ಸಂಕೇಶ್ವರ: ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ ಸೇರಿದಂತೆ ಖಾಸಗಿ ಕಾರ್ಯಕ್ರಮಗಳ ಆಚರಣೆಗೆ ನಿಷೇಧವಿದ್ದರೂ ಪೇದೆಯೊಬ್ಬರು ಕೇಕ್ ಕತ್ತರಿಸಿ ಬರ್ತಡೇ ಪಾರ್ಟಿ ಮಾಡಿದ ಘಟನೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಸಂಕೇಶ್ವರ: ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ ಸೇರಿದಂತೆ ಖಾಸಗಿ ಕಾರ್ಯಕ್ರಮಗಳ ಆಚರಣೆಗೆ ನಿಷೇಧವಿದ್ದರೂ ಪೇದೆಯೊಬ್ಬರು ಕೇಕ್ ಕತ್ತರಿಸಿ ಬರ್ತಡೇ ಪಾರ್ಟಿ ಮಾಡಿದ ಘಟನೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ ನಾಯಿಕ, ಪಿಎಸ್‌ಐ ಉಮೇಶ ಶೆಟ್ಟೆನ್ನವರ ಸಮ್ಮುಖದಲ್ಲಿ ಠಾಣೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಂಭ್ರಮಾಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಇಂತಹ ಆಚರಣೆಗಳಿಗೆ ಅವಕಾಶವಿಲ್ಲವೆಂಬ ಸರಕಾರಿ ಸುತ್ತೋಲೆ ಜಾರಿಯಲ್ಲಿದ್ದರೂ, ಪೊಲೀಸರು ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಈ ಹಿಂದೆ ಕೂಡ ರಾಜ್ಯದ ಕೆಲವೆಡೆ ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ತಪ್ಪಿತಸ್ಥ ಸಿಬ್ಬಂದಿಗಳು ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ನಿಯಮ ಪಾಲನೆಗೆ ಉತ್ತೇಜಿಸಬೇಕಾದ ಪೊಲೀಸರೇ ಪೇದೆಯ ಬರ್ತಡೇ ಪಾರ್ಟಿಗೆ ಸಾಕ್ಷಿಯಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.