ಸಾರಾಂಶ
ಸಿಎಂ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆತಂಕ ಹೊರಹಾಕಿರುವ ಕಾಳಗಿ ತಾಲೂಕಿನ ಕುರುಬಗೊಂಡ ಸಮಾಜದ ಯುವ ಮುಖಂಡರಾದ ರಾಜಶೇಖರ ಅರಣಕಲ್ ಇಂತಹ ಪ್ರಯತ್ನಗಳು ಎಂದಿಗೂ ಕೈಗೂಡೋದಿಲ್ಲವೆಂದು ಸದರಿ ಬೆಳವಣಿಗೆಯನ್ನು ಖಂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾಳಗಿ
ಸಿಎಂ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆತಂಕ ಹೊರಹಾಕಿರುವ ಕಾಳಗಿ ತಾಲೂಕಿನ ಕುರುಬಗೊಂಡ ಸಮಾಜದ ಯುವ ಮುಖಂಡರಾದ ರಾಜಶೇಖರ ಅರಣಕಲ್ ಇಂತಹ ಪ್ರಯತ್ನಗಳು ಎಂದಿಗೂ ಕೈಗೂಡೋದಿಲ್ಲವೆಂದು ಸದರಿ ಬೆಳವಣಿಗೆಯನ್ನು ಖಂಡಿಸಿದ್ದಾರೆ.ಹೇಳಿಕೆ ನೀಡಿರುವ ಅವರು, ನೇರ ದಿಟ್ಟತನದ ರಾಜಕಾರಣಿ ಸಿದ್ದರಾಮಯ್ಯ ಅಕ್ಕಿ ಸೇರಿದಂತೆ ಜನತೆಗೆ ನೀಡಿರುವ ಪಂಚ ಗ್ಯಾರಂಟಿಯಿಂದ ಅನೇಕರು ಸಂಸಾರ ಮಾಡುತ್ತಿದ್ದಾರೆ. ದಾನದಲ್ಲಿ ಶ್ರೇಷ್ಠ ಅನ್ನದಾನ ಎನ್ನುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಬಿಪಿಎಲ್ ಕುಟುಂಬಕ್ಕೆ ಅನ್ನ ಭಾಗ್ಯವನ್ನು ನೀಡಿ ಶೋಷಿತರಿಗೆ ಬಡವರಿಗೆ ಹಸಿವು ಮುಕ್ತ ಕರ್ನಾಟಕ ಮಾಡಿರುವ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯನವರು ರಾಜ್ಯ ಕಂಡ ಅಪರೂಪದ ರಾಜಕಾರಣಿ, ಸಾಮಾಜಿಕ ಚಿಂತಕರು, ಇವರ ನಡೆ ನುಡಿ ನೋಡಿದರೆ ಎಲ್ಲರಿಗೂ ದೇವರಾಜ್ ಅರಸು ನೆನಪಿಗೆ ಬರುತ್ತಾರೆ. ಇಂತಹ ದಿಟ್ಟ ನಾಯಕರನ್ನು ರಾಜಕೀಯವಾಗಿ ಮುಗಿಸಲು ಕುತಂತ್ರ ನಡೆದಿದೆ. ಇದು ಕೈಗೂಡೋದಿಲ್ಲ. ಇಂತಹ ಷಡ್ಯಂತ್ರ ಮಾಡುವವರು ಇದನ್ನು ಕೈಬಿಡಬೇಕು ಎಂದು ಅರಣಕಲ್ ಸಲಹೆ ನೀಡಿದ್ದಾರೆ.ಅರಸು ನಂತರದಲ್ಲಿ 5 ವರ್ಷ ಮುಖ್ಯಮಂತ್ರಿಗಳಾಗಿ ಸೇವೆಸಲ್ಲಿಸಿದವರು, ಈ 77 ವಸಂತ ಸಿಎಂ ಸಿದ್ದರಾಮಯ್ಯ ಅವರಿಗೆ ಒಳಿತಾಗಲಿ, ಹುಲಿಜಂತಿ ಮಾಳಿಂಗರಾಯರ ಆಶೀವಾದ ಇವರ ಮೇಲಿರಲೇಂದು ರಾಜಶೇಖರ ಅಣಕಲ ಗಡಿಕೇಶ್ವರ ಹಾರೈಸಿದ್ದಾರೆ.