ಸಾರಾಂಶ
ಜನ ಸಾಮಾನ್ಯರ ಮನೆ-ಮನ ತಲುಪಿರುವ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಶಾಸಕ ಕೆ.ಎಸ್. ಆನಂದ್ ರವರ ಅಭಿವೃದ್ಧಿ ಕಾರ್ಯಗಳು ಶ್ರೇಯಸ್ ಪಟೇಲ್ ಗೆಲುವಿಗೆ ಪೂರಕವಾಗಲಿವೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಂಸಾಗರ ಸೋಮಶೇಖರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಂಸಾಗರ ಸೋಮಶೇಖರ್
ಕನ್ನಡಪ್ರಭ ವಾರ್ತೆ ಕಡೂರುಜನ ಸಾಮಾನ್ಯರ ಮನೆ-ಮನ ತಲುಪಿರುವ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಶಾಸಕ ಕೆ.ಎಸ್. ಆನಂದ್ ರವರ ಅಭಿವೃದ್ಧಿ ಕಾರ್ಯಗಳು ಶ್ರೇಯಸ್ ಪಟೇಲ್ ಗೆಲುವಿಗೆ ಪೂರಕವಾಗಲಿವೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಂಸಾಗರ ಸೋಮಶೇಖರ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನರು ಬರಗಾಲ ಮತ್ತು ಕೊರೊನಾದಂತಹ ಸಂಕಷ್ಟ ದಲ್ಲಿದ್ದಾಗ ಪ್ರಜ್ವಲ್ ಜವಾಬ್ದಾರಿಯುತ ಸಂಸದರಾಗಿ ಒಮ್ಮೆಯೂ ಕಡೂರಿನತ್ತ ಸುಳಿಯಲಿಲ್ಲ. ಕಡೂರು ಕೇವಲ ಮತಗಳಿಕೆ ಕೇಂದ್ರವಾಗಿತ್ತು. ಗೆದ್ದು ಹೋದ ಬಳಿಕ ಇತ್ತ ಸುಳಿಯಲಿಲ್ಲ.ಇಂತಹ ಮನೋಭಾವದ ಸಂಸದರು ನಮಗೆ ಬೇಕೆ ಎಂಬ ಪ್ರಶ್ನೆ ತಾಲೂಕಿನ ಜನತೆಯಲ್ಲಿ ಸಹಜವಾಗಿ ಮೂಡಿದೆ ಎಂದರು. ಕಡೂರು ಶಾಸಕರಾಗಿ ಆಯ್ಕೆಯಾದ ಕೆ.ಎಸ್.ಆನಂದ್ ಕೇವಲ 10 ತಿಂಗಳ ಅವಧಿಯಲ್ಲಿ ಸುಮಾರು 295 ಕೋಟಿಗೂ ಹೆಚ್ಚು ಅನುದಾನ ತರುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೆ ತಾಲೂಕಿನ ಮಹಿಳೆಯರು , ಯುವಕರ ಉದ್ಯೋಗ ಸೃಷ್ಟಿ ಹಿನ್ನೆಲೆಯಲ್ಲಿ 25 ಕೋಟಿ ರು. ವೆಚ್ಚದ ಜವಳಿ ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಆದರೆ ಸಂಸದ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರಕ್ಕೆ 1400 ಕೋಟಿ ರು. ತಂದಿರುವುದಾಗಿ ಹೇಳಿದ್ದು, ಅದರಲ್ಲಿ ಕಡೂರು ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಜಾತಿ,ಧರ್ಮ, ಪಕ್ಷ ಬೇಧವಿಲ್ಲದೆ ಮಸೀದಿ- ಮಂದಿರಗಳಿಗೆ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಈ ಕಾರ್ಯ ಗಳ ಜೊತೆ ರಾಜ್ಯದ ಗ್ಯಾರಂಟಿ ಯೋಜನೆಗಳು ಸಹ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತ ಗಳಿಸಲು ಸಹಕಾರಿಯಾಗಲಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದೆ. ಕಡೂರಲ್ಲಿಯೂ ಬದಲಾವಣೆಯಾಗುವುದು ಖಚಿತ ಎಂದರು.ಬ್ಲಾಕ್ ಕಾಂಗ್ರೆಸ್ ಘಟಕ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ, ಏ. 22 ರ ಸೋಮವಾರ ಕಡೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಕುರುಬಗೆರೆ ಲೋಕೇಶ್, ಅಬಿದ್ ಪಾಷಾ. ಕೋಡಿಹಳ್ಳಿ ಶ್ರೀನಿವಾಸ್ ನಾಯ್ಕ, ಧನಂಜಯ ಇದ್ದರು.19ಕೆಕೆಡಿಯು2.
ಜಿಲ್ಲಾ ಕಾಂಗ್ರೆಸ್ ನೂತನ ಪ್ರಧಾನ ಕಾರ್ಯದರ್ಶಿ ಕಂಸಾಗರ ಸೋಮಶೇಖರ್ ಕಡೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು