ಡಿಕೆಶಿ ಮೇಲಿನ ಕುಮಾರಸ್ವಾಮಿ ಹೇಳಿಕೆಗೆ ಖಂಡನೆ

| Published : Oct 11 2023, 12:46 AM IST

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಹಾರ್‌ ಜೈಲಿನ ಹೋಗುತ್ತಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ಇದೆ ರೀತಿ ಮುಂದುವರಿಸಿದರೆ ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ಸೇವಾದಳದ ಜಿಲ್ಲಾಧ್ಯಕ್ಷ ಎನ್.ಬಿ. ದಿನೇಶ್‌ ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ ಲಘುವಾಗಿ ಮಾತನಾಡುವುದನ್ನು ಎಚ್‌ಡಿಕೆ ಬಿಡಬೇಕು: ದಿನೇಶ್‌ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಹಾರ್‌ ಜೈಲಿನ ಹೋಗುತ್ತಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ಇದೆ ರೀತಿ ಮುಂದುವರಿಸಿದರೆ ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ಸೇವಾದಳದ ಜಿಲ್ಲಾಧ್ಯಕ್ಷ ಎನ್.ಬಿ. ದಿನೇಶ್‌ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತಾಡಿದ ಅವರು, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್‌ ಅವರ ವಿರುದ್ಧ ಏಕವಚನದಲ್ಲಿ ಮಾತನಾಡುವ ಮೂಲಕ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ನ ಯಾವುದೇ ಕಾರ್ಯಕರ್ತ ಸಹಿಸುವುದಿಲ್ಲ ಎಂದರು. ಜಾತ್ಯತೀತ ಎಂಬ ಪಕ್ಷ ಕಟ್ಟಿ ಇದೀಗ ಕೋಮುವಾದಿಗಳ ಜೊತೆ ಸೇರಿ ಮನಬಂದಂತೆ ಮಾತನಾಡುವ ಮನಸ್ಥಿತಿಯನ್ನು ಕುಮಾರಸ್ವಾಮಿ ಅವರು ಬದಲಾಯಿಸಿಕೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಅವರು ಮೈತ್ರಿಗೆ ಹೋಗಿರುತ್ತಾರೆ, ಉಪಮುಖ್ಯಮಂತ್ರಿಗಳ ಬಗ್ಗೆ, ಇವರು ಇಲ್ಲ ಸಲ್ಲದ ಆಪಾದನೆಯನ್ನು ಮಾಡುತ್ತಿದ್ದಾರೆ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರ ಇಲ್ಲದೆ ಧೃತಿಗೆಟ್ಟಿದ್ದಾರೆ, ದೇವರು ಇವರಿಗೆ ಸದ್ಬುದ್ಧಿ ಕೊಡಲಿ, ಯಾವಾಗಲೂ ಕೂಡ ಡಿ ಕೆ ಶಿವಕುಮಾರರವರು ಅಣ್ಣ ಎಂದು ಮಾತನಾಡುತ್ತಾರೆ. ಎಚ್ ಡಿ ಕುಮಾರಸ್ವಾಮಿ ಅವರು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಡಿ ಕೆ ಶಿವಕುಮಾರ್, ಡಿ ಕೆ ಶಿವಕುಮಾರ್ ಅಂದ್ರೆ ಕಾಂಗ್ರೆಸ್, ಇವರು ಕೆಪಿಸಿಸಿ ರಾಜ್ಯಾಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳ ಬಗ್ಗೆ, ಎಚ್.ಡಿ. ಕುಮಾರಸ್ವಾಮಿ ಅವರು ಹಾಗೂ ಇತರೆ ಯಾರೇ ಮಾತನಾಡಿದರು ನಾವು ಸಹಿಸುವುದಿಲ್ಲ. ಲಘುವಾಗಿ ಮಾತನಾಡಿದರೆ ನಾವು ಖಂಡಿಸಲೇಬೇಕಾಗುತ್ತದೆ ಲಘುವಾಗಿ ಮಾತನಾಡುವುದನ್ನು ಇಲ್ಲಿಗೆ ಬಿಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್‌. ಮಂಜುನಾಥ್ ಶರ್ಮಾ, ಮಂಜೇಗೌಡ, ಪ್ರಕಾಶ್, ಸುಪ್ರೀತ್, ಜಗದೀಶ್ ಇತರರು ಉಪಸ್ಥಿತರಿದ್ದರು.