ಸಾರಾಂಶ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೇವಾದರ ಏರಿಕೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿರಿಸಿ ಬಿಜೆಪಿ ನಡೆಸಿದೆ ಎನ್ನಲಾದ ಅಪಪ್ರಚಾರ ವಿರೋಧಿಸಿ ಕಾಂಗ್ರೆಸ್ ಶುಕ್ರವಾರ ಕಟೀಲಿಗೆ ಪಾದಯಾತ್ರೆ ನಡೆಸಿತು.
ಕನ್ನಡಪ್ರಭ ವಾರ್ತೆ ಮೂಲ್ಕಿಇತ್ತೀಚೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೇವಾದರ ಏರಿಕೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿರಿಸಿ ಬಿಜೆಪಿ ನಡೆಸಿದೆ ಎನ್ನಲಾದ ಅಪಪ್ರಚಾರ ವಿರೋಧಿಸಿ ಕಾಂಗ್ರೆಸ್ ಶುಕ್ರವಾರ ಕಟೀಲಿಗೆ ಪಾದಯಾತ್ರೆ ನಡೆಸಿತು.
ಯುವ ಕಾಂಗ್ರೆಸ್ ನಾಯಕ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದಲ್ಲಿ ಬೃಹತ್ ಧರ್ಮ ಜಾಗೃತಿ ನಡೆ ಪಾದಯಾತ್ರೆ ಕಾರ್ಯಕ್ರಮ ಕಟೀಲು ಸಮೀಪದ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಬಳಿಯಿಂದ ಕಟೀಲು ಕ್ಷೇತ್ರದವರೆಗೆ ನಡೆಯಿತು. ಪಾದಯಾತ್ರೆ ಮೂಲಕ ಕಟೀಲು ದೇವಳಕ್ಕೆ ಆಗಮಿಸಿ ಮುಖ್ಯಮಂತ್ರಿ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಸದ್ಬುದ್ಧಿ ಕೊಡಲೆಂದು ದೇವಳದಲ್ಲಿ ದುರ್ಗೆಯ ಸಮ್ಮುಖದಲ್ಲಿ ಮಿಥುನ್ ರೈ ನೇತೃತ್ವದಲ್ಲಿ ಪ್ರಾರ್ಥಿಸಲಾಯಿತು. ದೇವಳದ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಪ್ರಾರ್ಥನೆ ನೆರವೇರಿಸಿದರು.ಮಾಜಿ ಸಚಿವ ಅಭಯ ಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಕೆಪಿಸಿಸಿ ಸಂಯೋಜಕ ವಸಂತ್ ಬೆರ್ನಾಡ್, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೊರಿಯಾರ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜೈನ್ ಶಿರ್ತಾಡಿ ಮತ್ತಿತರರು ಇದ್ದರು.