ಚಂದ್ರಪ್ಪಗೆ ಕಾರ್ಯಕರ್ತರಿಂದ ಭವ್ಯಸ್ವಾಗತ

| Published : Mar 28 2024, 12:46 AM IST

ಸಾರಾಂಶ

ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಪಕ್ಷದ ಕಾರ್ಯರ್ತರು ಹಾಗೂ ನಿವಾಸಿಗಳು ಸ್ವಾಗತಿಸಿ, ಅಭಿನಂದಿಸಿದರು.

ಚಳ್ಳಕೆರೆ: ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಪಕ್ಷದ ಕಾರ್ಯರ್ತರು ಹಾಗೂ ನಿವಾಸಿಗಳು ಸ್ವಾಗತಿಸಿ, ಅಭಿನಂದಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ರವಿಕುಮಾರ್ ಮಾತನಾಡಿ, ಪಕ್ಷದಲ್ಲಿ ಟಿಕೆಟ್ ಪಡೆಯಲು ಹಲವಾರು ಪೈಪೋಟಿ ನಡೆದಿದ್ದರೂ ಪಕ್ಷ ಬಿ.ಎನ್.ಚಂದ್ರಪ್ಪನವರ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಟಿಕೆಟ್ ನೀಡಿದೆ. ಮೊದಲ ಅವಧಿಯಲ್ಲೇ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಎಲ್ಲರೂ ಸೇರಿ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸಬೇಕಾದ ಜವಾಬ್ದಾರಿ ಇದೆ. ರಾಜಕೀಯ ಕ್ಷೇತ್ರದಲ್ಲಿ ಸಂಯಮ, ತಾಳ್ಮೆ, ಸರಳ, ಸಜ್ಜನಿಕೆ ವ್ಯಕ್ತಿ ಬಿ.ಎನ್.ಚಂದ್ರಪ್ಪನವರು ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಟಿಕೆಟ್ ಘೋಷಣೆಯಾದ ನಂತರ ಭೇಟಿ ನೀಡಿದ್ದು, ಈ ಬಾರಿ ಹೆಚ್ಚು ಆತ್ಮವಿಶ್ವಾಸವಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ಹೆಚ್ಚುತ್ತಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ 5 ಗ್ಯಾರಂಟಿಗಳ ಮೂಲಕ ಉತ್ತಮ ಬದುಕು ಕಲ್ಪಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದು. ಮತ್ತೊಮ್ಮೆ ಕ್ಷೇತ್ರದ ಸಂಸದನಾಗಿ ಆಯ್ಕೆಯಾಗಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು.

ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಹುಲಿಕುಂಟೆ ವೈ.ಕಾಂತರಾಜ್, ಸಿದ್ದಾಪುರ ಶೇಖರಪ್ಪ, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.