ಸಂವಿಧಾನ ಈ ಪವಿತ್ರ ಗ್ರಂಥ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಕೈಬರಹದ ರೂಪದಲ್ಲಿದ್ದು, ಹಾಳಾಗದಂತೆ ಹೀಲಿಯಂ ಕವಚದಲ್ಲಿ ಸಂರಕ್ಷಿಸಿರುವುದು ವಿಶೇಷವಾಗಿದೆ. ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ವಿಶ್ವಭ್ರಾತೃತ್ವ ಸಾರುವ ಪವಿತ್ರ ಸಂವಿಧಾನದ ಸಾರಅರಿತರೆ ನಮ್ಮದೇಶ ಸುಭದ್ರ, ನೆಮ್ಮದಿಯ ನಾಡಾಗಿ ಸುಂದರ ಬದುಕು ಕಾಣಬಹುದಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಂವಿಧಾನದ ಆಶಯಗಳು ದೇಶದ ಸಮಗ್ರ ಅಭಿವೃದ್ಧಿ, ಶಾಂತಿಗೆ ಪೂರಕವಾದ ಅಂಶಗಳಾಗಿವೆ ಎಂದು ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲೆ ಎಂ.ಶಾಂತಿ ಹೇಳಿದರು.ಹೋಬಳಿಯ ಮಾದಾಪುರ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞಾವಿಧಿ ಬೋಧನೆ ಮಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನ ದಿನವನ್ನು ರಾಷ್ಟ್ರೀಯ ಕಾನೂನು ದಿನವಾಗಿದೆ ಎಂದರು.
ಈ ಪವಿತ್ರ ಗ್ರಂಥ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಕೈಬರಹದ ರೂಪದಲ್ಲಿದ್ದು, ಹಾಳಾಗದಂತೆ ಹೀಲಿಯಂ ಕವಚದಲ್ಲಿ ಸಂರಕ್ಷಿಸಿರುವುದು ವಿಶೇಷವಾಗಿದೆ. ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ವಿಶ್ವಭ್ರಾತೃತ್ವ ಸಾರುವ ಪವಿತ್ರ ಸಂವಿಧಾನದ ಸಾರಅರಿತರೆ ನಮ್ಮದೇಶ ಸುಭದ್ರ, ನೆಮ್ಮದಿಯ ನಾಡಾಗಿ ಸುಂದರ ಬದುಕು ಕಾಣಬಹುದಾಗಿದೆ ಎಂದರು.ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು ಹಾಗೂ 89 ತಿದ್ದುಪಡಿಗಳಿವೆ. ಸಂವಿಧಾನ ರಚನೆಯಾಗಲು 2 ವರ್ಷ 11ತಿಂಗಳು 18 ದಿನಗಳ ಕಾಲ ತೆಗೆದುಕೊಂಡು ಎಲ್ಲರ ಬಾಳಿನ ಬೆಳಕಾಗಿದೆ ಎಂದು ಹೇಳಿದರು.
ಹುಟ್ಟಿನಿಂದ ಸಾಯುವವರಿಗೆ ನಾವು ಕಾನೂನ ಗೌರವಿಸಿ, ಪಾಲಿಸಬೇಕಿದೆ. ಬದುಕುವ ಹಕ್ಕು, ಶಿಕ್ಷಣದ ಹಕ್ಕು, ಮಹಿಳಾ ಸ್ವಾತಂತ್ರ್ಯದ ಹಕ್ಕು ಹಿಡಿದು ಎಲ್ಲದಕ್ಕೂ ಒಂದೊಂದು ಕಾನೂನು ಇದೆ. ಕಾನೂನಿನ ರಕ್ಷಣೆಯಿಂದ ಎಲ್ಲರ ನೆಮ್ಮದಿ ಬದುಕು ಕಾಣುವಂತಾಗಿದೆ ಎಂದು ತಿಳಿಸಿದರು.ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಂಬೇಡ್ಕರ್ ಬಲು ದೊಡ್ಡ ಕೊಡುಗೆಯಾಗಿ ನೀಡಿದ್ದು, ಇಡೀ ವಿಶ್ವವೇ ನಮ್ಮ ಸಂವಿಧಾನವನ್ನು ಗೌರವಿಸುತ್ತಿರುವುದು ಹೆಮ್ಮೆಯಾಗಿದೆ ಎಂದು ಶ್ಲಾಘಿಸಿದರು.
ಇದೇ ವೇಳೆ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ರಾಘವೇಂದ್ರ, ಸಂಜೀವ್, ಧರಣೇಶ್, ಸೌಮ್ಯ, ಜಯಲಕ್ಷ್ಮೀ, ಸೌಮ್ಯ, ವೀಣಾ, ಲೀಲಾವತಿ, ಭೂಮಿಕಾ ಇದ್ದರು.