ಸಾರಾಂಶ
ರೋಡ್ ಶೋ । ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ
ಕನ್ನಡಪ್ರಭ ವಾರ್ತೆ ಅರಸೀಕೆರೆಬಿಜೆಪಿಯನ್ನು ದಲಿತ ವಿರೋಧಿ ಹಾಗೂ ಸಂವಿಧಾನ ಬದಲಾಯಿಸುತ್ತಾರೆ ಎಂದು ಸುಳ್ಳು ಹೇಳುತ್ತಿವ ಕಾಂಗ್ರೆಸ್ ಎರಡು ಬಾರಿ ಡಾ. ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿ ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡದೆ ತಮಗೆ ತಾವೇ ನೀಡಿಕೊಂಡರು. ಅಂಬೇಡ್ಕರ್ ಸತ್ತಾಗ ಅವರ ದೇಹ ಸಂಸ್ಕಾರಕ್ಕೆ ಜಾಗವನ್ನೂ ಕೊಡದೆ ಕಾಂಗ್ರೆಸ್ ಅವಮಾನಿಸಿತು ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಟೀಕಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮಾತನಾಡಿ, ಜವಾಹರ್ ಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ತಮಗೆ ತಾವೇ ಭಾರತ ರತ್ನ ಪಡೆದುಕೊಂಡರು. ಅಟಲ್ ಬಿಹಾರಿ ವಾಜಪೇಯಿ ಅವರ ಶಿಫಾರಸ್ಸಿನ ಮೇರೆಗೆ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸಲಾಯಿತು ಎಂದು ತಿಳಿಸಿದರುಅಂಬೇಡ್ಕರ್ ಅವರಿಗೆ ಬದುಕಿದ್ದಾಗ ನೆಮ್ಮದಿ ನೀಡದ ಕಾಂಗ್ರೆಸ್ ಅವರು ಸತ್ತ ನಂತರ ಅವರನ್ನು ಸಂಸ್ಕಾರ ಮಾಡಲು ಜಾಗವನ್ನು ನೀಡದೆ ಅವಮಾನಿಸಿತು. ಈಗ ತಾವು ದಲಿತರ ಪರ ಅಂಬೇಡ್ಕರ್ ಪರ ಎಂದು ಬಿಂಬಿಸಿಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಜರಿದರು
ಮಾಜಿ ಸಚಿವ ಅಶ್ವಥ್ ನಾರಾಯಣಗೌಡ ಮಾತನಾಡಿ ಈ ದೇಶಕ್ಕಾಗಿ ಮೋದಿಯವರ ಪ್ರಧಾನ ಮಂತ್ರಿ ಆಗಬೇಕು ಎಂದು ಬಿಜೆಪಿ ಜೆಡಿಎಸ್ ಮೈತ್ರಿ ಸಮ್ಮತಿಸಿದ್ದಾರೆ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಇಳಿ ವಯಸ್ಸಿನಲ್ಲೂ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ ಹಾಗಾಗಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರು ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡುವ ನೀಡಿ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಲು ಸಹಕರಿಸಬೇಕೆಂದು ಮನವಿ ಮಾಡಿದರುಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ಕೇವಲ ಗ್ಯಾರಂಟಿ ಜಪ ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದ ಅಭಿವೃದ್ಧಿ ಶೂನ್ಯ ಎಂದು ಅವರು ಸಿದ್ದರಾಮಯ್ಯ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಟೀಕಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಲೋಕಸಭಾ ಚುನಾವಣೆಯನ್ನು ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಬ್ಬದಂತೆ ಪರಿಗಣಿಸಿ ಗೆಲುವಿಗೆ ಪಣ ತೊಡಬೇಕು. ಆಗ ಮಾತ್ರವೇ ರಾಜಕೀಯ ಎದುರಾಳಿಗಳನ್ನು ಸಮರ್ಥವಾಗಿ ಮಣಿಸಲು ಸಾಧ್ಯ ಎಂದರುಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್, ಹೊಸೂರು ಗಂಗಾಧರ್, ಹರ್ಷವರ್ಧನ್ ರಾಜ್, ನಗರಸಭೆ ಸದಸ್ಯರಾದ ಸಿ.ಗಿರೀಶ್, ಜಾಕೀರ್ ಹುಸೇನ್, ಈಶ್ವರಪ್ಪ, ರಮೇಶ್ ನಾಯ್ಡು, ಶಿವನ್‌ರಾಜ್, ಕೆಂಕೆರೆ ಕೇಶವ್, ಜೆಡಿಎಸ್ ಹಾಗೂ ಬಿಜೆಪಿ ಪ್ರಮುಖರು ಸಮನ್ವಯ ಅಮಿತಿ ಸಭೆಯಲ್ಲಿ ಭಾಗಿಯಾಗುವ ಮೂಲಕ ಶಕ್ತಿ ಪ್ರದರ್ಶಿಸಿದರು.
ಅರಸೀಕೆರೆಯ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿದರು.