ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರುತಾಲೂಕಿನ ಸುಕ್ಷೇತ್ರ ಸಿದ್ಧಪರ್ವತದ ಅಂಬಾಮಠದ ಅಂಬಾದೇವಿ ದೇವಸ್ಥಾನವನ್ನು ನೂತನವಾಗಿ ಕಟ್ಟುವ ಹಿನ್ನೆಲೆಯಲ್ಲಿ ಭಾನುವಾರ ದೇವಸ್ಥಾನದ ಮೂಲ ಗರ್ಭಗುಡಿಯಲ್ಲಿರುವ ಶ್ರೀದೇವಿ ಮೂರ್ತಿ ಸೇರಿದಂತೆ ದೇವತಾ ವಿಗ್ರಹಗಳನ್ನು ದೇವಸ್ಥಾನದ ಮುಂದುಗಡೆ ಹೊಸದಾಗಿ ನಿರ್ಮಿಸಿರುವ ಬಾಲ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.ನಂತರ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ದೇವಸ್ಥಾನದ ನೂತನ ಕಟ್ಟಡದ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ ಹಾಗೂ ನಾಡಿನ ಜನತೆಗೆ ಅಂಬಾದೇವಿಯ ಆಶೀರ್ವಾದ ಇರಲಿ. ತಾಲ್ಲೂಕು ಸುಭಿಕ್ಷೆಯಾಗಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.ದೇವಸ್ಥಾನದ ಅರ್ಚಕ ಬ್ರಹ್ಮಾನಂದ ಭಟ್ಟರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಬೆಳಗಿನ ಜಾವದಿಂದಲೇ ಆರಂಭಗೊಂಡಿದ್ದವು. ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು, ದೇವಸ್ಥಾನದ ಸಮಿತಿಯ ಅಧ್ಯಕ್ಷರೂ ಹಾಗೂ ತಹಶೀಲ್ದಾರ ಅರುಣ್ ದೇಸಾಯಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜೆ.ಡಿ.ಎಸ್. ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಆರ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಸೇರಿದಂತೆ ದೇವಸ್ಥಾನದ ಕಮಿಟಿ ಸದಸ್ಯರು ಇದ್ದರು.