ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿತ್ಯನಿರಂತರ ಹಿಂದು ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಸಮಾಜವನ್ನು ಸಂಘಟಿಸುವ ಮಹತ್ಕಾರ್ಯ ನಡೆಸುತ್ತಿರುವ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ರವರ ಮೇಲೆ ಸದಾ ಸವಾರಿ ನಡೆಸುತ್ತಿದೆ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿತ್ಯನಿರಂತರ ಹಿಂದು ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಸಮಾಜವನ್ನು ಸಂಘಟಿಸುವ ಮಹತ್ಕಾರ್ಯ ನಡೆಸುತ್ತಿರುವ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ರವರ ಮೇಲೆ ಸದಾ ಸವಾರಿ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಆರೋಪಿಸಿದ್ದಾರೆ.

ಹಿಂದು ಸಮಾಜಕ್ಕೆ, ಧರ್ಮಕ್ಕೆ ಯಾವುದೇ ಅನ್ಯಾಯ ಅಥವಾ ದಾಳಿಯಾದಾಗ ಸದಾ ಮುಂಚೂಣಿಯಲ್ಲಿದ್ದು ಹೋರಾಡುವ ಡಾ. ಭಟ್ ರವರು ಹಿಂದು ಸಮಾಜದ ಶಕ್ತಿ ಮತ್ತು ಆಸ್ತಿಯಾಗಿದ್ದಾರೆ. ಅವರ ಸಾಮಾಜಿಕ ಕಾಳಜಿ ಅಪಾರವಾಗಿದೆ. ತಮ್ಮ ಶಿಕ್ಷಣ ಸಂಸ್ಥೆಗಳ‌ ಮೂಲಕ ಲಕ್ಷಾಂತರ ವಿಧ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಹಸನುಗೊಳಿಸಿದವರು. ಕಲ್ಲಡ್ಕ ಪ್ರಭಾಕರ ಭಟ್ ಅಂತವರ ಮೇಲೆ ಕಾಂಗ್ರೆಸ್ ಸರ್ಕಾರ ಕೇವಲ ಓಲೈಕೆ ರಾಜಕೀಯದ ಲಾಲಸೆಗೆ ಅನಗತ್ಯ ವಾಗಿ ಕೇಸು ದಾಖಲಿಸುವ ಮೂಲಕ ದಮನಕಾರಿ ನೀತಿಯನ್ನು ತೋರಿಸುತ್ತಿದೆ. ಇದನ್ನು ತಕ್ಷಣ ಕೈಬಿಡಬೇಕು ಎಂದು ಸತೀಶ್ ಕುಂಪಲ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹಿಂದು‌ ನಾಯಕರ, ಕಾರ್ಯಕರ್ತರ ಮೇಲೆ ದಾಳಿ, ಹಿಂದು ಶ್ರದ್ಧೆಗಳ ಅವಮಾನಗಳು, ಸಂಪ್ರದಾಯಗಳಿಗೆ ಕೊಡಲಿಯೇಟು ಅವ್ಯಾಹತವಾಗಿ ನಡೆಯುತ್ತಿದೆ. ಕಾಂಗ್ರೆಸ್‌ನ ಪಾಪದ ಕೊಡ ತುಂಬುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸುತ್ತದೆ ಎಂದು ಸತೀಶ್ ಕುಂಪಲ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.