ಸ್ವಾತಂತ್ರ್ಯ ಪ್ರತಿವ್ಯಕ್ತಿಯ ಸ್ವಹಿಚ್ಚಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಡಾ.ಅಂಬೇಡ್ಕರ್ ತಾವು ಹುಟ್ಟಿ ಬೆಳೆದ ರೀತಿ ಮತ್ತು ಅನುಭವ ತೆಗೆದುಕೊಂಡು ಓರ್ವ ಪ್ರಜೆ ಹೇಗೆ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು ಎನ್ನುವುದನ್ನು ಅಧ್ಯಯನದ ಮೂಲಕ ಸಂವಿಧಾನವನ್ನು ರಚನೆ ಮಾಡಿದ್ದಾರೆ.

ಮದ್ದೂರು:

ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವ ಜನಪ್ರತಿನಿಧಿಗಳ ಕ್ರಮ ವಿರೋಧಿಸಿ ಗ್ರಾಮ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಸಂವಿಧಾನ ದಿನ ಆಚರಿಸಿದರು.

ಧರಣಿ ಸತ್ಯಾಗ್ರಹ 340ನೇ ದಿನಕ್ಕೆ ಕಾಲಿರಿಸಿದ್ದು, ಈ ವೇಳೆ ಮಾತನಾಡಿದ ರೈತಪರ ಹೋರಾಟಗಾರ್ತಿ ಸುನಂದ ಜಯರಾಮ್, ಸಂವಿಧಾನ ರಚನೆಯಾಗಿ 70 ವರ್ಷಗಳು ಸಂದಿವೆ. ಮಹಾತ್ಮ ಗಾಂಧಿ ಸೇರಿದಂತೆ ಅನೇಕರ ಹಿರಿಯರ ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದರು.

ಸ್ವಾತಂತ್ರ್ಯ ಪ್ರತಿವ್ಯಕ್ತಿಯ ಸ್ವಹಿಚ್ಚಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಡಾ.ಅಂಬೇಡ್ಕರ್ ತಾವು ಹುಟ್ಟಿ ಬೆಳೆದ ರೀತಿ ಮತ್ತು ಅನುಭವ ತೆಗೆದುಕೊಂಡು ಓರ್ವ ಪ್ರಜೆ ಹೇಗೆ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು ಎನ್ನುವುದನ್ನು ಅಧ್ಯಯನದ ಮೂಲಕ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದರು.

ಮುಖಂಡರಾದ ಜಿ.ಟಿ.ಚಂದ್ರಶೇಖರ್, ಮೋಹನ್, ದೇವೇಗೌಡ, ಜಯರಾಮ್, ಗುರುಮೂರ್ತಿ, ಶಾಂತಮ್ಮ, ಅನುಪಮಾ , ನಾಗಮ್ಮ, ಆಶಾ, ಕೆಂಪಾಚಾರಿ ಮತ್ತಿತರರು ಭಾಗವಹಿಸಿದ್ದರು.ಭಾರತದ ಸಂವಿಧಾನವನ್ನು ವಿಶ್ವದ ಹಲವು ದೇಶಗಳು ಗೌರವಿಸುತ್ತಿವೆ: ಯದುವೀರ್ ಒಡೆಯರ್

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಭಾರತದ ಸಂವಿಧಾನ ವಿದೇಶಗಳಿಗೂ ಮಾದರಿಯಾಗಿ ವಿಶ್ವದ ಹಲವು ದೇಶಗಳು ಗೌರವಿಸುತ್ತಿವೆ ಎಂದು ರಾಜವಂಶಸ್ಥ ಹಾಗೂ ಮೈಸೂರು, ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಬಿಜೆಪಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ತನಾಡಿದರು.ಡಾ.ಅಂಬೇಡ್ಕರ್ ಅವರು ಒಂದು ಜನಾಂಗಕ್ಕೆ ಸೀಮಿತರಲ್ಲದೆ ಪ್ರತಿಯೊಂದು ಜನಾಂಗಕ್ಕೆ ಸೇರಿದವರು. ಅವರು ರಚಿಸಿದ ಸಂವಿಧಾನ ಜ್ಯಾತ್ಯತೀತವಾಗಿ ಪ್ರತಿಯೊಬ್ಬರಿಗೂ ಅಗತ್ಯವಿದೆ. ಅವರ ಸಂವಿಧಾನದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯುಯು ವಿಶ್ವಾಸವಿದೆ. ದೇಶ ವಿದೇಶದಲ್ಲೂ ನಮ್ಮ ಸಂವಿಧಾನವನ್ನು ಗೌರವಿಸುವುದರಿಂದ ವಿಶ್ವದಲ್ಲಿ ಭಾರತದ ಸಂವಿಧಾನವೇ ಮಾದರಿಯಾಗಿದೆ ಎಂದರು.

ಈ ವೇಳೆ ಬಿಜೆಪಿ ಮುಖಂಡ ಇಂಡವಾಳು ಎಸ್.ಸಚ್ಚಿದಾನಂದ, ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್, ಜಿಲ್ಲಾ ಉಪಾಧ್ಯಕ್ಷ ಟಿ. ಶ್ರೀಧರ್, ನಗರ ಅಧ್ಯಕ್ಷ ಸುಧಾಕರ್, ಹೇಮಂತ್ ಕುಮಾರ್, ಉಮೇಶ್ ಕುಮಾರ್, ಕಿರಣ್ ಕುಮಾರ ಸಿಂಗ್, ಸಾಮೀಯಾನ ಪುಟ್ಟರಾಜು, ಯತಿರಾಜು, ಪುರಸಭಾ ಮಾಜಿ ಸದಸ್ಯರಾದ ಶಿವು, ಎಸ್. ಪ್ರಕಾಶ್, ಎಸ್.ಟಿ. ರಾಜು, ಜಯಲಕ್ಷ್ಮಮ್ಮ, ತಾಲೂಕು ಬಿಜೆಪಿ ಅಧ್ಯಕ್ಷೆ ಮಾನಸ, ಪ್ರಭಾಕರ್ ಗುಪ್ತ, ರಘು ಕಂಠೀ, ರಾಮಕೃಷ್ಣ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.