ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ದಿನಸಿ, ತರಕಾರಿ ರವಾನೆ

| Published : Dec 09 2024, 12:50 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪ್ರಸಾದ ಸೇವಿಸುತ್ತಾರೆ. ಅಂತಹ ಪುಣ್ಯ ಕಾರ್ಯಕ್ಕೆ ಕಳೆದ 30 ವರ್ಷಗಳಿಂದ ದಿನಸಿ, ತರಕಾರಿ ದಾನ ಮಾಡುತ್ತಿರುವ ಪ್ರಶಂಸನೀಯ, ಇಂತಹ ಧರ್ಮ ಕಾರ್ಯಗಳು ಬೇರೆಯವರಿಗೆ ಮಾದರಿಯಾಗಲಿವೆ.

ಹೊಸಕೋಟೆ: ಕಳೆದ 30 ವರ್ಷಗಳಿಂದ ಪ್ರತಿ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಗೆ ದಾನಿಗಳಿಂದ 22 ಟನ್ ಅಕ್ಕಿ ಹಾಗೂ 10 ಟನ್ ತರಕಾರಿ ಸೇರಿದಂತೆ ತೆಂಗಿನ ಕಾಯಿ ದೇಣಿಗೆಯಾಗಿ ನೀಡಿರುವುದಕ್ಕೆ ವಹ್ನೀಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು.

ನಗರದ ಶ್ರೀ ಪಂಚಮುಖಿ ಗಣಪತಿ ದೇವಾಲಯದ ಆವರಣದಲ್ಲಿ ದಿನಸಿ, ತರಕಾರಿ ಲಾರಿಗೆ ತುಂಬಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳುಹಿಸಿಕೊಟ್ಟು ಮಾತನಾಡಿದ ಅವರು, ದೇವ ಕಾರ್ಯಗಳ ಸೇವೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.

ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ. ಎಚ್.ಎಂ.ಸುಬ್ಬರಾಜ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪ್ರಸಾದ ಸೇವಿಸುತ್ತಾರೆ. ಅಂತಹ ಪುಣ್ಯ ಕಾರ್ಯಕ್ಕೆ ಕಳೆದ 30 ವರ್ಷಗಳಿಂದ ದಿನಸಿ, ತರಕಾರಿ ದಾನ ಮಾಡುತ್ತಿರುವ ಪ್ರಶಂಸನೀಯ, ಇಂತಹ ಧರ್ಮ ಕಾರ್ಯಗಳು ಬೇರೆಯವರಿಗೆ ಮಾದರಿಯಾಗಲಿವೆ ಎಂದು ಹೇಳಿದರು.

ಈ ವೇಳೆ ಮುಖಂಡರಾದ ಮಂಜಣ್ಣ, ನಾಗರಾಜ್, ಕಬಾಬ್ ರವಿ, ಕುಮಾರಿ, ಉಮೇಶ್, ಸತೀಶ್, ಮಾಲತೇಶ್, ಮಂಜುನಾಥ್, ಶ್ರೀರಾಮ್, ಮುನಿಯಪ್ಪ ಹಾಗೂ ಸ್ನೇಹಿತರು ಹಾಜರಿದ್ದರು.