ಮುದ್ದೇನೇರಳೇಕೆರೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಸಂವಿಧಾನ ದಿನ ಆಚರಣೆ

| Published : Nov 29 2024, 01:03 AM IST

ಮುದ್ದೇನೇರಳೇಕೆರೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಸಂವಿಧಾನ ದಿನ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಸಂವಿಧಾನದ ಪೀಠಿಕೆಯಲ್ಲಿನ ಸಮತವಾದ, ಜಾತ್ಯತೀತ, ಸಮಾಜವಾದಿ ಧರ್ಮ ನಿರಪೇಕ್ಷಗಳ ಅರ್ಥ ಮತ್ತು ಸಂವಿಧಾನದ ಮಹತ್ವವನ್ನು ಶಿಕ್ಷಣ ಸಂಯೋಜಕಿ ಹೇಮಲತ ತಿಳಿಸಿದರು. ಮಧುಗಿರಿಯಲ್ಲಿ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮಕ್ಕಳಿಗೆ ಸಂವಿಧಾನದ ಪೀಠಿಕೆಯಲ್ಲಿನ ಸಮತವಾದ, ಜಾತ್ಯತೀತ, ಸಮಾಜವಾದಿ ಧರ್ಮ ನಿರಪೇಕ್ಷಗಳ ಅರ್ಥ ಮತ್ತು ಸಂವಿಧಾನದ ಮಹತ್ವವನ್ನು ಶಿಕ್ಷಣ ಸಂಯೋಜಕಿ ಹೇಮಲತ ತಿಳಿಸಿದರು.

ಮಧುಗಿರಿ ಕಸಬಾ ಮುದ್ದೇನೇರಳೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನವನ್ನು ಪ್ರತಿ ವರ್ಷದಂತೆ ಈ ವರ್ಷವು ನ.26 ರಂದು ಸಂವಿಧಾನ ದಿನ ಆಚರಿಸುವ ಜೊತೆಗೆ ಈ ದಿನ ಶಿಕ್ಷಣ ಇಲಾಖೆ ಮಾರ್ಗದರ್ಶನದಂತೆ ಸಮಾಜ ಮತ್ತು ವಿಜ್ಞಾನದ ವಿಷಯದ ದಿನವಾಗಿ ಸಹ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಶಾಲಾ ಶಿಕ್ಷಕ ಮಂಜುನಾಥ್‌ ಮಾತನಾಡಿ, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಮಹನೀಯರ ಭಾವಚಿತ್ರ ಮತ್ತು ಭೂಪಟಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಮೂಲಕ ಶಾಲಾ ಮಕ್ಕಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌,ಮಹಾತ್ಮ ಗಾಂಧಿ,ನೆಹರು,ಕಿತ್ತೂರು ರಾಣಿ ಚನ್ನಮ್ಮ,ಜಾನ್ಸಿ ರಾಣಿ ಲಕ್ಷ್ಮೀಬಾಯಿ,ಒನಕೆ ಓಬವ್ವ,ಟಿಪ್ಪು ಸುಲ್ತಾನ್‌,ಕೆಂಪೇಗೌಡ,ಕನಕದಾಸರು ಸೇರಿಂತೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹಾತ್ಮರ ದಾರ್ಶನಿಕ ಮತ್ತು ಸಮಾಜ ಸುಧಾರಕರ ವೇಶ ಭೂಷಣಗಳನ್ನು ಮಕ್ಕಳು ತೊಟ್ಟು ಪಾತ್ರಭಿನಯ ಪ್ರದರ್ಶಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಬಿಐಇಆರ್‌ಟಿ ದಾಸಣ್ಣ ಮಾತನಾಡಿ, ಮಕ್ಕಳು ಈ ಎಲ್ಲರ ಆದರ್ಶ- ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರುವಂತೆ ಸಲಹೆ ನೀಡಿದರು.

ಪೋಷಕರು ಮತ್ತು ಗ್ರಾಮಸ್ಥರು ಕಾರ್ಯಕ್ರಮ ವೀಕ್ಷಿಸಿ ಶಿಕ್ಷಕರನ್ನು ಅಭಿನಂದಿಸಿದರು.ಮುಖ್ಯ ಶಿಕ್ಷಕಿ ನರಸಮ್ಮ,ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಮಂಜುನಾಥ್‌,ಶ್ರೀನಿವಾಸ್‌,ರೇಖಾ,ಮಮತಾಜ್‌ಬೇಗಂ,ನಾಗಶ್ರೀ ಸೇರಿದಂತೆ ಮಕ್ಕಳು ಇದ್ದರು.