ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ: ಉಮೇಶ ಜಾದವ್

| Published : Sep 06 2025, 01:00 AM IST

ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ: ಉಮೇಶ ಜಾದವ್
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದ್ದಾರೆ. ಸೆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಂಜಾರ್ ಸಮುದಾಯದ ಸರ್ವ ಸಮಿತಿ ಸಂಘಟನೆಯಿಂದ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಉಮೇಶ ಜಾದವ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಒಳ ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದ್ದಾರೆ. ಸೆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಂಜಾರ್ ಸಮುದಾಯದ ಸರ್ವ ಸಮಿತಿ ಸಂಘಟನೆಯಿಂದ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಉಮೇಶ ಜಾದವ್ ಹೇಳಿದರು.

ಬಿರಾದಾರ್ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ವರ್ಗಿಕರಣದಲ್ಲಿ ಅವೈಜ್ಞಾನಿಕ ನಿರ್ಧಾರ ತೆಗೆದುಕೊಂಡಿದೆ. ಬೇಡ ಜಂಗಮ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಲು ಆ ಸಮುದಾಯವನ್ನು ನಮ್ಮ ವರ್ಗದಲ್ಲಿ ಸೇರಿಸಿರುವುದು ಅಲೆಮಾರಿ, ಇತರೆ ಜನಾಂಗಕ್ಕೆ ಬಿಜೆಪಿ ಸರ್ಕಾರ ಬಸವರಾಜ್ ಬೊಮ್ಮಾಯಿ ಅವರು ಪ್ರತ್ಯೇಕ ಶೇ.1 ಮೀಸಲಾತಿ ಕಲ್ಪಿಸಿದ್ದರು.ಕಾಂಗ್ರೆಸ್ ಸರ್ಕಾರ ಅದನ್ನು ರದ್ದುಪಡಿಸಿ ಸಮುದಾಯವನ್ನು ಬಂಜಾರ ಸಮುದಾಯದಲ್ಲಿ ಸೇರಿಸಿ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದ್ದಾರೆ. ನಾಗಮೋಹನ್ ದಾಸ್‌ ಆಯೋಗ ತಾಂಡಾಗಳ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿಲ್ಲ 49 ಜಾತಿಗಳಿಗೆ ಕೇವಲ ಶೇ.5ರಷ್ಟು ಮೀಸಲಾತಿ ನೀಡಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಒಳ ಮೀಸಲಾತಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದರು.

ಜನಸಂಖ್ಯೆ ಅನುಗುಣವಾಗಿ ಜಾರಿಯಾಗಬೇಕಾಗಿದ್ದ ಪ್ರಭಾವಿಗಳ ಒತ್ತಡಕ್ಕೆ ಮಣೆದು 63 ಜಾತಿಗಳನ್ನು ಸೇರಿ ಕೇವಲ ಶೇ 5 ರಷ್ಟು ಮೀಸಲಾತಿ ನೀಡಿರುವುದು ಈ ಸಮುದಾಯದವರಿಗೆ ಮಾಡಿರುವ ಅನ್ಯಾಯ. ಬೇರೆ ಬೇರೆ ಸಮುದಾಯದಲ್ಲಿ ಬಲಾಢ್ಯ ರಾಜ್ಯಕಾರಣಿಗಳಾಗಿ ಬೆಳೆದು ನಿಂತಿದ್ದಾರೆ. ಉದಾಹರಣೆಗೆ ಎಡಗೈ ಸಮುದಾಯದಲ್ಲಿ ಗೋವಿಂದ್ ಕಾರಜೋಳ ಅವರು ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಎಡಗೈ ಸಮುದಾಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ ಖರ್ಗೆ ಉನ್ನತ ಸ್ಥಾನದಲ್ಲಿದ್ದು ಬೆಳೆದು ನಿಂತಿದ್ದಾರೆ. ಆದರೆ, ಬಂಜಾರ ಸಮುದಾಯದಲ್ಲಿ ಯಾವುದೇ ವ್ಯಕ್ತಿಗಳನ್ನು ಬೆಳೆಯಲು ಕಾಂಗ್ರೆಸ್ ಸರ್ಕಾರ ಬಿಡಲಿಲ್ಲ. ಹಾಗಾಗಿ, ಬಂಜಾರ ಸಮುದಾಯಕ್ಕೆ ಘೋರ ಅನ್ಯಾಯವಾಗಿದೆ. ಇದರ ಪ್ರಯುಕ್ತ ಬೆಂಗಳೂರಿನಲ್ಲಿ ಬಂಜಾರ ಸಮುದಾಯ ಭೂವಿ, ಕೊರಚ, ಕೊರವಿ, ಸಮುದಾಯಗಳ ಒಕ್ಕೂಟದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಹೋರಾಟ ನಡೆಸಲಾಗುವುದು. ಹಾಗಾಗಿ, ಪ್ರತಿ ತಾಂಡಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದ್ದರು. ರಾಜಕುಮಾರ ಚೌಹಾಣ, ಸತೀಶ ಜಾಧವ್, ಮಜಾರ ಕುರಿಕೋಟಾ, ಸುರೇಶ್ ರಾಥೋಡ, ಬಂಜಾರ್ ಸಮುದಾಯದ ಮುಖಂಡರು. ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.