ಕಾಂಗ್ರೆಸ್‌ನದ್ದು ಹಿಂದೂ ವಿರೋಧಿ, ಭ್ರಷ್ಟ ಆಡಳಿತ: ರೇಣುಕಾಚಾರ್ಯ

| Published : Oct 20 2025, 01:02 AM IST

ಕಾಂಗ್ರೆಸ್‌ನದ್ದು ಹಿಂದೂ ವಿರೋಧಿ, ಭ್ರಷ್ಟ ಆಡಳಿತ: ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ.ಭ್ರಷ್ಠ ಹಾಗೂ ಅಭಿವೃದ್ದಿ ಶೂನ್ಯ ಸರ್ಕಾರವಾಗಿದ್ದು, ಒಂದು ರೀತಿಯಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಹಿಂದೂ ವಿರೋಧಿ.ಭ್ರಷ್ಠ ಹಾಗೂ ಅಭಿವೃದ್ದಿ ಶೂನ್ಯ ಸರ್ಕಾರವಾಗಿದ್ದು, ಒಂದು ರೀತಿಯಲ್ಲಿ ತೋಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ತಾಲೂಕಿನಲ್ಲಿ ಭಾನುವಾರ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ರಾಷ್ಟ್ರೀಯ ಸಂಘ ಪರಿವಾರ ರಾಷ್ಟ್ರಮಟ್ಟದ ಸಂಸ್ಥೆ ಹಾಗೂ ರಾಷ್ಠ್ರಭಕ್ತರ ಸಂಘವಾಗಿದೆ. ಇದರ ಸ್ವಯಂ ಸೇವಕರು ತಮ್ಮ ಹಿತಾಸಕ್ತಿ ಮರೆತು ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಜನರ ಹಿತಕ್ಕಾಗಿ ನಿಸ್ವಾರ್ಥ ಸೇವೆ ಮಾಡುವ ಸಂಘವಾಗಿದೆ. ಆದರೆ ರಾಜ್ಯ ಸಚಿವ ಪ್ರಿಯಾಂಕ್‌ ಖರ್ಗೆಯವರು ತಾನು ಕಾಂಗ್ರೆಸ್ ಪಕ್ಷದ ವರಿಷ್ಠ ಮಲ್ಲಿಕಾರ್ಜನ ಖರ್ಗೆಯವರ ಮಗ ಎಂಬ ಕಾರಣಕ್ಕೆ ರಾಜ್ಯದಲ್ಲಿ ಒಂದು ರೀತಿಯ ಸೂಪರ್‌ ಸಿಎಂನಂತೆ ವರ್ತಿಸುತ್ತ ಆರ್‌ಎಸ್‌ಎಸ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ದೂರಿದರು.

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪೂರ್ವಾನುಮತಿ ಪಡೆದಿದ್ದರೂ ಕೂಡ ರಾತ್ರೋರಾತ್ರಿ ಆರ್‌ಎಸ್‌ಎಸ್‌ನ ಬಂಟಿಂಗ್ಸ್, ಭಗವಾಧ್ವಜ, ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರುವುಗೊಳಿಸಿದ್ದಾರೆ ಇದು ನಿಮಗೆ ಹಾಗೂ ನಿಮ್ಮ ಸರ್ಕಾರಕ್ಕೆ ಶೋಭೆತರುವ ಕೆಲಸವಲ್ಲ ಎಂದರು.

ಅಲ್ಪಸಂಖ್ಯಾರನ್ನು ಓಲೈಸುವ ಕೆಲಸ ಮಾಡುತ್ತ, ಓಟ್ ಬ್ಯಾಂಕ್ ರಾಜಕಾರಣವನ್ನು ಕಾಂಗ್ರೆಸ್ ನಾಯಕರು ಮಾಡುತ್ತ ಹಿಂದೂ ಮತ್ತು ಹಿಂದುಪರ ಸಂಘಟನೆಗಳ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತ ಅವರ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರು ಲಾಂಗು, ಮಚ್ಚು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಹಿಂದುಗಳ ಮೆರವಣೆಗೆಗಳ ಮೇಲೆ ಹಲ್ಲೆ ನಡೆಸಿದರೂ ಕೂಡ ಈಗಿನ ಸರ್ಕಾರ ಯಾವುದೇ ರೀತಿಯ ಕಠಿಣ ಕ್ರಮ ಜರುಗಿಸದೇ ಭಂಡತನ ಪ್ರದರ್ಶನ ಮಾಡುತ್ತಿದೆ ಎಂದು ದೂರಿದರು.

ಗಣವೇಷಧಾರಿಯಾಗಿ ಪಥಸಂಚಲನದಲ್ಲಿ ಭಾಗವಹಿಸಿದ ಪಿಡಿಒ ಅವರನ್ನು ಸಸ್ಪೆಂಡ್ ಮಾಡಿದ್ದಾರೆ ಕೂಡಲೇ ಪಿಡಿಓ ಸಸ್ಪೆಂಡ್ ರದ್ದುಪಡಿಸಬೇಕು. ಇಲ್ಲವಾದಲ್ಲಿ ಅಲ್ಪಸಂಖ್ಯಾತ ಕೋಮಿನ ಸರ್ಕಾರಿ ನೌಕರರು ನಾಮಾಜ್‌ನಲ್ಲಿ ಭಾಗವಹಿಸುತ್ತಾರೆ. ಅವರನ್ನು ಕೂಡ ಸಸ್ಪೆಂಡ್ ಮಾಡಿ ಎಂದು ಒತ್ತಾಯಪಡಿಸಿದರು.

ನೀವು ಎಷ್ಟು ಹಿಂದುಗಳ ಮೇಲೆ ದಬ್ಬಾಳಿಕೆ ಮಾಡುತ್ತೀರೋ ಅಷ್ಟೇ ಹಿಂದುಗಳು ಗಟ್ಟಿಯಾಗುತ್ತಾರೆ. ನಿಮ್ಮ ಹಾಗೂ ನಿಮ್ಮ ಸರ್ಕಾರದ ವಿರುದ್ಧ ತಿರುಗಿಬೀಳುತ್ತಾರೆ. ಈ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ಆರ್‌ಎಸ್‌ಎಸ್‌ ನಿನ್ನೆ, ಇಂದಿನದಲ್ಲ ಬ್ರಿಟಿಷರ ಕಾಲದಿಂದಲೂ ಇರುವ ಹಾಗೂ 100 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವ ರಾಷ್ಟ್ರಭಿಮಾನ ಹಾಗೂ ರಾಷ್ಟ್ರಿಯತೆಯನ್ನು ಜನರಲ್ಲಿ ಹುಟ್ಟುಹಾಕುವ ಸಂಘಟನೆಯಾಗಿದ್ದು ಸುಮಾರು 40 ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿರುವ ಸಂಘಟನೆಯಾಗಿದೆ. ತಾಕತ್ತಿದ್ದರೆ ಆರ್‌ಎಸ್‌ಎಸ್ ಬ್ಯಾನ್ ಮಾಡಿ ನೋಡೋಣ. ಇದು ರಾಜಕೀಯ ಸಂಸ್ಥೆಯಲ್ಲ ಬದಲಿಗೆ ರಾಷ್ಠ್ರಭಕ್ತರ ಸಂಘಟನೆಯಾಗಿದೆ ಎಂದು ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಅರಕರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ತರಗನಹಳ್ಳಿ ರಮೇಶ್ ಗೌಡ, ಚೀಲೂರು ಅಜ್ಜಯ್ಯ, ಮಾರುತಿನಾಯ್ಕ, ದೊಡ್ಡೇರಿ ಗಿರೀಶ್, ನೆಲಹೊನ್ನೆ ಮಂಜುನಾಥ, ದೇವರಾಜ್,ನಾಗರಾಜ್, ಬಡಾವಣೆ ರಂಗಪ್ಪ, ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.