ಪ್ರಮುಖ ಖಾತೆ ಹೊಂದಲು ಕ್ಷೇತ್ರ ಮತದಾರರು ಕಾರಣ-ಸಚಿವ ಜೋಶಿ

| Published : Mar 18 2024, 01:48 AM IST

ಸಾರಾಂಶ

ಕಳೆದ 3 ಬಾರಿ ಈ ಭಾಗದಲ್ಲಿ ನಾನು ಲೋಕಸಭೆ ಪ್ರತಿನಿಧಿಸಿದ್ದೇನೆ. ಮೂರು ಬಾರಿಯೂ ನನಗೆ ಈ ಭಾಗದ ಜನರು ಬಹು ಅಂತರ ಮತ ನೀಡಿದ್ದೀರಿ, ನಿಮ್ಮ ಆಶೀರ್ವಾದದಿಂದ ದೇಶದ ಮೂರು ಪ್ರಮುಖ ಖಾತೆ ಮೋದಿ ಅವರು ನೀಡಿದರು. ಅದಕ್ಕೆ ನೀವೇ ಕಾರಣ ಎಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಹಾವೇರಿ: ಕಳೆದ 3 ಬಾರಿ ಈ ಭಾಗದಲ್ಲಿ ನಾನು ಲೋಕಸಭೆ ಪ್ರತಿನಿಧಿಸಿದ್ದೇನೆ. ಮೂರು ಬಾರಿಯೂ ನನಗೆ ಈ ಭಾಗದ ಜನರು ಬಹು ಅಂತರ ಮತ ನೀಡಿದ್ದೀರಿ, ನಿಮ್ಮ ಆಶೀರ್ವಾದದಿಂದ ದೇಶದ ಮೂರು ಪ್ರಮುಖ ಖಾತೆ ಮೋದಿ ಅವರು ನೀಡಿದರು. ಅದಕ್ಕೆ ನೀವೇ ಕಾರಣ ಎಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭವಿಷ್ಯಕ್ಕಾಗಿ, 75 ವರ್ಷದಲ್ಲಿ ದೇಶದ ಪರಿಸ್ಥಿತಿ ಏನು ಇತ್ತು ಎಂಬುದು ನಿಮಗೆ ಗೊತ್ತು. ಪ್ರಧಾನಿ ಮೋದಿ ಅವರು ಬಂದ ಬಳಿಕ ದೇಶದ ಭವಿಷ್ಯ ಜನರಿಗೆ ಕಾಣುತ್ತಿದೆ ಎಂದರು.

ದೇಶದಲ್ಲಿ ಭ್ರಷ್ಟಾಚಾರ ತಡೆಯಲು ನಾವು 5 ವರ್ಷ ತೆಗೆದುಕೊಂಡ್ವಿ, ದೇಶದಲ್ಲಿ ಎಷ್ಟು ಭ್ರಷ್ಟಾಚಾರ ಇತ್ತು ಅಂದ್ರೆ ದೇಶದ ಬ್ಯಾಂಕ್ ಮುಚ್ಚುವ ಸ್ಥಿತಿಗೆ ಬಂದಿದ್ದವು. ಪ್ರಧಾನಿ ಮೋದಿ ಅಂದು ಅವರು ಒಂದು ಯೋಚನೆ ಮಾಡಿದರು. ಬ್ಯಾಂಕ್‌ನಲ್ಲಿ ಕೋಟ್ಯಂತರ ಸಾಲ ಮಾಡಿ ಓಡಿ ಹೋದವರ ವಿರುದ್ಧ ಕಾನೂನು ತಂದಿದ್ದೇವೆ ಎಂದರು.

₹85 ಸಾವಿರ ಕೋಟಿ ನಷ್ಟದಲ್ಲಿ ಇರುವ ಬ್ಯಾಂಕ್‌ಗಳು ಇಂದು ಲಾಭದಲ್ಲಿವೆ. ದೇಶದ ಬ್ಯಾಂಕ್‌ಗಳು ₹1 ಲಕ್ಷ 500 ಸಾವಿರ ಕೋಟಿಯಷ್ಟು ಲಾಭದಲ್ಲಿವೆ. ದೇಶದಲ್ಲಿ ಇರುವ ಜನರಿಗೆ 5 ಕೆಜಿ ಅಕ್ಕಿ ನೀಡಿದ್ದು ನಾವು, ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು. ಮಾನ ಮರ್ಯಾದೆ ಈ ಕಾಂಗ್ರೆಸ್‌ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರದ ಅಕ್ಕಿ ಮೇಲೆ ತಮ್ಮ ಭಾವಚಿತ್ರವನ್ನು ಹಾಕ್ತಾರೆ. ಸುಳ್ಳು ಹೇಳುವ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಎಂದು ಜೋಶಿ ವಾಗ್ದಾಳಿ ನಡೆಸಿದರು.

ಭಯೋತ್ಪಾದನೆ ಮಾಡ್ತಿದ್ದ ಪಾಕಿಸ್ತಾದ ಒಳಗೆ ಹೊಕ್ಕು ಹೊಡದ್ವಿ, ಪಾಕಿಸ್ತಾನ ಭಾರತದ ಮೇಲೆ ಬಾಂಬ್ ಹಾಕಿದ್ರೆ ಮೊದಲು ಮೇಣಬತ್ತಿ ಹಚ್ಚುತ್ತಿದ್ರು, ಮೋದಿ ಸರ್ಕಾರ ಬಂದ ಮೇಲೆ ಎಟಿಗೆ ಎದುರೇಟು ನೀಡಿದೆ ಎಂದರು.

ಶೇ. 80ರಷ್ಟು ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎಂದು ಮೋದಿ ಅವರು ಹೇಳಿದ್ದಾರೆ. ಬಡತನ ಹೋಗಬೇಕು ಅಂದ್ರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ನನ್ನ ಕ್ಷೇತ್ರದ ಪ್ರತಿ ಮಕ್ಕಳು ಮುಂದಿನ 5 ವರ್ಷದಲ್ಲಿ ನೆಲದ ಮೇಲೆ ಕುಳಿತು ಪಾಠ ಕೇಳದಂತೆ ನಾನು ಮಾಡ್ತೇನೆ. ಹೈಟೆಕ್ ಶಿಕ್ಷಣ ನನ್ನ ಕ್ಷೇತ್ರದ ಮಕ್ಕಳು ಪಡೆಯಬೇಕು ಎಂದರು.

ಮೂರನೇ ಬಾರಿ ಶಿಗ್ಗಾಂವಿ ಜನತೆ ಬೊಮ್ಮಾಯಿ ಅವರಿಗೆ ಆಶೀರ್ವಾದ ಮಾಡಿದ್ದೀರಿ, ಸಿಎಂ ಸ್ಥಾನದಲ್ಲಿ ಕೂತರು, ಕ್ಷೇತ್ರಕ್ಕೆ ಅವರು ತುಂಬಾ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಎಲ್ಲ ಸೇರಿ ಮತ್ತೊಮ್ಮೆ ಮೋದಿಗಾಗಿ ದುಡಿಯೋಣ, ನೀವು ತಲೆತಗ್ಗಿಸುವಂತೆ ಕೆಲಸ ಮಾಡುವುದಿಲ್ಲ ಎಂದು ನಾನು 2009ರಲ್ಲಿ ಹೇಳಿದ್ದೆ, ಹಾಗೇ ನಾನು ಕಲ್ಲಿದಲು ಸಚಿವನಾಗಿ ಕೆಲಸ ಮಾಡಿದೆ. ಕಲ್ಲಿದ್ದಲು ಕಪ್ಪು ಆದರೂ ನನ್ನ ರಾಜಕೀಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದು ಸಮರ್ಥಿಸಿಕೊಂಡರು.