ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವಗುರು ಸ್ಥಾನದಲ್ಲಿರಿಸಿದ್ದಾರೆ.ಅವರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕಾರ್ಯ ಬಿಹಾರದ ಜನತೆ ಮಾಡಿದ್ದಾರೆ.
ಕುಕನೂರು: ಬಿಹಾರದಲ್ಲಿ ಎನ್.ಡಿ.ಎ ಬಹುಮತದಿಂದ ವಿಜಯಶಾಲಿಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕ ಆಡಳಿತದ ಮೇಲೆ ಜನ ಇಟ್ಟಿರುವ ನಂಬಿಕೆ ಆಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಬಿಹಾರದಲ್ಲಿ ಎನ್.ಡಿ.ಎ ಬಹುಮತ ಪಡೆದ ಹಿನ್ನೆಲೆ ವಿಜಯೋತ್ಸವ ಆಚರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಬಿಜೆಪಿ ಪಕ್ಷದ ಸಂಘಟನೆ ನೋಡಲಾರದೆ ಮತ ಚೋರಿ ನಾಟಕ ಆಡ ಹತ್ತಿತ್ತು. ಅದಕ್ಕೆ ತಕ್ಕ ಉತ್ತರ ಈ ಬಹುಮತ ಆಗಿದೆ. ಮತ್ ಚೋರಿ ಎಂಬ ನಾಟಕ ಕಂಪನಿ ಕಟ್ಟಿಕೊಂಡು ಮಾಡಿದ ಅವರ ಡ್ರಾಮಾ ಪ್ರಾಮಾಣಿಕತೆ ಮುಂದೆ ಠುಸ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಜನ ಅಪಾರ ನಂಬಿಕೆ ಇಟ್ಟಿದ್ದಾರೆ.ಆ ನಂಬಿಕೆಯನ್ನು ಬಿಹಾರದ ಜನ ಬಹುಮತ ನೀಡುವ ಮೂಲಕ ಜಗತ್ತಿಗೆ ತೋರಿಸಿದ್ದಾರೆ. ಕಾಂಗ್ರೆಸ್ ಮಾಡುವ ಮಂಕುಬೂದಿ ಎರಚುವ ಕೆಲಸಕ್ಕೆ ಜನ ಸಾಥ್ ನೀಡಿಲ್ಲ. ಅವರನ್ನು ಮಕಾಡೆ ಮಲಗಿಸಿದ್ದಾರೆ. ನಂಬಿಕೆ, ವಿಶ್ವಾಸಕ್ಕೆ ಬಿಹಾರದ ಚುನಾವಣೆ ಸಾಕ್ಷಿಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವಗುರು ಸ್ಥಾನದಲ್ಲಿರಿಸಿದ್ದಾರೆ.ಅವರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕಾರ್ಯ ಬಿಹಾರದ ಜನತೆ ಮಾಡಿದ್ದಾರೆ. ನಿತೀಶ ಕುಮಾರ್ ಸಹ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯ ಜನರೆದುರಿಗೆ ತಲುಪಿಸಿದ್ದಾರೆ. ಈ ಅಭೂತಪೂರ್ವ ಗೆಲುವು ಬರೀ ಗೆಲುವಲ್ಲ, ಇದೊಂದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರಿಟ್ಟಿರುವ ವಿಶ್ವಾಸ,ನಂಬಿಕೆಯ ಪುನರುಚ್ಚರಿಸುವ ವಿಜಯ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ ಮಾತನಾಡಿ, ಕಾಂಗ್ರೆಸ್ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಎಲ್ಲ ರಾಜ್ಯದಲ್ಲೂ ತಕ್ಕ ಪಾಠ ಕಲಿಸುತ್ತಿದ್ದಾರೆ. ಈ ರಾಜ್ಯದಲ್ಲಿ ಸಹ ಅವರಿಗೆ ಶೀಘ್ರ ತಕ್ಕಪಾಠ ಸಹ ಆಗಲಿದೆ ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪುರಮಠ, ಪಪಂ ಮಾಜಿ ಅಧ್ಯಕ್ಷ ಶಂಭು ಜೋಳದ, ಎಪಿಎಂಸಿ ಮಾಜಿ ಸದಸ್ಯ ಹಂಚಾಳಪ್ಪ ತಳವಾರ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರಿದ್ದರು.;Resize=(128,128))
;Resize=(128,128))
;Resize=(128,128))