ಸಾರಾಂಶ
ಕನ್ನಡಪ್ರಭ ಜನವರಿ 5 ರಂದು ಆಸರೆ ಫಲಾನುಭವಿಗಳಿಗಿಲ್ಲ ನಿರಂತರ ಜ್ಯೋತಿ ಎಂಬ ಶಿರ್ಷಿಕೆ ಅಡಿ ವಿಸ್ತೃತ ವರದಿಗೆ ಎಚ್ಚೆತ್ತ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಒಟ್ಟಾಗಿ ಗ್ರಾಮ ಪಂಚಾಯತಿಯಿಂದ ಹೆಸ್ಕಾಂ ಇಲಾಖೆಗೆ ವಿದ್ಯುತ್ ಬಿಲ್ ಕಟ್ಟಿ ತೆಗ್ಗಿಹಳ್ಳಿ ಆಸರೆ ಮನೆಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿರುವುದು ಜನಮೆಚ್ಚುಗೆಗೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ರಾಜ್ಯದ ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನಿರ್ಮಾಣಗೊಂಡಿರುವ ಆಸರೆ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸೌಲಭ್ಯ ಇಲ್ಲದಕ್ಕಾಗಿ ಆಸರೆ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಕತ್ತಲೆಯಾದರೇ ನಿತ್ಯ ನರಕಯಾತನೆ ಅನುಭವಿಸುವುದರ ಜತೆಗೆ ಹುಳಹುಪ್ಪಟ್ಟಿಗಳ ಭಯದಲ್ಲಿ ರಾತ್ರಿ ಕಳೆಯುತ್ತಿದ್ದರು.ಕನ್ನಡಪ್ರಭ ಜನವರಿ 5 ರಂದು ಆಸರೆ ಫಲಾನುಭವಿಗಳಿಗಿಲ್ಲ ನಿರಂತರ ಜ್ಯೋತಿ ಎಂಬ ಶಿರ್ಷಿಕೆ ಅಡಿ ವಿಸ್ತೃತ ವರದಿಗೆ ಎಚ್ಚೆತ್ತ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಒಟ್ಟಾಗಿ ಗ್ರಾಮ ಪಂಚಾಯತಿಯಿಂದ ಹೆಸ್ಕಾಂ ಇಲಾಖೆಗೆ ವಿದ್ಯುತ್ ಬಿಲ್ ಕಟ್ಟಿ ತೆಗ್ಗಿಹಳ್ಳಿ ಆಸರೆ ಮನೆಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿರುವುದು ಜನಮೆಚ್ಚುಗೆಗೆ ಕಾರಣವಾಗಿದೆ.
ಹೆಸ್ಕಾಂ ಇಲಾಖೆಗೆ ಅನುದಾನ ಕಟ್ಟಿ ಆಸರೆ ಮನೆಗಳಿಗೆ ಪ್ರತ್ಯೇಕ ವಿದ್ಯುತ್ ಪರಿವರ್ತಕ ಅಳವಡಿಸಿ, ನಿರಂತರ ಜ್ಯೋತಿ ಸೌಲಭ್ಯ ಒದಗಿಸಿಕೊಟ್ಟಿರುವುದು ಎಲ್ಲರ ಶ್ಲಾಘನೆಗೆ ಕಾರಣವಾಗಿದೆ. ನಿರಂತರ ಜ್ಯೋತಿ ವಿದ್ಯುತ್‌ಗಾಗಿ ಅಳವಡಿಸಿದ ವಿದ್ಯುತ್ ಪರಿವರ್ತಕಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲು ಸಣ್ಣತಂಗಿ ಚಾಲನೆ ನೀಡಿ, ಆಸರೆ ಮನೆಗಳಿಗೆ ನಿರಂತರ ವಿದ್ಯುತ್ ಅನುಕೂಲವಾಗುವಂತೆ ಅನುಕೂಲ ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಶೋಕ ಹೊನವಾಡ, ಅಧ್ಯಕ್ಷ ಮಲ್ಲು ಸಣ್ಣತಂಗಿ, ಅಶೋಕಗೌಡ ಬಿರಾದಾರ, ನಿಂಗಣ್ಣ ಹಿರೇಪೂಜಾರಿ, ನಬಿಲಾಲ್ ಮುಜಾವರ, ಗುರು ಇಬ್ರಾಹಿಂಪೂರ, ಮಲ್ಲು ಬಿರನಳ್ಳಿ, ಮಕ್ಬುಲ್ ಮುಜಾವರ, ಕರೆಪ್ಪ ಹಿರೆಪೂಜಾರಿ, ಮಲ್ಲಿಕ ಕೋರೆ, ರಾಘವೇಂದ್ರ ಹೊಸಮನಿ, ಉಮರ್ ಮುಜಾವರ, ಪುಂಡು ಕೊರೆ, ಅಭಿಷೇಕ ಜಮಾದಾರ, ಬಸವರಾಜ ಭಜಂತ್ರಿ, ಮೌಳ ಮುಜಾವರ ಮೊದಲಾದವರು ಇದ್ದರು.