, ಪ್ರಶಿಕ್ಷಣಾರ್ಥಿಗಳು ಪಾಠ ಪ್ರವಚನಗಳ ಜತೆಗೆ ಆಟೋಟದಲ್ಲಿಯೂ ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು.

ಮುಂಡರಗಿ: ಪ್ರಶಿಕ್ಷಾರ್ಥಿಗಳು ದೊಡ್ಡದಾದ ಗುರಿಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಆ ಗುರಿಗೆ ತಕ್ಕಂತೆ ಪ್ರಯತ್ನವಿಲ್ಲದ ಕಾರಣ ಅವರು ಜೀವನದಲ್ಲಿ ಯಶಸ್ವಿಯನ್ನು ಕಾಣುತ್ತಿಲ್ಲ. ಆದ್ದರಿಂದ ಗುರಿಯ ಜೊತೆಗೆ ಸತತ ಪ್ರಯತ್ನವೂ ಬೇಕಾಗುತ್ತದೆ. ಅಂದಾಗ ಮಾತ್ರ ನಿಗದಿತ ಗುರಿಯನ್ನು ತಲುಪಲು ಸುಲಭವಾಗಿತ್ತದೆ ಎಂದು ಜ.ತೋಂಟದಾರ್ಯ ಸರಕಾರಿ ಪ್ರಥಮ ಧರ್ಜೆ ಕಾಲೇಜಿನ ರಾಜ್ಯಶಾಸ್ತ್ರದ ಪ್ರಧ್ಯಾಪಕಿ ಡಾ ಭಾರತಿ ಬ್ಯಾಳಿ ಹೇಳಿದರು.

ಅವರು ಇಲ್ಲಿಯ ಶ್ರೀ ಜ.ಅ.ವಿದ್ಯಾ ಸಮಿತಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ದೀಪದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ಆತ್ಮವಿಶ್ವಾಸದಿಂದ ಕಾರ್ಯ ಮಾಡಿದರೆ ಜೀವನ ಪರಿಪೂರ್ಣವಾಗುತ್ತದೆ ಎಂದರು.ಸಾನಿಧ್ಯ ವಹಿಸಿದ್ದ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಪಾಠ ಪ್ರವಚನಗಳ ಜೊತೆಗೆ ಆಟೋಟದಲ್ಲಿಯೂ ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಶಿಕ್ಷಕರಾಗುವ ನೀವು ಸುಸಂಸ್ಕೃತರಾಗಿ ಮಕ್ಕಳನ್ನುಸಹ ಸುಸಂಸ್ಕೃತರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಆಡಳಿತಧಿಕಾರಿ ಡಾ.ಬಿ.ಜಿ.ಜವಳಿ ಮಾತನಾಡಿ ಕೃತಕ ಬುದ್ದಿಮತ್ತೆ ಬಂದರೂ ಅದು ಶಿಕ್ಷಕರ ಕೆಲಸ ನಿರ್ವಹಿಸದು. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಜವಾಬ್ದಾರಿಯುತ ಪಾಠವನ್ನು ಮಾಡಿ ನೀತಿ, ಮಾನವೀಯತೆ ಮತ್ತು ದೇಶಪ್ರೇಮ ಕಲಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಕಾಲೇಜು ಮೇಲ್ವಿಚಾರಣಾ ಸಮಿತಿಯ ಉಪಕಾರ್ಯಾಧ್ಯಕ್ಷ ಯು.ಸಿ.ಹಂಪಿಮಠ ಮತ್ತು ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ ಕೆ, ಶೋಭಾ ಹೊನ್ನೂರ, ಕೊಟ್ರೇಶ ಎಚ್, ಮಂಜುನಾಥ ಕಲ್ಮನಿ ಮಾತನಾಡಿದರು. ಕಾಲೇಜು ಮೇಲ್ವಿಚಾರಣಾ ಸಮಿತಿಯ ಕಾರ್ಯಾಧ್ಯಕ್ಷ ಸಿ.ಎಸ್.ಅರಸನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಎಂ.ವಿ.ಕುಲಕರ್ಣಿ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷೆ ಎಸ್.ವಿ.ಹಂಚಿನಾಳ ವರದಿವಾಚನ ಮಾಡಿದರು. ರೇಖಾ ಗಳಗನಾಥ ನಿರೂಪಿಸಿದರು. ಮಂಜುನಾಥ ಕಲ್ಮನಿ ವಂದಿಸಿದರು.