ಅಸ್ಪೃಶ್ಯತೆ ಜೀವಂತವಾಗಿರಲು ಕಾಂಗ್ರೆಸ್ ಕಾರಣ: ಛಲವಾದಿ ನಾರಾಯಣಸ್ವಾಮಿ

| Published : Feb 08 2024, 01:37 AM IST

ಅಸ್ಪೃಶ್ಯತೆ ಜೀವಂತವಾಗಿರಲು ಕಾಂಗ್ರೆಸ್ ಕಾರಣ: ಛಲವಾದಿ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಅಸ್ಪೃಶ್ಯತೆ ರೂಪಾಂತರವಾಗಿದೆ, ಇದು ಜೀವಾಂತವಾಗಿರಲು ಕಾಂಗ್ರೆಸ್ ಕಾರಣ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಸ್ಪೃಶ್ಯತೆ ರೂಪಾಂತರವಾಗಿದೆ, ಇದು ಜೀವಾಂತವಾಗಿರಲು ಕಾಂಗ್ರೆಸ್ ಕಾರಣ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಬಿಜೆಪಿ ಎಸ್ಸಿ ಮೋರ್ಚಾ ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಕಾರಣ ನಮ್ಮನ್ನು ಆಳುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿರಬೇಕು, ನಮ್ಮಲ್ಲಿ ಯಾವುದಾದರೂ ಅಪನಂಬಿಕೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು, ರಾಜಕಾರಣದಲ್ಲಿ ಮುಂಚೂಣಿಗೆ ಬರಬೇಕು ಎಂದು ಕಿವಿಮಾತು ಹೇಳಿದರು. ಬಿಜೆಪಿ, ದಲಿತರ ವಿರೋಧಿ ಎಂಬ ಭಾವನೆ ಹುಟ್ಟು ಹಾಕಿದ್ದರು. ಆದರೆ, ಅದು ತಪ್ಪೆಂದು ಬಿಜೆಪಿ ಸಾಬೀತು ಪಡಿಸಿದೆ, ಪರಿಶಿಷ್ಟ ಜಾತಿ ಏಳಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಹಿಂದೆ ರಾಜ್ಯದಲ್ಲೂ ಅಧಿಕಾರದಲ್ಲಿತ್ತು ಎಂದ ಅವರು, ರಾಜಕೀಯ ಅಧಿಕಾರ ಮುಖ್ಯ ಎಂದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಜೀವನದಲ್ಲಿ ನೋವನ್ನು ಅನುಭವಿಸಿದ್ದರು, ಅಂತಹ ನೋವನ್ನು ನಮ್ಮ ಜನಾಂಗ ಮುಂದೆ ಅನುಭವಿಸಬಾರದೆಂದು ನಮ್ಮಲ್ಲೆರ ಹಿತರಕ್ಷಣೆಗಾಗಿ ಸಂವಿಧಾನ ರಚನೆ ಮಾಡಿದರು. ಇಂದು ಈ ಕಾರ್ಯಕ್ರಮದಲ್ಲಿ ಇಷ್ಟು ಸಂಖ್ಯೆಯಲ್ಲಿ ನಾವುಗಳು ಭಾಗವಹಿಸಿದ್ದೇವೆ ಎಂದರೆ ಇದಕ್ಕೆ ಕಾರಣ ಅಂಬೇಡ್ಕರ್‌ ಎಂದು ಹೇಳಿದರು. ಅಂಬೇಡ್ಕರ್‌ರವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಪಕ್ಷದವರು ಅವರನ್ನು ಸೋಲಿಸಿದರು. ಹಾಗಿದ್ದರೂ ಕೂಡ ಅವರ ಮೇಲೆ ಹಗೆ ಸಾಧಿಸಲಿಲ್ಲ. ಅಂಬೇಡ್ಕರ್ ದೈವ ಸ್ವರೂಪಿ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ಅಂಬೇಡ್ಕರ್‌ ಬದುಕಿದ್ದಾಗ ಅಪಮಾನ ಮಾಡಿದ, ಸತ್ತಾಗ ಅಪಮಾನ ಮಾಡಿರುವ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿಯೋ, ಭಾರತ ರತ್ನ ಕೊಡಬೇಕೆಂದು ಪ್ರಸ್ತಾವನೆ ಸಲ್ಲಿಸಿ, ಕೊಡುವಂತಹ ಕೆಲಸ ಮಾಡಿದ ಬಿಜೆಪಿ ಅಂಬೇಡ್ಕರ್ ವಿರೋಧಿಯೋ, ಪಂಚ ಧಾಮ ಗಳನ್ನು ಪಂಚ ತೀರ್ಥವನ್ನಾಗಿ ಅಭಿವೃದ್ಧಿಪಡಿಸಿದ್ದು ಬಿಜೆಪಿ ಸರ್ಕಾರ. ಮೋದಿ ಹಾಗೂ ಬಿಜೆಪಿ ಅಂಬೇಡ್ಕರ್ ವಿರೋಧಿನಾ ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪರಸ್ಪರ ಎತ್ತಿ ಕಟ್ಟುವುದು ಕಾಂಗ್ರೆಸ್‌ನ ಒಂದು ಕೂಟ ನೀತಿ. ಅಂದು ಅಂಬೇಡ್ಕರ್ ಅವರನ್ನು ಬೆಂಬಲಿಸಿದ್ದು ಜನಸಂಘ ಎಂದರು. ಮೋದಿ ಪ್ರಧಾನಿಯಾದ ತಕ್ಷಣ ಮೊದಲು ಸಂಸತ್ ಮೆಟ್ಟಿಲಿಗೆ ನಮಸ್ಕಾರ ಮಾಡಿದರು. ಒಳಗೆ ಹೋದಾಗ ಸಂವಿಧಾನದ ಪ್ರತಿಗೆ ನಮಸ್ಕಾರ ಮಾಡಿದ್ದರು. ನ. 26 ರಂದು ಸಂವಿಧಾನ ಗೌರವ ದಿನ ಘೋಷಣೆ ಮಾಡಿದ್ದು ನರೇಂದ್ರ ಮೋದಿ ಎಂದು ಹೇಳಿದರು. ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಕೆ.ಪಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಆರ್. ಮಹೇಶ್, ಸಂಪಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಜೆ.ಡಿ. ಲೋಕೇಶ್, ಹಂಪಯ್ಯ, ಹಿರೇಮಗಳೂರು ಪುಟ್ಟಸ್ವಾಮಿ, ವಾದಿರಾಜ್, ರೇವನಾಥ್‌, ಹಿರೇಮಗಳೂರು ನಿಂಗಪ್ಪ, ಜಯಪಾಲ್ ಜಯಶೀಲ ಉಪಸ್ಥಿತರಿದ್ದರು.

7 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಬುಧವಾರ ನಡೆದ ಬಲವರ್ಧನೆಗಾಗಿ ಭೀಮ ಸಮಾವೇಶವನ್ನು ಮಾಜಿ ಸಚಿವ ಸಿ.ಟಿ. ರವಿ ಉದ್ಘಾಟಿಸಿದರು. ಛಲವಾದಿ ನಾರಾಯಣಸ್ವಾಮಿ, ಆರ್. ಮಹೇಶ್, ಸಂಪಗಿ, ದೇವರಾಜ್ ಶೆಟ್ಟಿ ಇದ್ದರು.