌ಕುಮಾರ್, ಚಂದನ್ ಮತ್ತು ಕಿರಣ್‍ಕುಮಾರ್ ಇದ್ದರು.

- - - -01ಟಿಟಿಎಚ್‌01:

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅವರನ್ನು ಮಾನಹಾನಿಕರವಾಗಿ ನಿಂದಿಸಿದ ಆರೋಪದ ಮೇಲೆ ಆಲಗೇರಿ ಶಾಂತಾ ಗಿರೀಶ ಎಂಬವರ ವಿರುದ್ಧ ಆಗುಂಬೆ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಹರ್ಷೇಂದ್ರಕುಮಾರ್ ಪಡುವಳ್ಳಿ ನೇತೃತ್ವದಲ್ಲಿ ದೂರು ಸಲ್ಲಿಸಲಾಯಿತು.