ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮತದಾರರಿಗೆ ತಪ್ಪು ಸಂದೇಶಗಳನ್ನು ನೀಡುತ್ತಿದ್ದು, ಜಗದೀಶ್ ಶೆಟ್ಟರವರು ನಮ್ಮ ಜಿಲ್ಲೆಯವರು ಅಲ್ಲ ಎಂದು ವಿನಾಕಾರಣ ಆಪಾದನೆ ಮಾಡುತ್ತಿರುವಂತವರ ಕಡೆಗೆ ಗಮನ ನೀಡದೇ ಮೋದಿಯವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ನಿಷ್ಠೆಯಿಂದ ಶ್ರಮಿಸಬೇಕು ಎಂದು ಬಿಜೆಪಿ ಮುಖಂಡ ಪ್ರದೀಪ ಶೆಟ್ಟರ ಕರೆ ನೀಡಿದರು.
ಪಟ್ಟಣದ ಕರಿಕಟ್ಟಿ ಬಸವೇಶ್ವರ ವೃತ್ತದ ಪಕ್ಕದಲ್ಲಿರುವ ಮರಗಮ್ಮನ ದೇವಸ್ಥಾನ ಹತ್ತಿರದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ನೆನಪಿಸಿದರೇ ಸಾಕು ಜನರೆ ಮತ್ತೆ ಈ ಬಾರಿ ಮೋದಿಜಿ ಅವರಿಗೆ ಮತ ಹಾಕಿ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಮುಖಂಡರಾದ ವಿರುಪಾಕ್ಷ ಮಾಮನಿ ಮಾತನಾಡಿ, ಈ ಚುನಾವಣೆ ನಿಮಿತ್ತವಾಗಿ ಕಾಂಗ್ರೆಸ್ ಪಕ್ಷದವರು ಸಾಧ್ಯವಾಗದೆ ಇರುವಂತ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡುತ್ತಿದ್ದು, ಆ ಹಣ ಎಲ್ಲಿಂದ ತರುತ್ತಾರೆ ಎಂಬುವುದು ಪ್ರಶ್ನಾರ್ಹವಾಗಿದೆ ಎಂದು ಲೇವಡಿ ಮಾಡಿದರು.ಮಂಡಳ ಅಧ್ಯಕ್ಷ ಈರಣ್ಣ ಚಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವ್‌ಕುಮಾರ್ ನವಲಗುಂದ, ಜೆಡಿಎಸ್ ಪಕ್ಷದ ಮುಖಂಡರಾದ ಸೌರಬ್ ಚೋಪ್ರಾ, ಪಂಚನಗೌಡ ದ್ಯಾಮನಗೌಡರ, ಎಫ್.ಎಸ್.ಸಿದ್ದನಗೌಡರ, ಡಾ.ನಯನಾ ಹೇಮಂತ್ ಬಸ್ಮೆ, ಜಗದೀಶ ಕೌಜಗೇರಿ, ಜಗದೀಶ್ ಶಿಂತ್ರಿ, ಎ.ಆರ್.ನದಾಫ್, ಮಡಿವಾಳಪ್ಪ ಬಿದರಗಡ್ಡಿ, ದಾವಲ್‌ಸಾಬ್ ಚಪ್ಟಿ, ಈಶ್ವರ ಮೇಲಗಿರಿ, ಡಾ.ಹೇಮಂತ ಭಸ್ಮೆ, ನವೀನ ಸೋಮಣ್ಣವರ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೋಟ್..ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ನೆನಪಿಸಿದರೇ ಸಾಕು ಜನರೆ ಮತ್ತೆ ಈ ಬಾರಿ ಮೋದಿಜಿ ಅವರಿಗೆ ಮತ ಹಾಕಿ ಬೆಂಬಲ ನೀಡುತ್ತಾರೆ.
-ಪ್ರದೀಪ ಶೆಟ್ಟರ, ಬಿಜೆಪಿ ಮುಖಂಡರು.-----
ದೇಶದ ಭದ್ರತೆ ಮತ್ತು ಅಭಿವೃದ್ದಿಗೋಸ್ಕರ ಮೋದಿಜಿಯವರನ್ನು ಬೆಂಬಲಿಸಬೇಕಿದ್ದು, ಆಮಿಷಗಳಿಗೆ ಮಣೆ ಹಾಕದೇ ದೇಶದ ಅಭಿವೃದ್ದಿಗೆ ಒತ್ತು ನೀಡಬೇಕು.-ವಿರುಪಾಕ್ಷ ಮಾಮನಿ, ಬಿಜೆಪಿ ಮುಖಂಡರು.