ಗಲಭೆಗೆ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಓಲೈಕೆ ಕಾರಣ: ಎಂ.ಪಿ.ರೇಣುಕಾಚಾರ್ಯ

| Published : Sep 10 2025, 01:03 AM IST

ಸಾರಾಂಶ

ಮದ್ದೂರಿನಲ್ಲಿ ಅಲ್ಪಸಂಖ್ಯಾತ ಗೂಂಡಾಗಳು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ಭಂಗ ಕೃತ್ಯ ನಡೆಸಿದ್ದು ಇಂತಹ ಘಟನೆಗಳು ನಡೆಯಲು ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿರುವುದೇ ಕಾರಣವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮದ್ದೂರಿನಲ್ಲಿ ಅಲ್ಪಸಂಖ್ಯಾತ ಗೂಂಡಾಗಳು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ಭಂಗ ಕೃತ್ಯ ನಡೆಸಿದ್ದು ಇಂತಹ ಘಟನೆಗಳು ನಡೆಯಲು ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿರುವುದೇ ಕಾರಣವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ತಾಲೂಕಿನ ಕುಂದೂರು ಗ್ರಾಮದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮದ್ದರೂ ಹಾಗೂ ಕೆಲವು ಕಡೆ ಗಣೇಶ ವಿಸರ್ಜನೆ ಸಮಯದಲ್ಲಿ ಕಲ್ಲು ತೂರಾಟ ಮಾಡಿರುವ ಬಗ್ಗೆ ಮಾತನಾಡಿ, ಸರ್ಕಾರ ಇಂತಹವರ ಬಗ್ಗೆ ಮೃದು ಧೋರಣೆ ತೋರುತ್ತಿರುವ ಫಲವಾಗಿ ಅವರು ಸಮಾಜದಲ್ಲಿ ಅಶಾಂತಿ ಉಂಟಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದರು.

ಮಹಿಳೆಯರ ಮೇಲೆ ಲಾಠಿ ಜಾರ್ಜ್‌ಗೆ ಖಂಡನೆ:

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ಎಸೆದು ಉಗುಳಿರುವುದು ಕೆಲ ಅಲ್ಪಸಂಖ್ಯಾತರು, ಆದರೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಹಿಂದೂಗಳ ಮೇಲೆ, ಮಹಿಳೆಯರು ಎಂದು ನೋಡದೆ ಮನಸೋಇಚ್ಚೆ ಮಹಿಳೆಯರ ಮೇಲೆ ಲಾಠಿ ಚಾಜ್ ಮಾಡಿರುವುದನ್ನು ಖಂಡಿಸುತ್ತೇನೆ. ಪ್ರತಿ ಬಾರಿ ಗಲಾಟೆಗಳು ನಡೆದಾಗ ನೋಡುತ್ತೇವೆ, ಪರಿಶೀಲಿಸುತ್ತೇವೆ, ಚಿಕ್ಕ ಗಲಾಟೆ ಎಂದು ತಿಪ್ಪೆ ಸಾರಿಸುವ ಗೃಹ ಸಚಿವ ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಧರ್ಮ ಕಾಪಾಡುವುದು ಹಿಂದೂಗಳಾದ ನಮ್ಮ ಕರ್ತವ್ಯ, ಆ ಕೆಲಸವನ್ನು ಬಿಜೆಪಿ ಮಾಡುತ್ತಿದೆ, ನಾವು ತುಷ್ಟೀಕರಣ ರಾಜಕಾರಣ ಮಾಡುವುದಿಲ್ಲ. ನಮಗೆ ನಮ್ಮ ಧರ್ಮವೇ ಮುಖ್ಯ. ನಿಮ್ಮ ಹಾಗೆ ಪಾಕಿಸ್ತಾನದ ಪರ ಜೈಕಾರ ಹಾಕಿದವರು, ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡುವವರು, ಹಾಗೆಯೇ ಉಗುಳುವವರನ್ನು ನಮ್ಮ ಬ್ರದರ್ಸ್‌ ಎನ್ನುವುದಿಲ್ಲ ಎಂದು ಕುಟುಕಿದರು.

ಈ ಹಿಂದೆ ಸಚಿವ ಸಂಪುಟದಲ್ಲಿ ಗೂಂಡಾಗಳ ಮೇಲಿನ ಕೇಸ್ ಗಳನ್ನು ವಾಪಾಸ್ ಪಡೆದಿದ್ದೆ ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸಲು ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟ ಅವರು ನಾನು ಎಂದಗೂ ಧರ್ಮವನ್ನು ರಾಜಕಾರಣಕ್ಕೆ ಬಳಸುವುದಿಲ್ಲ ಅದರ ಅವಶ್ಯಕತೆ ತನಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಆದರೆ ಹಿಂದೂ ಧರ್ಮಕ್ಕೆ ಅಪಮಾನವಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.