ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲವು

| Published : Mar 30 2024, 12:54 AM IST

ಸಾರಾಂಶ

ಧಾರವಾಡ ಟಿಕೆಟ್ ವಿಚಾರವನ್ನು ಧಾರ್ಮಿಕ ಮುಖಂಡರ ಬಳಿಯೇ ಕೇಳಬೇಕು. ಧಾರ್ಮಿಕ ಮುಖಂಡರ ಹೇಳಿಕೆಗೆ ಹಾಗೂ ರಾಜಕೀಯ ಮುಖಂಡರ ಹೇಳಿಕೆಗೆ ಬಹಳ ವ್ಯತ್ಯಾಸ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಧಾರವಾಡ ಟಿಕೆಟ್ ವಿಚಾರವನ್ನು ಧಾರ್ಮಿಕ ಮುಖಂಡರ ಬಳಿ‌ಯೇ ಕೇಳಬೇಕು. ಧಾರ್ಮಿಕ ಮುಖಂಡರ ಹೇಳಿಕೆಗೆ ಹಾಗೂ ರಾಜಕೀಯ ಮುಖಂಡರ ಹೇಳಿಕೆಗೆ ಬಹಳ ವ್ಯತ್ಯಾಸ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಬದಲಾವಣೆಗೆ ದಿಂಗಾಲೇಶ್ವರ ಶ್ರೀಗಳು ಪಟ್ಟು ಹಿಡಿದಿದ್ದು, ಧಾರವಾಡ ಜಿಲ್ಲಾ ಅಖಿಲ ಭಾರತ ಲಿಂಗಾಯತ ಮಹಾಸಭಾ ಸ್ವಾಮೀಜಿಗೆ‌ ಬೆಂಬಲ ನೀಡಿರುವ ವಿಚಾರಕ್ಕೆ ವಿಜಯಪುರ ನಗರದಲ್ಲಿ ಸಚಿವ ಎಂ.ಬಿ.ಪಾಟೀಲ್ ಈ ರೀತಿ ಪ್ರತಿಕ್ರಿಯೆ ನೀಡಿದರು.

ಈ ಕುರಿತು ಯಾಕೆ? ಏನು? ಎಂಬುವುದನ್ನು ಧಾರ್ಮಿಕ ಮುಖಂಡರ ಬಳಿ‌ಯೇ ಕೇಳಬೇಕು. ಧಾರ್ಮಿಕ ಮುಖಂಡರ ಹೇಳಿಕೆಗೆ ಹಾಗೂ ರಾಜಕೀಯ ಮುಖಂಡರ ಹೇಳಿಕೆಗೆ ಬಹಳ ವ್ಯತ್ಯಾಸ ಇರುತ್ತದೆ. ಈ ಕುರಿತು ದಿಂಗಾಲೇಶ್ವರ ಸ್ವಾಮೀಜಿಯವರನ್ನೇ ಕೇಳಿ. ಇನ್ನು ನಾವು ಧಾರವಾಡ ಕ್ಷೇತ್ರ ಮಾತ್ರವಲ್ಲ, ರಾಜ್ಯದ 20 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.