ಸಾರಾಂಶ
ಸಿಂದಗಿ ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ತಬ್ದ ಚಿತ್ರದ ಮೆರವಣಿಗೆ ಉತ್ಸಾಹದಿಂದ ನಡೆಯಿತು.
ಸಿಂದಗಿ: ಸಿಂದಗಿ ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ತಬ್ದ ಚಿತ್ರದ ಮೆರವಣಿಗೆ ಉತ್ಸಾಹದಿಂದ ನಡೆಯಿತು. ಪಟ್ಟಣದ ಶ್ರೀ ಬಸವೆಶ್ವರ ವೃತ್ತಕ್ಕೆ ಆಗಮಿಸಿದ ಜಾಥಾ ಸ್ತಬ್ದ ಚಿತ್ರವನ್ನು ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಸ್ವಾಗತಿಸಿದರು. ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ ಮೂರ್ತಿಗೆ ಹಾಗೂ ಸಂವಿಧಾನಕ್ಕೆ ಪೂಜೆ ಸಲ್ಲಿಸಿದರು.ಪಟ್ಟಣದ ವಿವಿಧ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೊಂಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಶ್ರೀ ಬಸವೇಶ್ವರ ವೃತ್ತದಿಂದ ಮೆರವಣಿಗೆ ಸಾಗಿ ಶ್ರೀ ಸ್ವಾಮಿವಿವೇಕಾನಂದ ವೃತ್ತದ ಎಡಭಾಗದ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತ, ನಂತರ ಅಂಬಿಗರ ಚೌಡಯ್ಯ ವೃತ್ತ, ಅಂಬೇಡ್ಕರ ವೃತ್ತ, ಟಿಪ್ಪು ವೃತ್ತದ ಮೂಲಕ ಅಂಬೇಡ್ಕರ ಭವನಕ್ಕೆ ತೆರಳಿತು. ಮಾರ್ಗ ಮಧ್ಯದಲ್ಲಿ ವಿವಿಧ ಶಾಲಾ ಮಕ್ಕಳ ಹಾಗೂ ಕಲಾತಂಡಗಳ ಸಮೂಹ ನ್ಯತ್ಯ, ಕೋಲಾಟ, ದೇಶ ಭಕ್ತಿಗೀತೆಗಳ ಕುಣಿತ ಗಮನ ಸೆಳೆದವು.
ರಾಜಶೇಖರ ಕೂಚಬಾಳ, ರಾಜಶೇಖರ ಚೌರ, ವಾಯ್.ಸಿ.ಮಯೂರ, ಸಿಡಿಪಿಒ ಶಂಭುಲಿಂಗ ಹಿರೇಮಠ, ಪರುಶುರಾಮ ಕೂಚಬಾಳ, ಅಶೋಕ ಸುಲ್ಪಿ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ಬಸವರಾಜ ಯರನಾಳ, ಮಹಾವೀರ ಸುಲ್ಪಿ, ರಜತ ತಾಂಬೆ, ಬಾಲಕೃಷ್ಣ ಚಲವಾದಿ, ರಮೇಶ ನಡುವಿನಕೇರಿ, ಮೀಲಿಂದ ಮಣೂರ, ಶಿವು ಆಲಮೇಲ, ಶಬ್ಬೀರ ಬೈರಾಮಡಗಿ, ಮೈಬೂಬ ವಾಲಿಕರ, ಸುನಂದಾ ಯಂಪೂರೆ, ಸಾಯಬಣ್ಣ ಪುರದಾಳ, ಜೈಭೀಮ ತಳಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.