ನರಸಿಂಹರಾಜಪುರಕಾಂಗ್ರೆಸ್ ಸರ್ಕಾರ ಬಸವಣ್ಣನವರ ಆಶಯದಂತೆ ಬಡವರ, ಶ್ರಮಿಕರ, ಜಾತಿ, ಮತ ಬೇದ ಭಾವವಿಲ್ಲದೆ ದುರ್ಬಲ ವರ್ಗ ದವರ ಏಳಿಗೆಗಾಗಿ ಕಾರ್ಯಕ್ರಮ ರೂಪಿಸಿ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

- : ಟಿ.ಡಿ.ರಾಜೇಗೌಡ ಅಭಿಮತ। ಮೆಣಸೂರು ಬಸವ ಕೇಂದ್ರ ಆವರಣದಲ್ಲಿ ಸಮುದಾಯಭವನಕ್ಕೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕಾಂಗ್ರೆಸ್ ಸರ್ಕಾರ ಬಸವಣ್ಣನವರ ಆಶಯದಂತೆ ಬಡವರ, ಶ್ರಮಿಕರ, ಜಾತಿ, ಮತ ಬೇದ ಭಾವವಿಲ್ಲದೆ ದುರ್ಬಲ ವರ್ಗ ದವರ ಏಳಿಗೆಗಾಗಿ ಕಾರ್ಯಕ್ರಮ ರೂಪಿಸಿ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶನಿವಾರ ಸಂಜೆ ಮೆಣಸೂರಿನ ಬಸವ ಕೇಂದ್ರದ ಆವರಣದಲ್ಲಿ ₹75 ಲಕ್ಷ ವೆಚ್ಚದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿ ಮಾಜಿ ಸಿಎಂ ಸಿದ್ದರಾಮಯ್ಯ 2023 ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನರಸಿಂಹರಾಜಪುರಕ್ಕೆ ಆಗಮಿಸಿದಾಗ ಬಸವಕೇಂದ್ರಕ್ಕೆ ಭೇಟಿ ನೀಡಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಅನುದಾನ ನೀಡುವ ಭರವಸೆ ನೀಡಿದ್ದರು. ಅದರಂತೆ ಅನುದಾನ ನೀಡಿ ಕಾಮ ಗಾರಿಗೆ ಶಂಕು ಸ್ಥಾಪನೆ ನೆರವೇರಿ ಸಲಾಗಿದೆ. ವೀರಶೈವ ಲಿಂಗಾಯಿತ ರೆಡ್ಡಿ ಸಮುದಾಯದವರು ಶ್ರಮಿಕ ವರ್ಗದವರಾಗಿದ್ದು 12 ನೇ ಶತಮಾನ ದಲ್ಲಿ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದ ಬಸವಣ್ಣನ ಅನುಯಾಯಿಗಳಾಗಿದ್ದಾರೆ ಎಂದರು.

ಈ ಸಮುದಾಯ ಭವನಕ್ಕೆ ನೀಡಿದ ₹75 ಲಕ್ಷ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಇನ್ನೂ 15 ದಿನದ ಒಳಗೆ ಕಾಮಗಾರಿ ಆರಂಭವಾಗಲಿದೆ. ಮೇಲಂತಸ್ತಿನ ಕಾಮಗಾರಿಗೆ ಇನ್ನೂ ₹50 ಲಕ್ಷ ಅವಶ್ಯಕತೆಯಿದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ. ಈ ಅನುದಾನ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸಮಾಜದಿಂದ ಅಭಿನಂದಿಸಲಾಯಿತು.

ಬಸವ ಕೇಂದ್ರದ ಅಧ್ಯಕ್ಷ ಶಾಂತರಾಜು, ಪಿಸಿಎಆರ್.ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ನಿರ್ದೇಶಕ ದೇವಂತ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ಪಶ್ಚಿಮಘಟ್ಟ ಸಂರಕ್ಷಣ ಕಾರ್ಯಪಡೆ ಸಮಿತಿ ನಿರ್ದೇಶಕ ಪಿ.ಆರ್.ಸದಾಶಿವ,ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರು ಬೈಲುನಟರಾಜ್, ಬಸವ ಕೇಂದ್ರದ ಉಪಾಧ್ಯಕ್ಷ ಸೋಮೇಶ್, ಜೋಸೆಫ್, ಎಸ್.ಡಿ.ರಾಜೇಂದ್ರ, ಬಿನು, ಸುನೀಲ್ ಕುಮಾರ್, ವೈ.ಎಸ್.ರವಿ, ಮೋಹನ್ ಲಿಂಗಾಯಿತ ಉಪಸ್ಥಿತರಿದ್ದರು.