ಸಾರಾಂಶ
ಜನ್ಮ ಭೂಮಿ ಋಣ ತೀರಿಸಲು ಮಿತ್ರ ಫೌಂಡೇಶನ್ ಸ್ಥಾಪಿಸಿ ತಾಲೂಕಿನ ಬಡವರು, ದೀನದಲಿತರ, ಹಿಂದುಳಿದ ವರ್ಗಗಳ ಏಳಿಗೆಗೆ, ದೇವಾಲಯಗಳ ಜೀರ್ಣೋದ್ದಾರಕ್ಕೆ, ಅನಾರೋಗ್ಯಕ್ಕೆ ತುತ್ತಾದವರಿಗೆ, ರೈತರಿಗೆ ನೆರವು, ಯುವಕರ ಕ್ರೀಡೆಗಳಿಗೆ ಪ್ರೋತ್ಸಾಹ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನೆರವು ನೀಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಿತ್ರ ಫೌಂಡೇಶನ್ ಸ್ಥಾಪಿಸಿ ತಾಲೂಕಿನ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಸಮಾಜಸೇವಾ ಕೆಲಸಗಳನ್ನು ಮಾಡುತ್ತಿರುವ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಮಾದರಿ ರಾಜಕಾರಣಿ ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್ ತಿಳಿಸಿದರು.ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಅವರ 52 ನೇ ಹುಟ್ಟುಹಬ್ಬದ ಅಂಗವಾಗಿ ಒಳ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿದರು.
ಜನ್ಮ ಭೂಮಿ ಋಣ ತೀರಿಸಲು ಮಿತ್ರ ಫೌಂಡೇಶನ್ ಸ್ಥಾಪಿಸಿ ತಾಲೂಕಿನ ಬಡವರು, ದೀನದಲಿತರ, ಹಿಂದುಳಿದ ವರ್ಗಗಳ ಏಳಿಗೆಗೆ, ದೇವಾಲಯಗಳ ಜೀರ್ಣೋದ್ದಾರಕ್ಕೆ, ಅನಾರೋಗ್ಯಕ್ಕೆ ತುತ್ತಾದವರಿಗೆ, ರೈತರಿಗೆ ನೆರವು, ಯುವಕರ ಕ್ರೀಡೆಗಳಿಗೆ ಪ್ರೋತ್ಸಾಹ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನೆರವು ನೀಡುತ್ತಿದ್ದಾರೆ ಎಂದರು.ಜಿಪಂ ಮಾಜಿ ಸದಸ್ಯ ಮಾಧವಪ್ರಸಾದ್ ಮಾತನಾಡಿ, ಸರಳ ವ್ಯಕ್ತಿತ್ವಅಳವಡಿಸಿಕೊಂಡು, ಜನಾನುರಾಗಿ ಎಲ್ಲರ ವಿಶ್ವಾಸಗಳಿಸಿ ಪಕ್ಷ ಸಂಘಟಿಸುತ್ತಿರುವ ವಿಜಯ್ ರಾಮೇಗೌಡರು ನಮಗೆ ಮಾದರಿಯಾಗಿದ್ದು, ಇನ್ಮೂ ಹೆಚ್ಚಿನ ರಾಜಕೀಯ ಸ್ಥಾನಮಾನಗಳು ಸಿಗಲಿ. ತಾಲೂಕಿನ ಭವಿಷ್ಯದ ನಾಯಕನಾಗಿ ಹೊರಹೊಮ್ಮಲಿ ಎಂದು ಶುಭಕೋರಿದರು.
ಈ ವೇಳೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು, ಪುರಸಭಾ ಸದಸ್ಯರಾದ ಎಚ್.ಎನ್. ಪ್ರವೀಣ್, ಡಿ.ಪ್ರೇಮ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಚೇತನ ಮಹೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ವಿಜಯ್ ರಾಮೇಗೌಡರ ಆಪ್ತಸಹಾಯಕ ಬಸವರಾಜು, ಛಲವಾದಿ ಮಹಾಸಭಾ ಜಿಲ್ಲಾದ್ಯಕ್ಷ ಮಂಬಳ್ಳಿಜಯರಾಮು ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫಯಾಜ್‌ಅಹಮದ್, ಉಪಾಧ್ಯಕ್ಷ ಅಹಮದ್, ಕಾಂಗ್ರೆಸ್ ಮುಖಂಡರಾದ ಮುರುಕನಹಳ್ಳಿ ವಿಜಯ್‌ಕುಮಾರ್, ಸ್ನೇಹಿತರಮೇಶ್, ಹೊಸಹೊಳಲು ಕೃಷ್ಣೇಗೌಡ, ಪ್ರಕಾಶ್ ಸೇರಿದಂತೆ ನೂರಾರು ವಿಜಯ್ ರಾಮೇಗೌಡರ ಅಭಿಮಾನಿಗಳು ಹಾಜರಿದ್ದರು.