ಕಾಂಗ್ರೆಸ್ ಹುಟ್ಟಿದ್ದೇ ಮುಸ್ಲಿಮರಿಗೋಸ್ಕರ್‌, ಸಿದ್ದು ಪಾಕ್‌ ಪ್ರಧಾನಿಯಾಗಲಿ: ಯತ್ನಾಳ್

| N/A | Published : Apr 29 2025, 12:45 AM IST / Updated: Apr 29 2025, 01:00 PM IST

Basanagouda patil Yatnal
ಕಾಂಗ್ರೆಸ್ ಹುಟ್ಟಿದ್ದೇ ಮುಸ್ಲಿಮರಿಗೋಸ್ಕರ್‌, ಸಿದ್ದು ಪಾಕ್‌ ಪ್ರಧಾನಿಯಾಗಲಿ: ಯತ್ನಾಳ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಾಕಿಸ್ತಾನದ ಪಕ್ಷ. ಆ ಪಕ್ಷ ಹುಟ್ಟಿದ್ದೇ ಮುಸ್ಲಿಮರಿಗೋಸ್ಕರ, ಸಿಎಂ ಸಿದ್ದರಾಮಯ್ಯ ಪಾಕಿಸ್ತಾನ್ ಏಜೆಂಟ್‌ ಇದ್ದಂತೆ  - ಸಿದ್ದರಾಮಯ್ಯ

ಹುಬ್ಬಳ್ಳಿ: ಕಾಂಗ್ರೆಸ್ ಪಾಕಿಸ್ತಾನದ ಪಕ್ಷ. ಆ ಪಕ್ಷ ಹುಟ್ಟಿದ್ದೇ ಮುಸ್ಲಿಮರಿಗೋಸ್ಕರ, ಸಿಎಂ ಸಿದ್ದರಾಮಯ್ಯ ಪಾಕಿಸ್ತಾನ್ ಏಜೆಂಟ್‌ ಇದ್ದಂತೆ. ಹೀಗಾಗಿ, ಸಿದ್ದರಾಮಯ್ಯ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕ್ ವಿರುದ್ಧ ಯುದ್ಧ ಬೇಡ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಹಿಂದೂಗಳ ಪಕ್ಷವಲ್ಲ, ಎಂದಾದರೂ ಅವರು ಹಿಂದೂಗಳ ಪರವಾಗಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ನೆಹರು ಪ್ರಧಾನಮಂತ್ರಿ ಮಾಡಬೇಕು ಎಂದು ಗಾಂಧಿ ಪಾಕಿಸ್ತಾನ್ ಒಡೆದ. ಭಾರತದಿಂದ ಮುಸ್ಲಿಮರಿಗೆ ಹೋಗಬೇಡಿ ಅಂದಿದ್ದೇ ಗಾಂಧಿ ಮಾಡಿದ ತಪ್ಪು. ಡಾ. ಅಂಬೇಡ್ಕರ್ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೋಗಬೇಕು, ಅಲ್ಲಿನ ಹಿಂದೂಗಳಲ್ಲೆ ಭಾರತಕ್ಕೆ ಬರಬೇಕು ಎಂದಿದ್ದರು. ಆದರೆ, ಹಾಗಾಗಲಿಲ್ಲ. ಎಲ್ಲಿಯ ವರೆಗೆ ಭಾರತದಲ್ಲಿ ಮುಸ್ಲಿಮರು ಇರುತ್ತಾರೋ ಅಲ್ಲಿವರೆಗೆ ಶಾಂತಿ, ನೆಮ್ಮದಿ ಇರುವುದಿಲ್ಲ ಎಂದರು.

ತಮ್ಮ ವಿರುದ್ಧ ವಿಜಯಪುರದಲ್ಲಿ ನಡೆದ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ನಾವು ಹಿಂದೂ ಪರವಾಗಿ ಮಾತಾಡುತ್ತಿದ್ದೇವೆ. ದೇಶದ್ರೋಹಿಗಳ ವಿರುದ್ಧ ಮಾತನಾಡುತ್ತಿರುವುದಕ್ಕೆ ಅವರಿಗೆ ಕಸಿವಿಸಿ ಆಗುತ್ತಿದೆ. ಯತ್ನಾಳನನ್ನು ಒದ್ದು ಒಳ ಹಾಕುವುದಕ್ಕೆ ಯಾರಿಗೂ ತಾಕತ್ ಇಲ್ಲ ಎಂದು ಹೇಳಿದರು.

ಜಾತಿ ಗಣತಿಯಲ್ಲಿ ಸಿದ್ದರಾಮಯ್ಯ ಸ್ವತಃ ತಮ್ಮ ಸಮುದಾಯವನ್ನೇ ಕೆಳಗೆ ಹಾಕಿದ್ದಾರೆ. ಲಿಂಗಾಯತ, ವೀರಶೈವ ಒಡೆದರು. ಹೀಗಾಗಿ, ಲಿಂಗಾಯತ ಸಮುದಾಯ ಉಳಿವಿಗಾಗಿ ಸುಪ್ರೀಂಕೋರ್ಟ್‌ನಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ಬ್ರಾಹ್ಮಣರು ಸಹ ಈಗ ದೇಶದಲ್ಲಿ ಅಲ್ಪಸಂಖ್ಯಾತರಿದ್ದಾರೆ. ಮುಸ್ಲಿಮರು ಮೂರು ಕಡೆ ಮೀಸಲಾತಿ ತೆಗೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಪಾಕಿಸ್ತಾನ ಪರವಾಗಿ ಮಾತನಾಡುತ್ತಾರೆ. ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗುತ್ತಿದೆ. ಹೀಗಾಗಿ, ಹಿಂದೂಗಳ ರಕ್ಷಣೆ ಎಲ್ಲಿದೆ ಎಂದರು.

ಧರ್ಮ ಕೇಳಿ ಹೊಡೆದಿಲ್ಲ ಎಂಬ ಸಚಿವ ತಿಮ್ಮಾಪುರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ತಿಮ್ಮಾಪುರ ಪಹಲ್ಗಾಂಗೆ ಹೋಗಿದ್ರಾ? ಕೇಳಿಸಿಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.

ಸಂತೋಷ್‌ ಲಾಡ್‌ ಬಚ್ಚಾ : ಪ್ರಧಾನಿ ನರೇಂದ್ರ ಮೋದಿ ಎದುರು ಸಚಿವ ಸಂತೋಷ ಲಾಡ್ ಬಚ್ಚಾ. ಪ್ರಧಾನಿ ಬಗೆಗೆ ಮಾತನಾಡಿ ರಾಹುಲ್, ಸೋನಿಯಾ ಗಾಂಧಿ ಖುಷಿ ಪಡಿಸಿದರೆ ತನ್ನ ಮಂತ್ರಿಸ್ಥಾನ ಉಳಿಯುತ್ತದೆ ಎಂದು ಮಾತನಾಡುತ್ತಿದ್ದಾನೆ ಎಂದು ಕಿಡಿಕಾರಿದರು.

ರೈಲ್ವೆ ಪರೀಕ್ಷೆಯಲ್ಲಿ ಮಂಗಳ ಸೂತ್ರ ತೆಗೆಸುವ ವಿಚಾರ ಕುರಿತು ಮಾತನಾಡಿ, ಆ ರೀತಿ ಯಾರೇ ಮಾಡಿದರೂ ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ನಾನೇನು ಯಾವ ಪಕ್ಷದಲ್ಲೂ ಇಲ್ಲ. ಜನಿವಾರ ವಿಷಯದಲ್ಲಿ ಕೈಗೊಂಡ ಕ್ರಮ ಇಲ್ಲಿಯೂ ಕೈಗೊಳ್ಳಬೇಕು. ಈ ಬಗ್ಗೆ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪ್ರಶ್ನೆ ಕೇಳಿ ಎಂದರು.

ಶಾಸಕರ ಅಮಾನತ್ತು ಕುರಿತಾಗಿ ಮಾತನಾಡಿ, ಸದನದಲ್ಲಿ ಮೇಲೆ ಹೋಗಿ ಗಲಾಟೆ ಮಾಡಲು ಪ್ರಚೋದನೆ ಕೊಟ್ಟಿದ್ದೇ ಬಿ.ವೈ. ವಿಜಯೇಂದ್ರ. ಹೀಗಾಗಿ, ಬಿಜೆಪಿಯಲ್ಲಿ ಎಲ್ಲರೂ ಅಮಾನತಾಗಿದೆ. ಶಾಸಕರು ಯಾವುದೇ ಸಭೆಯಲ್ಲಿ ಭಾಗಿ ಆಗಲು ಆಗುತ್ತಿಲ್ಲ. ಪಕ್ಷದಲ್ಲಿ ಅಪ್ರಬುದ್ಧ ಅಧ್ಯಕ್ಷನನ್ನು ಆಯ್ಕೆ ಮಾಡಿದ್ದೇ ತಪ್ಪು ಎಂದು ಆಕ್ರೋಶ ಹೊರಹಾಕಿದರು.

4 ಬಾಂಬ್‌ ಹಾಕಿದರೆ ಪಾಕಿಸ್ತಾನ ಸರ್ವನಾಶ : ಪಾಕಿಸ್ತಾನ ಪ್ರಧಾನಿ ಅಣುಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿದ ಯತ್ನಾಳ್, ನಮ್ಮಲ್ಲಿ ದೀಪಾವಳಿಗೆ ಹಾರಿಸುವ ಪಟಾಕಿಗಳಿದಾವಾ? ನಾಲ್ಕು ಬಾಂಬ್‌ ಒಗೆದರೆ ಪಾಕಿಸ್ತಾನ ಕಾಣದಂತಾಗುತ್ತದೆ. ಭಾರತವೀಗ ರಷ್ಯಾ, ಅಮೆರಿಕ, ಚೀನಾಗೆ ಸಮನಾಗಿದೆ. ವಿಶ್ವ ನಾಯಕರಾಗಿ ನರೇಂದ್ರ ಮೋದಿ ಇದ್ದಾರೆ. ನಮಗೀಗ ಸ್ನೇಹಿತ ದೇಶಗಳಿವೆ. ಇದು ನೆಹರು ಭಾರತವಲ್ಲ, ಮೋದಿ ಭಾರತ ಎಂದರು.