ಮುಧೋಳಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥ

| Published : Feb 08 2024, 01:36 AM IST

ಸಾರಾಂಶ

ಭಾರತದ ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಎಲ್ಲ ಜಾತಿ ಧರ್ಮಗಳು ತಮ್ಮ ಜಾತಿಗಳನ್ನು ಬಿಟ್ಟು ನಾವೆಲ್ಲರೂ ಶಿಕ್ಷಣ ಉದ್ಯೋಗದಲ್ಲಿ ಸಮಾನರು ಮತ್ತು ಸಾರ್ವಜನಿಕರಲ್ಲಿ ಎಲ್ಲರೂ ಅಣ್ಣ ತಮ್ಮಂದಿರಾಗಿ ಬದುಕಬೇಕು.

ಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಆಗಮಿಸಿತು.ಗ್ರಾಮಸ್ಥರು ಸಕಲ ವಾದ್ಯಮೇಳ ಜೊತೆ ಮಹಿಳೆಯರು ಆರತಿ ತಟ್ಟೆಯಿಂದ ಬೆಳಗುವ ಮೂಲಕ ಅದ್ಧೂರಿಯಿಂದ ಸ್ವಾಗತಿಸಿಕೊಂಡು ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿದರು.ಸಮಾಜ ಕಲ್ಯಾಣ ಅಧಿಕಾರಿ ವಿ.ಕೆ. ಬಡಿಗೇರ, ಯುವ ಮುಖಂಡ ಚಂದ್ರು ದೇಸಾಯಿ ಮಾತನಾಡಿ, ಭಾರತದ ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಎಲ್ಲ ಜಾತಿ ಧರ್ಮಗಳು ತಮ್ಮ ಜಾತಿಗಳನ್ನು ಬಿಟ್ಟು ನಾವೆಲ್ಲರೂ ಶಿಕ್ಷಣ ಉದ್ಯೋಗದಲ್ಲಿ ಸಮಾನರು ಮತ್ತು ಸಾರ್ವಜನಿಕರಲ್ಲಿ ಎಲ್ಲರೂ ಅಣ್ಣ ತಮ್ಮಂದಿರಾಗಿ ಬದುಕಬೇಕು ಎಂದರು.ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಶಿಫಾ ಅಬ್ದುಲ್‌ರಜಾಕ್ ಹಿರೇಮನಿ ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಓದಿ ಎಲ್ಲರ ಗಮನ ಸೆಳೆದಳು. ಬಳಿಕ ಎಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಂವಿಧಾನದ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ನಂತರ ಕರಮುಡಿ ಹಿರೇಮ್ಯಾಗೇರಿ ಸಂಕನೂರು ಬಳೂಟಗಿ ಗ್ರಾಮಕ್ಕೆ ಸಂಚರಿಸಿ, ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಹುಸೇನಬಿ ಹಿರೇಮನಿ, ಗ್ರಾಪಂ ಮಾಜಿ ಅಧ್ಯಕ್ಷೆ ಭಾರತಿ ಶಿವಾನಂದ ಅರಬರ, ಪಿಡಿಒ ವೀರಭದ್ರಗೌಡ ಮೂಲಿಮನಿ, ಗ್ರಾಮ ಲೆಕ್ಕಾಧಿಕಾರಿ ದುರ್ಗಪ್ಪ ಹೊಸಮನಿ, ಯಮನೂರಪ್ಪ ಅರಬರ, ಭೀಮಣ್ಣ ಹವಳಿ, ಕರಮುಡಿ, ಹುಸೇನ್ ಮೊತೇಖಾನ್, ಹುಸೇನಸಾಬ್ ಹಿರೇಮನಿ, ಎಲ್ಲಪ್ಪ ಹುನಗುಂದ, ಇಮಾಮಸಾಬ ಹಿರೇಮನಿ, ತಿರಣಪ್ಪ ತಳವಾರ, ಅಮರೇಶ್ ಹುನುಗುಂದ, ಮಂಜುನಾಥ್ ಮುರುಡಿ, ಶಿವಾನಂದ ಅರಬರ, ಛತ್ರೆಪ್ಪ ಚಲವಾದಿ, ವೀರಭದ್ರಪ್ಪ ನಿಡಗುಂದಿ, ಶಿವಪ್ಪ ಚಲವಾದಿ, ನಾಗಪ್ಪ, ಮುದುಕಪ್ಪ ಹರಿಜನ, ಮುತ್ತಪ್ಪ ಚಲವಾದಿ, ಮುತ್ತಪ್ಪ, ಮುದುಕಣ್ಣಪ್ಪ ಹರಿಜನ, ಲಕ್ಷ್ಮಪ್ಪ, ಚೆನ್ನಮ್ಮ ಶಾನುಭೋಗರ್, ಈರಮ್ಮ ಮಂಡಲಗೇರಿ, ಲಕ್ಷ್ಮಿ ಚಲವಾದಿ ಇದ್ದರು.