ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ದ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಎನ್ ಎಸ್ ಯುಐ ವತಿಯಿಂದ ಬೃಹತ್ ಪ್ರತಿಭಟನೆ ಬಿಸಿರೋಡಿನ ಪ್ಲೈ ಓವರ್ ಕೆಳ ಭಾಗದಲ್ಲಿ ನಡೆಯಿತು.
ಬಂಟ್ವಾಳ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ದ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಎನ್ ಎಸ್ ಯುಐ ವತಿಯಿಂದ ಬೃಹತ್ ಪ್ರತಿಭಟನೆ ಬಿಸಿರೋಡಿನ ಪ್ಲೈ ಓವರ್ ಕೆಳ ಭಾಗದಲ್ಲಿ ನಡೆಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಯುಪಿಎ ಸರಕಾರ ಇರುವಾಗ ಹಾಗೂ ಬಿಜೆಪಿ ಎನ್‌ಡಿಎ ಸರಕಾರದ ಅವಧಿಯಲ್ಲಿನ ಕಚ್ಚಾ ತೈಲದ ಬೆಲೆಯ ಬಗ್ಗೆ ಸಾರ್ವಜನಿಕರು ಅವಲೋಕನ ಮಾಡಬೇಕಾಗಿದೆ ಎಂದರು. ಅ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದ್ದರೂ ಕೂಡ ಜನರಿಗೆ ಹೊರೆಯಾಗದಂತೆ ಯುಪಿಎ ಸರಕಾರ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಿದೆ ಎಂದು ಹೇಳಿದರು.
ಇವತ್ತು ನಿರಂತರವಾಗಿ ದುರುದ್ದೇಶದಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ. ಬಿಜೆಪಿ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಮಾಡುತ್ತಿದೆ. ನಮ್ಮ ವರ್ತನೆಗಳು ಹಾಗೆ ಆಗಿವೆ. ಯಥಾಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಜಾಯಮಾನ ನಮ್ಮದಾಗಬೇಕು ಎಂದರು.ಅವಿದ್ಯಾವಂತ ಹೆಬ್ಬೆಟ್ಟು ಒತ್ತುವವರು ಬಿಜೆಪಿಯಲ್ಲಿ ಮಂತ್ರಿಗಳಾಗುತ್ತಿದ್ದಾರೆ. ಇದರಿಂದ ದೇಶಕ್ಕೆ ಕೇಡು ಎಂದ ಅವರು ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಒಂದು ಒತ್ತಾಯ ಮಾಡಿದರು.
ಮುಖಂಡ ಎಂ.ಜಿ. ಹೆಗಡೆ ಮಾತನಾಡಿ, ಮೋದಿ ಸರ್ಕಾರ ಸರ್ವಾಧಿಕಾರಿ ಮನಸ್ಥಿತಿಯಲ್ಲಿ ಪ್ರಶ್ನೆ ಕೇಳುವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಪ್ರಾಮಾಣಿಕವಾಗಿ ಜನಬೆಂಬಲ ಬಿಜೆಪಿಗಿಲ್ಲ. ಒಡೆದು ಆಳುವ ನೀತಿ ಬಿಜೆಪಿಯದ್ದು. ಹೆಣ ಹಾಕಿ ಮತ ಪಡೆಯವ ಬಿಜೆಪಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿಹೋದರೆ, ದೇಶದ ಪ್ರಧಾನಿ ವಿದೇಶ ಪ್ರವಾಸದ ಮೋಜಿನಲ್ಲಿ ಇರುವುದು ನ್ಯಾಯನಾ? ಎಂದು ಪ್ರಶ್ನೆ ಮಾಡಿದರು.ಮುಖಂಡರಾದ ಪಿಯೂಸ್ ಎಲ್. ರೋಡ್ರಿಗಸ್, ಬೇಬಿ ಕುಂದರ್, ಪದ್ಮಶೇಖರ್ ಜೈನ್, ಅಬ್ಬಾಸ್ ಅಲಿ, ಪದ್ಮನಾಭ ರೈ, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಸಂಜೀವ ಪೂಜಾರಿ, ಸದಾಶಿವ ಬಂಗೇರ, ಜಯಂತಿ ಪೂಜಾರಿ, ಮಧುಸೂದನ್, ಶೈಲಜಾ ರಾಜೇಶ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮಹಮ್ಮದ್ ನಂದಾವರ, ಚಿತ್ತರಂಜನ್ ಶೆಟ್ಟಿ, ವಾಸು ಪೂಜಾರಿ, ಮೋಹನ್ ಶೆಟ್ಟಿ, ವೆಂಕಪ್ಪ ಪೂಜಾರಿ, ನಿರಂಜನ್ ರೈ, ಜಗದೀಶ್ ಕುಂದರ್, ಶೈಲೇಶ್ ಪೂಜಾರಿ, ಸಿದ್ದೀಕ್ ಬೋಗೊಡಿ, ಇಬ್ರಾಹಿಂ ನವಾಜ್, ಉಮೇಶ್ ನರಿಕೊಂಬು, ಮಹಮ್ಮದ್ ಶರೀಫ್, ಕುಶಲ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.