ಸಾರಾಂಶ
ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಮಾನ್ವಿ ತಾಲೂಕನ್ನು ಪ್ರವೇಶಿಸಿದ್ದು, ತಾಲೂಕಿನ ಕುರ್ಡಿ ಗ್ರಾಪಂನಲ್ಲಿ ಮಹಿಳೆಯರು, ಶಾಲಾ ಮಕ್ಕಳಿಂದ ಕಳಸ ಕುಂಭಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಮಾನ್ವಿ: ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಮಾನ್ವಿ ತಾಲೂಕನ್ನು ಪ್ರವೇಶಿಸಿದ್ದು, ತಾಲೂಕಿನ ಕುರ್ಡಿ ಗ್ರಾಪಂನಲ್ಲಿ ಮಹಿಳೆಯರು, ಶಾಲಾ ಮಕ್ಕಳಿಂದ ಕಳಸ ಕುಂಭಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ರಾಯಚೂರು ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಮುಗಿಸಿ, ಮಾನವಿ ತಾಲೂಕಿನ ಕುರ್ಡಿ ಗ್ರಾಪಂನಿಂದ ತಾಲೂಕು ವ್ಯಾಪ್ತಿಯ ಸಂಚಾರವನ್ನು ಆರಂಭಿಸಿತು. ಕುರ್ಡಿ ಗ್ರಾಪಂ, ಅರೋಲಿ, ಗೋರ್ಕಲ್, ಸುಂಕೇಶ್ವರ, ಕಪಗಲ್ ಗ್ರಾಪಂನಲ್ಲಿ ಸಂಚರಿಸಿತು.ನಂತರ ಕಪಗಲ್ ಗ್ರಾಪಂನಿಂದ ನೀರಮಾನ್ವಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಅತ್ಯಂತ ಅದ್ದೂರಿಯಿಂದ ಸ್ವಾಗತಿಸಿ, ಗ್ರಾಪಂ ಅಧಿಕಾರಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಶಾಲಾ ಮಕ್ಕಳು, ಶಿಕ್ಷಕರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸ್ತಬ್ಧಚಿತ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ, ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸಿ ಸಂವಿಧಾನ ಪೀಠಿಕೆ ವಾಚನ ಮಾಡಿದರು.
ಗ್ರಾಮದಲ್ಲಿ ಎಲ್.ಇ.ಡಿ ಪರದೆಯ ಮೂಲಕ ಸಂವಿಧಾನದ ಕುರಿತು ವಿಡಿಯೋ ಕ್ಲಿಪಿಂಗ್‌ಗಳನ್ನು ಪ್ರದರ್ಶಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.