ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆಯುತ್ತಿದ್ದು, ಹಲವು ಬದಲಾವಣೆಗಳ ಚಿಂತನೆ ನಡೆಯುತ್ತಿದೆ. ಈಗಿರುವ ಕೆಲವು ಮಂತ್ರಿಗಳನ್ನು ಪಕ್ಷಕ್ಕೆ ನಿಯೋಜನೆ ಮಾಡಿ ಮುಂದಿನ ಚುನಾವಣೆ ಕೆಲಸಕ್ಕೆ ಹಚ್ಚುವ ವಿಚಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಕಾದು ನೋಡೋಣ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2023 ರಲ್ಲಿ ನಾಲ್ವರು ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದೇವೆ. ಪಕ್ಷ ಅಧಿಕಾರಕ್ಕೆ ಬಂದರೆ ನಾಲ್ವರನ್ನು ಸಚಿವರನ್ನಾಗಿಸುವ ಚರ್ಚೆಯಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ನಾನು ಕಾರ್ಯಾಧ್ಯಕ್ಷನಾಗಿ ಮೂರು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಸಂಪುಟ ಪುನಾರಚನೆ ಆದರೆ ನನಗೆ ಅವಕಾಶ ಸಿಗಲಿದೆ. ದಶಕಗಳಿಂದ ಪಕ್ಷಕ್ಕಾಗಿ ದುಡಿದಿರುವ ನಮಗೆ ಸಿಎಂ, ಡಿಸಿಎಂ ಅವಕಾಶ ಮಾಡಿಕೊಡುತ್ತಾರೆ ಎಂಬ ಭರವಸೆಯಿದೆ. ಈ ಹಿಂದೆಯೂ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುತ್ತೇವೆ ಎಂದು, ಕೊನೆಗೆ ಯಾಕೆ ಕೈ ಬಿಟ್ಟರೋ ಗೊತ್ತಿಲ್ಲ. ಇದೀಗ ಪಕ್ಷ ಸಂಘಟಿಸುವ ಕೆಲಸ ನಡೆದಿದ್ದು, ಮುಂಬರುವ ಚುನಾವಣೆಗಳಿಗೆ ತಯಾರಿ ಮಾಡುತ್ತಿದ್ದೇವೆ. ಮುಂದೆಯೂ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಬಿಜೆಪಿಯವರು ಮಹಾದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ಓಟು ಕಳ್ಳತನ ಮಾಡಿದ್ದಾರೆ. ಆಳಂದದಲ್ಲಿಯೂ ಹಾಗೇ ಮಾಡಿದ್ದರು. ಹರಿಯಾಣದಲ್ಲಿ 25 ಲಕ್ಷ ಓಟು ಕದ್ದಿದ್ದಾರೆ. ಬಿಹಾರದಲ್ಲಿ 40 ಲಕ್ಷ ಓಟು ಕಳ್ಳತನ ಮಾಡಿದ್ದು, ಅದನ್ನು ಈಗ ಸರಿಪಡಿಸುತ್ತಿದ್ದಾರೆ. ಎಲೆಕ್ಷನ್ ಕಮಿಷನ್ ಅದು ಬಿಜೆಪಿ ಕಮಿಷನ್ ಆಗಿದೆ. ಮೋದಿ, ಶಾ ಹೇಳಿದಂತೆ ಚುನಾವಣೆ ಆಯೋಗ ಕೇಳುತ್ತಿದೆ. ಕಳೆದ ಲೋಕಸಭೆಯಲ್ಲಿ 80 ಕ್ಷೇತ್ರಗಳಲ್ಲಿ ಮತ ಕದಿದ್ದಾರೆ ಎಂದು ಆರೋಪಿಸಿದ ಅವರು, ಇಂದು ಸುಳ್ಳಿಗೆ ಆಸ್ಕರ್ ಅವಾರ್ಡ್ ಕೊಡುವುದಾದರೆ ಪ್ರಧಾನಿ ನರೇಂದ್ರ ಮೋದಿಗೆ ಕೊಡಬೇಕು. ಅಷ್ಟು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಹಾಗಾಗೀ ಮುಂದಿನ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಬರಲಿದೆ. ದೇಶದಲ್ಲಿ ರಾಜ್ಯದಲ್ಲಿ ನೆಮ್ಮದಿ ಇರಬೇಕು ಎಂದರೆ ಕಾಂಗ್ರೆಸ್ ಬೇಕು ಎಂದು ತಿಳಿಸಿದರು.ಕನ್ನಡ ನಾಡು ಶಾಂತಿ ಸೌಹಾರ್ಧತೆಯಿಂದ ಇರಬೇಕು ಎಂಬ ಉದ್ದೇಶದಿಂದ ಈಗಾಗಲೇ ಸೂಫೀ ಸಂತರ ಸಮಾವೇಶವನ್ನು ಹುಬ್ಬಳ್ಳಿ ಹಾಗೂ ಕೊಪ್ಪಳದಲ್ಲಿ ಮಾಡಲಾಗಿದೆ. ಮುಂದೆ ವಿಜಯಪುರದಲ್ಲಿಯೂ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೀಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೀಲ ಬಾಗಮಾರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ ಜಮೀರ್ ಬಕ್ಷಿ, ಮಹಿಳಾ ಅಧ್ಯಕ್ಷೆ ರಮೀಜಾ ನದಾಫ್, ರಮೇಶ ಗುಬ್ಬೆವಾಡ, ಕನ್ನಾನ ಮುಶ್ರೀಫ್, ಶ್ರೀದೇವಿ ಉತ್ಲಾಸರ, ಆರತಿ ಶಹಾಪುರ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))