ಧರ್ಮಸ್ಥಳ ಪಾವಿತ್ರತೆ ಹಾಳು ಮಾಡಲು ಷಡ್ಯಂತ್ರ: ಶಾಸಕ ಸುರೇಶ್‌ಗೌಡ

| Published : Sep 01 2025, 01:03 AM IST

ಧರ್ಮಸ್ಥಳ ಪಾವಿತ್ರತೆ ಹಾಳು ಮಾಡಲು ಷಡ್ಯಂತ್ರ: ಶಾಸಕ ಸುರೇಶ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದ ಸುತ್ತ ಕಳೆದ ಕೆಲವು ದಿನಗಳಿಂದ ನಡೆದಿರುವ ವಿದ್ಯಾಮಾನಗಳನ್ನು ನೋಡಿದರೆ ಇದರ ಹಿಂದೆ ದೊಡ್ಡ ಷಡ್ಯಂತರ ಇರುವುದು ಗೊತ್ತಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರುಇತ್ತೀಚಿನ ವಿದ್ಯಾಮಾನಗಳನ್ನು ಗಮನಿಸಿದಾಗ ಹಿಂದೂಧರ್ಮ ಹಾಗೂ ಧಮಸ್ಥಳದ ಪಾವಿತ್ರತೆ ಹಾಳು ಮಾಡುವ ಪ್ರಯತ್ನಗಳು ನಡೆದಿವೆ. ಈ ಷಡ್ಯಂತ್ರದ ಹಿಂದಿರುವವರನ್ನು ಬಯಲು ಮಾಡಬೇಕು. ಧರ್ಮಸ್ಥಳ ಪಾವಿತ್ರತೆ ಹಾಳು ಮಾಡುತ್ತಿರುವ ಪ್ರಕರಣವನ್ನು ಎನ್‌ಎಎ ವಿಚಾರಣೆಗೆ ವಹಿಸಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡರು ಒತ್ತಾಯಿಸಿದರು.ಭಾನುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಪಾವಿತ್ರದ ರಕ್ಷಣೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷನಾಯಕ ಆರ್. ಆಶೋಕ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಾಳೆ ದೊಡ್ಡ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಭಾಗವಹಿಸಲು ಜಿಲ್ಲೆಯಿಂದ ಕಾರ್ಯಕರ್ತರನ್ನು ಕರೆದೊಯ್ಯಲು 100 ಬಸ್ ವ್ಯವಸ್ಥೆ ಮಾಡಲಾಗಿದೆ. ತಮ್ಮಕ್ಷೇತ್ರದ 50 ಬಸ್‌ ಜನರನ್ನು ಕರೆದುಕೊಂಡು ತಾವೂ ಹೋಗುತ್ತಿರುವುದಾಗಿ ಹೇಳಿದರು.ಧರ್ಮಸ್ಥಳದ ಸುತ್ತ ಕಳೆದ ಕೆಲವು ದಿನಗಳಿಂದ ನಡೆದಿರುವ ವಿದ್ಯಾಮಾನಗಳನ್ನು ನೋಡಿದರೆ ಇದರ ಹಿಂದೆ ದೊಡ್ಡ ಷಡ್ಯಂತರ ಇರುವುದು ಗೊತ್ತಾಗಿದೆ. ಎಷ್ಟು ವಿಚಿತ್ರವೆಂದರೆ ಯಾವನೋ ಒಬ್ಬ ವ್ಯಕ್ತಿ ಒಂದು ಬುರುಡೆ ಹಿಡಿದುಕೊಂಡು ಬರುತ್ತಾನೆ. ತಾನು ನೂರಾರು ಶವಗಳನ್ನು ಧರ್ಮಸ್ಥಳದ ಪರಿಸರದಲ್ಲಿ ಹೂತಿದ್ದೇನೆ, ಅವರ ಮೇಲೆ ಅತ್ಯಾಚಾರವಾಗಿತ್ತು ಎಂದು ಹೇಳುತ್ತಾನೆ. ಇದರ ತನಿಖೆಗೆ ಎಸ್‌ಐಟಿ ರಚನೆಯಾಗಬೇಕು ಎಂದು ದೊಡ್ಡ ದೊಡ್ಡವರು ಸಲಹೆ ಕೊಡುತ್ತಾರೆ. ಆರಂಭದಲ್ಲಿ ಎಸ್‌ಐಟಿ ರಚನೆ ಮಾಡಲು ಸಾಧ್ಯವಿಲ್ಲ ಎಂದ ಸಿಎಂ ಸಿದ್ದರಾಮಯ್ಯ ನಂತರ ಮರುದಿನ ಎಸ್‌ಐಟಿ ರಚನೆ ಮಾಡುತ್ತಾರೆ. ಅವರು ಏಕೆ ಮನಸು ಮಾಡಿದರು? ದೆಹಲಿಯಲ್ಲಿ ಅವರಿಗೆ ಯಾರಾದರೂ ಸೂಚನೆ ಕೊಟ್ಟರೆ ಎಂದು ಅನುಮಾನ ಬರುವುದು ಸಹಜ ಎಂದರು.ಮಾಸ್ಕ್ ಮೆನ್‌ ಚಿನ್ನಯ್ಯ ಹೇಳಿದ ಎಂದು ಗುಂಡಿ ತೋಡಿದರು. ನಾಳೆ ಒಬ್ಬ ವ್ಯಕ್ತಿ ಇದೇ ರೀತಿ ಮಾಸ್ಕ್ ಹಾಕಿಕೊಂಡು ಬಂದು ಚರ್ಚ್, ಮಸೀದಿ ಆಸುಪಾಸಿನಲ್ಲಿ ಹೀಗೆ ಶವ ಹೂತಿದ್ದೇನೆ ಎಂದು ಹೇಳಿದರೆ ಈ ಸರ್ಕಾರ ಇದೇ ರೀತಿ ಗುಂಡಿ ತೋಡುತ್ತದೆಯೆ? ಹಿಂದೂ ಧಾರ್ಮಿಕ ಕ್ಷೇತ್ರಗಳ ವಿಚಾರದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂದು ಕಾಂಗ್ರೆಸ್‌ನವರು ತಿಳಿದುಕೊಂಡಿದ್ದಾರೆ ಎಂದು ಸುರೇಶ್‌ಗೌಡ ಆರೋಪಿಸಿದರು.ಧರ್ಮಸ್ಥಳ ವಿಚಾರದಲ್ಲಿ ಮುಸ್ಲಿಮರು ವಿಡಿಯೋ ಮಾಡುತ್ತಾರೆ. ಅವರಿಗೆ ಏನೂ ಆಗುವುದಿಲ್ಲ. ಇದನ್ನು ಮುಸ್ಲಿಂ ಸಮಾಜ ಖಂಡಿಸಬೇಕಿತ್ತು, ಅವರೆಲ್ಲಾ ಏಕೆ ಸುಮ್ಮನಿದ್ದಾರೆ? ಧರ್ಮಸ್ಥಳ ಹಾಗೂ ವೀರೇಂದ್ರ ಹೆಗಡೆಯವರಿಗೆ ಮಸಿ ಬಳಿಯುವ ಮೂಲಕ ಬಿಜೆಪಿಗೆ ಕಳಂಕ ಹಚ್ಚುವ ಹುನ್ನಾರವೂಇಲ್ಲಿ ನಡೆದಿದೆ ಎಂದರು.ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ಮುಖ್ಯಮಂತ್ರಿ ಕರೆದಿದ್ದಾರೆ. ಬಾನು ಅವರ ಕಥೆಯನ್ನು ಇಂಗ್ಲೀಷಿಗೆ ಅನುವಾದ ಮಾಡಿದ ದೀಪಾ ಬಸ್ತಿಯವರನ್ನು ಏಕೆ ಕರೆಯಲಿಲ್ಲಾ?ಎಂದು ಕೇಳಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಬೆಹೆಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಕೆ.ಧನುಷ್, ಮಾಜಿ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಒಬಿಸಿ ಅಧ್ಯಕ್ಷ ಕೆ.ವೇದಮೂರ್ತಿ, ಗಣೇಶ್‌ಪ್ರಸಾದ್, ಮರಿತಿಮ್ಮಯ್ಯ ಮೊದಲಾದವರು ಭಾಗವಹಿಸಿದ್ದರು.

ಕ್ಯಾಪ್ಶನ್.... ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ. ಸುರೇಶಗೌಡ