ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದ್ದರು. ಈಗಲೂ ಕೂಡ ನಾವು ಅದನ್ನೇ ಬಯಸುತ್ತೇವೆ. ರಾಜಕೀಯವಿಲ್ಲದೆ ಪಾರದರ್ಶಕವಾಗಿ ಆಗಬೇಕು. ನಮ್ಮ ಪಕ್ಷದ ವರಿಷ್ಠರು ಯಾವ ಸ್ಟ್ಯಾಂಡ್ ತಗೋಳ್ತಾರೆ. ಅದರ ಮೇಲೆ ವಿಚಾರ ನಿಂತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದ್ದರು. ಈಗಲೂ ಕೂಡ ನಾವು ಅದನ್ನೇ ಬಯಸುತ್ತೇವೆ. ರಾಜಕೀಯವಿಲ್ಲದೆ ಪಾರದರ್ಶಕವಾಗಿ ಆಗಬೇಕು. ನಮ್ಮ ಪಕ್ಷದ ವರಿಷ್ಠರು ಯಾವ ಸ್ಟ್ಯಾಂಡ್ ತಗೋಳ್ತಾರೆ. ಅದರ ಮೇಲೆ ವಿಚಾರ ನಿಂತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಒನ್ ನೇಷನ್ ಒನ್ ಎಲೆಕ್ಷನ್ ವಿಷಯಲ್ಲಿ ದಕ್ಷಿಣ ಭಾರತಕ್ಕೆ ನಷ್ಟ ಆಗಬಾರದೆಂಬುದು ನಮ್ಮ ಪಕ್ಷದ ನಿಲುವುವಾಗಿದೆ. ಉತ್ತರ ಹಿಂದುಸ್ತಾನ ಮಾಡಿದರೆ ನಮ್ಮ ಪ್ರಾಮುಖ್ಯತೆ ಏನೂ ಉಳಿಯುವುದಿಲ್ಲ. ಯಾರೇ ಆಗಲಿ ನಮ್ಮ ಪಕ್ಷಕ್ಕೆ ಬರಬಹುದು, ನಮ್ಮ ಸಂಖ್ಯೆ ಕೂಡ ಹೆಚ್ಚಾಗಬೇಕೆಂಬುದು ನಮ್ಮ ಮೊದಲ ಆದ್ಯತೆಯಾಗಿದೆ. ಒನ್ ನೇಷನ್ ಒನ್ ಎಲೆಕ್ಷನ್ ಜಾರಿ ಆದರೆ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ವರ್ಷ ಹೆಚ್ಚುವರಿ ಅವಧಿ ಸಿಗುತ್ತದಲ್ಲ ಎಂಬ ಪ್ರಶ್ನೆಗೆ ಸಿಗಬಹುದು ಅದು ಬೋನಸ್, ಬಂಪರ್ ಅದು ಎಂದು ಸತೀಶ ಜಾರಕಿಹೊಳಿ ಹೇಳಿದರು.

ಪ್ರತಿಭಟನೆ ದೊಡ್ಡ ಪ್ರಮಾಣದಲ್ಲಿ ಆಗಲಿಲ್ಲ:ಬಸವಣ್ಣನವರ ಬಗ್ಗೆ ರವಿ ಹಂಜ್ ವಿವಾದಾತ್ಮಕ ಲೇಖನ ಪ್ರಕಟಿಸಿರುವ ವಿಷಯದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ, ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಸಣ್ಣ ಪ್ರಮಾಣದಲ್ಲಿ ಆಗಿದೆ. ಎಲ್ಲರೂ ಈ ಹೋರಾಟಕ್ಕೆ ಕೈಜೋಡಿಸಬೇಕು. ಕೇವಲ ಲಿಂಗಾಯತರಷ್ಟೇ ಅಲ್ಲದೆ ಬೇರೆ ಸಮುದಾಯದವರು ಪ್ರತಿಭಟನೆಯಲ್ಲಿ ಭಾಗಿಯಾಗಬೇಕು. ಬಸವಣ್ಣನವರ ಬಗ್ಗೆ ತಿರುಚಿ ಬರೆಯುವರಿಗೆ, ವಿವಾದಾತ್ಮಕವಾಗಿ ಮಾತನಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವರ್ಷಕ್ಕೆ ಒಂದು ಸಾರಿ ಹಬ್ಬ, ಹುಣ್ಣಿಮೆ ಬಂದಂಗೆ:

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ ಸಚಿವ ಸತೀಶ ಜಾರಕಿಹೊಳಿ, ಇದು ಪ್ರತಿ ವರ್ಷಕ್ಕೆ ಒಂದು ಬಾರಿ ಹಬ್ಬ, ಹುಣ್ಣಿಮೆ ಬಂದಂಗೆ ಆ ವಿಷಯ ಬರುತ್ತದೆ. ಬಾಲಚಂದ್ರ ಜಾರಕಿಹೊಳಿ ಕೂಡ ಪ್ರತ್ಯೇಕ ರಾಜ್ಯದ ಬಗ್ಗೆ ಸಹಮತ ವ್ಯಕ್ತಪಡಿಸಿದ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿ, ಹೇಳಿರಬಹುದು ಹಿಂದೆ ಉಮೇಶ ಕತ್ತಿ ಅವರು ಹೇಳುತ್ತಿದ್ದರು. ನಡಹಳ್ಳಿ ಹೇಳುತಿದ್ದರು ಅವರವರ ಇಚ್ಛೆ. ಅದು ಅವರ ವೈಯಕ್ತಿಕ ವಿಚಾರ ಎಂದರು.

ಬೆಳಗಾವಿ ಜಿಲ್ಲೆ ವಿಭಜನೆ ಅದು ಆಗಬೇಕು. ಅದಕ್ಕೆ ನಮ್ಮ ಸಹಮತ ಇದೆ. ಅದರಲ್ಲಿ ಯಾವುದೇ ವಿಬಾದ ಇಲ್ಲ. ಅದನ್ನು ಸರ್ಕಾರ ಮಾಡಬೇಕು. ಅದಕ್ಕೆ ನಮ್ಮ ಸಹಮತ ಇದೆ ಎಂದು ಹೇಳಿದರು.

ಬಸವಣ್ಣನವರ ಬಗ್ಗೆ ಕೇವಲ ಜಯಂತಿ ಭಾಷಣಕ್ಕೆ ಮಾತ್ರ ಸೀಮಿತ ಆಗಬಾರದು, ಎಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕು. ಬಸವಣ್ಣ ಒಂದೇ ಜಾತಿ, ಧರ್ಮಕ್ಕೆ ಸೇರಿದವರಲ್ಲ ಎಲ್ಲರಿಗೂ ಸೇರಿದವರು. ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ಮಾತಾಡ್ತಾರೆ, ಹಾಗೇನಿಲ್ಲ.

- ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರು