ಸಾರಾಂಶ
ಬ್ಲಾಕ್ ಕಾಂಗ್ರೆಸ್ ವತಿಯಿಂದ ‘ವೋಟ್ ಚೋರ್, ಗದ್ದಿ ಚೋಡ್’ ಕಾರ್ಯಕ್ರಮ ಉರ್ವ ಮಾರ್ಕೆಟ್ ಬಳಿ ನಡೆಯಿತು. ಸಾರ್ವಜನಿಕ ಸಭೆಯ ಬಳಿಕ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ನೂರಾರು ಮಂದಿ ಸಹಿ ಹಾಕಿ ಬೆಂಬಲ ಸೂಚಿಸಿದರು.
ಮಂಗಳೂರು: ಬಿಜೆಪಿ ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ.
ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ‘ವೋಟ್ ಚೋರ್, ಗದ್ದಿ ಚೋಡ್’ ಕಾರ್ಯಕ್ರಮ ಉರ್ವ ಮಾರ್ಕೆಟ್ ಬಳಿ ನಡೆಯಿತು. ಸಾರ್ವಜನಿಕ ಸಭೆಯ ಬಳಿಕ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ನೂರಾರು ಮಂದಿ ಸಹಿ ಹಾಕಿ ಬೆಂಬಲ ಸೂಚಿಸಿದರು.ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮತಗಳ್ಳತನ ನಡೆಸೋದು ಅಘಾತಕಾರಿ ಬೆಳವಣಿಗೆ. ಪ್ರತಿಯೊಬ್ಬರ ಮತವನ್ನು ಕಸಿದುಕೊಳ್ಳುವ ಕ್ರಮ ಕಾನೂನು ಬಾಹಿರವಾದದ್ದು. ಬಿಜೆಪಿಯವರು ಅಭಿವೃದ್ಧಿ ಕೆಲಸಗಳನ್ನು ನಡೆಸದೆ ಮತ ಕಳ್ಳತನ ಮಾಡಿ ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವುದು ಸ್ವಷ್ಟವಾಗಿದೆ ಎಂದು ಹೇಳಿದರು. ಮಾಜಿ ಶಾಸಕ ಜೆ.ಅರ್. ಲೋಬೊ ಮಾತನಾಡಿ, ಮತಗಳ್ಳತನ ಮಂಗಳೂರು ನಗರದಲ್ಲಿಯೂ ನಡೆದಿದ್ದು ಇದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಈ ಬಗ್ಗೆ ನಾನು ನ್ಯಾಯಾಲಯದಲ್ಲಿಯೂ ಪ್ರಶ್ನೆ ಮಾಡಿರುವುದಾಗಿ ತಿಳಿಸಿದರು.ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಮೂಡ ಅಧ್ಯಕ್ಷ ಡಾ.ಬಿ.ಜಿ. ಸುವರ್ಣ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯಕ್, ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ರೂಪಾ ಚೇತನ್, ಯುವ ಕಾಂಗ್ರೆಸ್‌ನ ಒಲ್ವಿನ್ ಕಾಸ್ತಲಿನೋ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಕಾಶ್ ಸಾಲ್ಯಾನ್ ವಹಿಸಿದ್ದರು. ಕಾಂಗ್ರೆಸ್ ನಾಯಕರಾದ ಪಿ.ಸಿ ಗಣೇಶ್ ಸ್ವಾಗತಿಸಿದರು, ಚೇತನ್ ವಂದಿಸಿದರು.ಪ್ರೇಮ್ ಬಲ್ಲಾಳ್‌ಬಾಗ್, ತನ್ವೀರ್ ಷಾ, ಸತೀಶ್ ಪೆಂಗಲ್, ಟಿ.ಕೆ. ಸುಧೀರ್, ಆಲ್ಟೇನ್ ಡಿಕುನ್ಹ, ಮೀನಾ ಟೆಲ್ಲಿಸ್, ರಿತೇಶ್ ಶಕ್ತಿನಗರ, ಯೋಗೇಶ್ ನಾಯಕ್, ಜೇಮ್ಸ್ ಪ್ರವೀಣ್, ಶಾಂತಲಾ ಗಟ್ಟಿ, ಚಂದ್ರಹಾಸ ಪೂಜಾರಿ ಕೋಡಿಕಲ್ ಇದ್ದರು.